ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ 33,737 ಕೋಟಿ ಹೂಡಿಕೆ ಮಾಡಲಿರುವ ಗೂಗಲ್

|
Google Oneindia Kannada News

ಮುಂಬೈ, ಜುಲೈ 15: ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇ. 7.7ರಷ್ಟು ಪಾಲನ್ನು ಖರೀದಿಸಲು ಗೂಗಲ್ 33,737 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಿದೆ ಎಂದು ಅಧ್ಯಕ್ಷ ಮುಖೇಶ್ ಅಂಬಾನಿ ದೃಢಪಡಿಸಿದ್ದಾರೆ. 43 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಕೇಶ್ ಅಂಬಾನಿ ಗೂಗಲ್ ಹೂಡಿಕೆಯನ್ನು ಪ್ರಕಟಿಸಿದ್ದಾರೆ.

Recommended Video

China ಸೈನಿಕರಿಗೆ ಅವಮಾನ | Oneindia Kannada

ಗೂಗಲ್ ಕೆಲವು ದಿನಗಳ ಹಿಂದಷ್ಟೇ ಭಾರತಕ್ಕೆ 10 ಬಿಲಿಯನ್ ಡಾಲರ್ ಡಿಜಿಟಲ್ ನಿಧಿಯನ್ನು ಘೋಷಿಸಿತ್ತು. ಅದು ಅಸ್ತಿತ್ವದಲ್ಲಿರುವ ಕಂಪನಿಗಳಲ್ಲಿ ಹೂಡಿಕೆ ಮಾಡುವುದರ ಜೊತೆಗೆ ಕೃತಕ ಬುದ್ದಿಮತೆ ವಿಸ್ತರಿಸುವುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಜಾಗೃತಿಯನ್ನು ಹರಡುವುದಾಗಿದೆ.

ರಿಲಯನ್ಸ್ ಜಿಯೋ 12 ವಾರಗಳಲ್ಲಿ 13ನೇ ಜಾಗತಿಕ ಒಪ್ಪಂದ: ಅಮೆರಿಕಾದ ಮತ್ತೊಂದು ಕಂಪನಿಯಿಂದ ಪಾಲು ಖರೀದಿರಿಲಯನ್ಸ್ ಜಿಯೋ 12 ವಾರಗಳಲ್ಲಿ 13ನೇ ಜಾಗತಿಕ ಒಪ್ಪಂದ: ಅಮೆರಿಕಾದ ಮತ್ತೊಂದು ಕಂಪನಿಯಿಂದ ಪಾಲು ಖರೀದಿ

ಯುಎಸ್ ಚಿಪ್ ಮೇಕರ್ ಕ್ವಾಲ್ಕಾಮ್ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಹೂಡಿಕೆ ಮಾಡಿದ ಇತ್ತೀಚಿನ ಕಂಪನಿಯಾಗಿದೆ. ಕಳೆದ ಎರಡು ತಿಂಗಳಲ್ಲಿ ಜಿಯೋ ಸ್ಲೈಸ್ ಅನ್ನು ಸ್ವಾಧೀನಪಡಿಸಿಕೊಂಡ ಅನೇಕ ಹೂಡಿಕೆದಾರರಲ್ಲಿ ಒಬ್ಬರು.

Google To Invest Rs 33,737 Crore In Jio Platforms

ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ 2022 ರಲ್ಲಿ ಸುಮಾರು 850 ದಶಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಪಿಡಬ್ಲ್ಯೂಸಿ ಹೇಳಿದೆ, ಇದು 2017 ರಲ್ಲಿ 450 ಮಿಲಿಯನ್ ಆಗಿತ್ತು.

ಸರ್ಚ್ ಎಂಜಿನ್ ದೈತ್ಯ ಗೂಗಲ್ ಭಾರತದಲ್ಲಿ ಹುಡುಕಾಟ, ವಿಡಿಯೋ, ನಕ್ಷೆಗಳು ಮತ್ತು ಇಮೇಲ್‌ನಲ್ಲಿ ಪ್ರಾಬಲ್ಯ ಹೊಂದಿದೆ. ಆರ್‌ಐಎಲ್ ಅಧ್ಯಕ್ಷ ಮುಕೇಶ್ ಅಂಬಾನಿ ಎಲ್ಲಾ ಹೂಡಿಕೆದಾರರಿಗೆ ಕಂಪನಿಯ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು.

ಮುಕೇಶ್ ಅಂಬಾನಿ ಒಡೆತನದ ಆರ್‌ಐಎಲ್‌ನಲ್ಲಿ ಏಪ್ರಿಲ್ 22, 2020ರಿಂದ ಇಲ್ಲಿಯವರೆಗಿನ ಅವಧಿಯಲ್ಲಿ ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ, ಎಡಿಐಎ, ಟಿಪಿಜಿ ಹಾಗೂ ಎಲ್ ಕ್ಯಾಟರ್‌ಟನ್ ಇಂಟೆಲ್, ಕ್ವಾಲ್‌ಕಮ್ ಸೇರಿ ಮುಂಚೂಣಿ ಜಾಗತಿಕ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್ಸ್ 1.52 ಲಕ್ಷ ಕೋಟಿ ಬಂಡವಾಳ ಹರಿದುಬಂದಂತಾಗಿದೆ.

English summary
RIL Chairman Mukesh ambani confirmed that Google will invest over Rs 33,737 crore for a 7.7 per cent stake in Jio Platforms taking the string of investments well over Rs 152,000 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X