ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು, ಜಿ ಮೇಲ್ ನಲ್ಲೂ ನಗದು ವರ್ಗಾವಣೆ ಸುಲಭ ಸಾಧ್ಯ!

ಇತ್ತೀಚೆಗೆ, ಆ್ಯಂಡ್ರಾಯ್ಡ್ ಆ್ಯಪ್ ಗಳಲ್ಲಿ ನಗದು ವರ್ಗಾವಣೆಯು ಹೆಚ್ಚು ಪ್ರಚಲಿತಕ್ಕೆ ಬಂದ ಹಿನ್ನೆಲೆಯಲ್ಲಿ ಜಿ ಮೇಲ್ ಕಂಪನಿಯೂ ಆ್ಯಂಡ್ರಾಯ್ಡ್ ಫೋನುಗಳ ಮೂಲಕ ನಗದು ವರ್ಗಾವಣೆಗೆ ಅವಕಾಶ ನೀಡಿವೆ.

|
Google Oneindia Kannada News

ನವದೆಹಲಿ, ಮಾರ್ಚ್ 15: ಬಹುತೇಕರು ಮಿಂಚಂಚೆಗಾಗಿ ಬಳಸುವ ಜಿ ಮೇಲ್ ಮುಖೇನ ಶೀಘ್ರದಲ್ಲೇ ನಗದು ವರ್ಗಾವಣೆಯನ್ನು ಸುಲಭವಾಗಿ ಮಾಡುವ ಸೌಲಭ್ಯ ಸಿಗಲಿದೆ. ಆರಂಭದಲ್ಲಿ ಈ ಮಾದರಿಯ ನಗದು ವರ್ಗಾವಣೆಯು ಜಿ ಮೇಲ್ ಆ್ಯಂಡ್ರಾಯ್ಡ್ ಆ್ಯಪ್ ನಲ್ಲಿ ಮಾತ್ರ ಲಭ್ಯವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಅಂದಹಾಗೆ, ಇದು ವ್ಯಾಲ್ಯೂ ಆ್ಯಡೆಡ್ ಸರ್ವೀಸ್ ಆಗಿರಲಿದ್ದು, ಇದಕ್ಕಾಗಿಯೇ ವಿಶೇಷ ಆ್ಯಪ್ ಬಿಡುಗಡೆಗೊಳಿಸಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ. ಅಲ್ಲದೆ, ಹೊಸ ಆ್ಯಪ್ ಮೂಲಕ ಹಣ ವರ್ಗಾವಣೆಯು ಸಾಮಾನ್ಯವಾಗಿ ನಾವು ಇ ಮೇಲ್ ಕಳುಹಿಸುವಾಗ ಫೈಲ್ ಅಟ್ಯಾಚ್ ಮಾಡಿ ಕಳುಹಿಸುವಷ್ಟು ಸುಲಭವಾಗಿಯೇ ಹಣ ಕಳಿಸಬಹುದು ಅಥವಾ ಸ್ವೀಕರಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.

Google's Gmail for Android gets money transfer option

ಈ ಆ್ಯಪ್ ಅನ್ನು ಮೊಬೈಲ್ ಗಳಲ್ಲಿ ಅಥವಾ ಟ್ಯಾಬ್ ಗಳಲ್ಲಿ ಸಂಸ್ಥಾಪಿಸಿಕೊಂಡ ನಂತರ, ಆ್ಯಪ್ ತೆರೆಯಬೇಕು. ಆನಂತರ, ಅಲ್ಲಿ ಮೇಲೆ ಬರುವ ಆಯ್ಕೆಗಳಲ್ಲಿ ನಮ್ಮ ದೇಶದ ಕರೆನ್ಸಿ ಮಾದರಿಯ ಚಿಹ್ನೆಯನ್ನು (ಉದಾಹರಣೆಗೆ, ರುಪಾಯಿ, ಡಾಲರ್ ಇನ್ನಿತರೆ) ಆರಿಸಿ, ಆನಂತರ ನಾವು ಯಾರಿಗೆ ಹಣ ಕಳುಹಿಸಬೇಕೋ ಅವರ ಜಿಮೇಲ್ ಮಿಂಚಂಚೆ ವಿಳಾಸ ನಮೂದಿಸಿ, ಈ ಹಣದ ವ್ಯವಹಾರದ ಉದ್ದೇಶದ ಸಂಕ್ತಿಪ್ತ ವಿವರಣೆ ಹಾಕಿ, ಆನಂತರ ಕಳಿಸು (ಸೆಂಡ್ ಆಪ್ಷನ್) ಆಯ್ಕೆಯನ್ನು ಒತ್ತಿದರೆ ಹಣ ವರ್ಗಾವಣೆಯಾಗುತ್ತದೆ.

ಅಂದರೆ, ಹಣ ಕಳಿಸುವವರು ಮೊದಲೇ ಗೂಗಲ್ ವ್ಯಾಲೆಟ್ ನಲ್ಲಿ ಹಣ ತುಂಬಿರಬೇಕಿರುತ್ತದೆ.

ಮೇಲೆ ಹೇಳಿದಂತೆಯೇ, ಹಣ ಕಳಿಸುವುದರ ಜತೆಗೆ ಹಣ ಸ್ವೀಕರಿಸಲು, ಸಾಮಾನ್ಯವಾಗಿ ನಾವು ಮೇಲ್ ಕಂಪೋಸ್ ಮಾಡಿದಂತೆಯೇ ಮಿಂಚಂಚೆಯೊಂದನ್ನು ಕಂಪೋಸ್ ಮಾಡಿ ಸಂಬಂಧಿಗಳಿಗೆ, ಸ್ನೇಹಿತರಿಗೆ ಇಂತಿಷ್ಟು ಹಣಬೇಕೆಂದು ಮನವಿ ಮಾಡಿಕೊಳ್ಳಬಹುದು.

English summary
Just when Android Pay is beginning to gain ground outside developed markets, Google has released a new value-added money transfer feature to the Gmail app for Android.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X