ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ಡ್ರೈವ್ ಸ್ಟೋರೇಜ್ ಮಿತಿ 15 ಜಿಬಿ ಸೀಮಿತ, ಮುಂದೇನು?

|
Google Oneindia Kannada News

ಅತ್ಯಂತ ಜನಪ್ರಿಯ ಸರ್ಚ್ ಇಂಜಿನ್ ಗೂಗಲ್ ತನ್ನ ಹಲವು ಉಚಿತ ಸೌಲಭ್ಯಗಳನ್ನು ಹಿಂಪಡೆದು ಶುಲ್ಕ ವಿಧಿಸಲು ಆರಂಭಿಸಿದೆ. ಜೂನ್ 1 ರಿಂದಗೂಗಲ್ ಡ್ರೈವ್ ತನ್ನ ಸ್ಟೋರೇಜ್ ಮಿತಿ ವ್ಯವಸ್ಥೆಯಲ್ಲಿ ಬದಲಾವಣೆ ತರುತ್ತಿದೆ. ಜೂನ್ 1 ರಿಂದ ಗೂಗಲ್ ಡ್ರೈವ್ ಸ್ಟೋರೇಜ್ ಮಿತಿ 15 ಜಿಬಿಗೆ ಸೀಮಿತವಾಗಲಿದೆ. ಜಿಮೇಲ್ ಹಾಗೂ ಫೋಟೋಸ್ ಎರಡು ಸೇರಿ ಇಷ್ಟು ಮಾತ್ರ ಶೇಖರಣೆ ಮಿತಿ ಸಿಗಲಿದೆ. ಇದಕ್ಕಿಂತ ಹೆಚ್ಚಿನ ಸ್ಪೇಸ್ ಬೇಕಾದರೆ ಹಣ ಪಾವತಿಸಬೇಕು.

ಈ ಬದಲಿ ವ್ಯವಸ್ಥೆ ಬಗ್ಗೆ ಗೂಗಲ್ ಫೋಟೋಸ್ ಬಳಕೆದಾರರಿಗೆ ಒಂದು ವರ್ಷದ ಮೊದಲೇ ತಿಳಿಸಲಾಗಿದೆ. ನಿಮ್ಮ ಮೊಬೈಲ್ ಫೋನ್ ನಲ್ಲಿರುವ ಫೋಟೋ, ವಿಡಿಯೋ ಸೇವ್ ಮಾಡಲು ಗೂಗಲ್ ಫೋಟೋಸ್ ಮಾತ್ರ ಬಳಸುತ್ತಿದ್ದರೆ, ಇನ್ಮುಂದೆ ಬೇರೆ ವ್ಯವಸ್ಥೆ ಮಾಡಿಕೊಳ್ಳುವುದು ಒಳ್ಳೆಯದು.

ಗ್ರಾಹಕರ ಜೇಬಿಗೆ ಕತ್ತರಿ: ಜೂನ್ 1 ರಿಂದ ಏನೇನು ಬದಲಾವಣೆಗ್ರಾಹಕರ ಜೇಬಿಗೆ ಕತ್ತರಿ: ಜೂನ್ 1 ರಿಂದ ಏನೇನು ಬದಲಾವಣೆ

15 ಜಿಬಿ ಮಿತಿ ದಾಟಿದ ಬಳಿಕ ಯಾವುದೇ ಫೋಟೋ, ವಿಡಿಯೋ ಸೇವ್ ಮಾಡಲು ಚಂದಾದಾರರಾಗಬೇಕಾಗುತ್ತದೆ. 100 ಜಿಬಿ ಸ್ಪೇಸ್ ಪಡೆಯಲು ತಿಂಗಳಿಗೆ 1.99 ಯುಎಸ್ ಡಾಲರ್ ಪಾವತಿಸಬೇಕಾಗುತ್ತದೆ.

Google Photos ends free unlimited storage from today: Plans, Cost, Alternatives details in Kannada

ಗೂಗಲ್ ಫೋಟೋಸ್ ಬಳಕೆ ಹೇಗೆ?
ನಿಮ್ಮ ಗೂಗಲ್ ಖಾತೆಗೆ ಲಾಗಿನ್ ಆಗಿ.. ಗೂಗಲ್ ಫೋಟೋಸ್ ಸೇವೆಗೆ ತೆರಳಿ ಅಥವಾ photos.google.com ಎಂದು ಬ್ರೌಸರ್ ನಲ್ಲಿ ಹಾಕಿ, ನೇರವಾಗಿ ಲಾಗಿನ್ ಆಗಬಹುದು. ನಿಮ್ಮ ಡೆಸ್ಕ್ ಟಾಪ್, ಮೊಬೈಲ್ ನಿಂದ ಫೋಟೋ, ವಿಡಿಯೋಗಳನ್ನು ಸುಲಭವಾಗಿ ಡ್ರ್ಯಾಗ್ ಡ್ರಾಪ್ ಮಾಡಿ ಕೂಡಾ ಸೇವ್ ಮಾಡಬಹುದು.

ಗೂಗಲ್ ಫೋಟೋಸ್ ಐಒಎಸ್ ಹಾಗೂ ಆಂಡ್ರಾಯ್ಡ್ ಆಪ್ ನಲ್ಲಿ ಲಭ್ಯವಿದ್ದು, ಆಪ್ ಮೂಲಕವೂ ಸುಲಭವಾಗಿ ಅಪ್ಲೋಡ್ ಮಾಡಬಹುದು.

ಬದಲಾದ ವ್ಯವಸ್ಥೆ
ಇನ್ಮುಂದೆ 15ಜಿಬಿ ಸೀಮಿತ ಸ್ಪೇಸ್ ಲಭ್ಯವಿದ್ದು, ಜೀಮೇಲ್ ಹಾಗೂ ಫೋಟೋಸ್ ಎರಡು ಸೇರಿ ಇಷ್ಟು ಮಾತ್ರ ಉಚಿತವಾಗಿ ಸ್ಪೇಸ್ ನೀಡಲಾಗುತ್ತದೆ.
ಹೆಚ್ಚಿನ ಸ್ಪೇಸ್ ಬೇಕಾದರೆ, 100 ಜಿಬಿಗೆ ತಿಂಗಳಿಗೆ 130ರು ಅಥವಾ 1300 ರು ಪ್ರತಿ ವರ್ಷಕ್ಕೆ ನೀಡಬೇಕು, 200ಜಿಬಿ ಪ್ಲ್ಯಾನ್ ಪಡೆಯಲು 210 ಪ್ರತಿ ತಿಂಗಳು, 2ಟಿಬಿ ಪಡೆಯಲು 650 ಪ್ರತಿ ತಿಂಗಳು 10ಟಿಬಿ ಪಡೆಯಲು 3,250 ಪ್ರತಿ ತಿಂಗಳು, 20 ಟಿಬಿ ಪಡೆಯಲು 6,500 ರು ಪ್ರತಿ ತಿಂಗಳು ಹಾಗೂ 30 ಟಿಬಿ ಪಡೆಯಲು 9750 ರು ಪ್ರತಿ ತಿಂಗಳು ತೆರಬೇಕಾಗುತ್ತದೆ.

ಗೂಗಲ್ ಫೋಟೋಸ್ ಬದಲಿ ಆಪ್
ಫ್ಲಿಕ್ರ್(Flickr)
ಮೈಕ್ರೋಸಾಫ್ಟ್ ಒನ್ ಡ್ರೈವ್
ಅಡೋಬ್ ಕ್ರಿಯೆಟಿವ್ ಕ್ಲೌಡ್ ಬಳಸಬಹುದು

2015ರಿಂದ ಉಚಿತ ಸೇವೆ ನೀಡುತ್ತಿದ್ದ ಗೂಗಲ್ ಸದ್ಯ 4 ಟ್ರಿಲಿಯನ್ ಗೂ ಅಧಿಕ ಫೋಟೋ ವಿಡಿಯೋಗಳನ್ನು ಹೊಂದಿದೆ.

English summary
Google Photos to End Free Unlimited Storage From June 1st. Here are the plans, Cost, Alternatives and All You Need to Know in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X