ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋಗೆ 33,737 ಕೋಟಿ ರೂ. ಪಾವತಿ ಮಾಡಿದ ಗೂಗಲ್: ಶೇ. 7.73ರಷ್ಟು ಪಾಲು

|
Google Oneindia Kannada News

ನವದೆಹಲಿ, ನವೆಂಬರ್ 24: ಆಲ್ಫಾಬೆಟ್ ಇಂಕ್‌ನ ಗೂಗಲ್ ಸಂಸ್ಥೆಯು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್) ಡಿಜಿಟಲ್ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್‌ಗಳಿಗೆ ಶೇಕಡಾ 7.73 ರಷ್ಟು ಪಾಲನ್ನು ಪಡೆಯಲು ಭಾರೀ ಪ್ರಮಾಣದಲ್ಲಿ ಹಣವನ್ನು ಪಾವತಿಸಿದೆ. ಈ ಮೂಲಕ ಅಮೆರಿಕಾದ ದೈತ್ಯ ತಂತ್ರಜ್ಞಾನ ಕಂಪನಿಯು, ಭಾರತೀಯ ಕಂಪನಿಯೊಂದರಲ್ಲಿ ಮಾಡಿದ ಅತಿದೊಡ್ಡ ಹೂಡಿಕೆ ಇದಾಗಿದೆ.

ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ಆರ್‌ಐಎಲ್ ತಿಳಿಸಿರುವ ಹಾಗೆ ''ಎಲ್ಲಾ ಅಗತ್ಯ ಅನುಮೋದನೆಗಳನ್ನು ಪಡೆದ ನಂತರ, ಕಂಪನಿಯ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನಲ್ಲಿ ಇಂದು ಗೂಗಲ್ ಇಂಟರ್ನ್ಯಾಷನಲ್ ಎಲ್ಎಲ್ ಸಿ (ಗೂಗಲ್ ಎಲ್ಎಲ್ ಸಿ ಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ) ಯಿಂದ 33,737 ಕೋಟಿ ರೂ. ಮೌಳ್ಯದ ಈಕ್ವಿಟಿ ಷೇರುಗಳನ್ನು ಹಂಚಿಕೆ ಮಾಡಲಾಗಿದೆ'' ಎಂದು ತಿಳಿಸಿದೆ.

 RRVL ಮತ್ತು ಫ್ಯೂಚರ್ ಗ್ರೂಪ್ ನಡುವಿನ ಒಪ್ಪಂದಕ್ಕೆ ಸಿಸಿಐ ಅನುಮೋದನೆ: ಅಮೆಜಾನ್‌ಗೆ ಹಿನ್ನಡೆ RRVL ಮತ್ತು ಫ್ಯೂಚರ್ ಗ್ರೂಪ್ ನಡುವಿನ ಒಪ್ಪಂದಕ್ಕೆ ಸಿಸಿಐ ಅನುಮೋದನೆ: ಅಮೆಜಾನ್‌ಗೆ ಹಿನ್ನಡೆ

ಈ ವಹಿವಾಟಿನೊಂದಿಗೆ, ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರೀ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಿದ ಫೇಸ್‌ಬುಕ್‌ನಂತಹ ಜಾಗತಿಕ ಹೂಡಿಕೆದಾರರ ಪಟ್ಟಿಗೆ ಗೂಗಲ್ ಸೇರಿಕೊಂಡಿದೆ. ಇದರೊಂದಿಗೆ, ಜಿಯೋ ಪ್ಲಾಟ್‌ಫಾರ್ಮ್‌ಗಳು ಕೇವಲ 11 ವಾರಗಳಲ್ಲಿ ಸುಮಾರು ಶೇಕಡಾ 33ರಷ್ಟು ಪಾಲನ್ನು 13 ಹಣಕಾಸು ಮತ್ತು ಕಾರ್ಯತಂತ್ರದ ಹೂಡಿಕೆದಾರರಿಗೆ ಮಾರಾಟ ಮಾಡುವ ಮೂಲಕ ಒಟ್ಟು 1.52 ಟ್ರಿಲಿಯನ್ ರೂ. ಪಡೆದಿದೆ. ಇದರಿಂದಾಗಿ ಮಾರ್ಚ್ 2021 ರ ಗುರಿಗಿಂತ ಮೊದಲೇ ಆರ್‌ಐಎಲ್ ತನ್ನ ನಿವ್ವಳ ಸಾಲವನ್ನು ಅಳಿಸಿ ಹಾಕಿದೆ.

Google Pays Rs 33,737 Crore To Jio Platforms: 7.73 Percent Share

ಇತ್ತೀಚೆಗಷ್ಟೇ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (RRVL) ಮತ್ತು ಫ್ಯೂಚರ್ಸ್ ಗ್ರೂಪ್ ನಡುವಿನ ಒಪ್ಪಂದಕ್ಕೆ ಭಾರತದ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಅನಮೋದನೆ ನೀಡಿದೆ. ಪರಿಣಾಮ ಸತತ ಎರಡು ದಿನಗಳ ವಹಿವಾಟಿನಲ್ಲಿ ಫ್ಯೂಚರ್ ರಿಟೇಲ್ ಷೇರುಗಳು ಶೇ 20ರಷ್ಟು ಏರಿಕೆ ಕಂಡಿವೆ.

English summary
Alphabet Inc's Google has paid Rs 33,737 crore to Reliance Industries Ltd's (RIL) digital subsidiary Jio Platforms for a 7.73 per cent stake in it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X