ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪಲ್ ಸಂಸ್ಥೆಗೆ 68000 ಕೋಟಿ ರೂಪಾಯಿ ಕೊಡ್ತಿದೆ ಗೂಗಲ್!

|
Google Oneindia Kannada News

ಕ್ಯಾಲಿಫೋರ್ನಿಯಾ, ಸೆಪ್ಟೆಂಬರ್ 29: ತಂತ್ರಜ್ಞಾನ ದೈತ್ಯ ಗೂಗಲ್ ಸಂಸ್ಥೆಯು ಮತ್ತೊಂದು ದೈತ್ಯ ಮೊಬೈಲ್ ಸಂಸ್ಥೆ ಆಪಲ್‌ಗೆ ಈ ವರ್ಷ 68000 ಕೋಟಿ ರೂಪಾಯಿಗಳನ್ನು ಪಾವತಿಸುತ್ತಿದೆ.

1 ಟ್ರಿಲಿಯನ್ ಡಾಲರ್ ಕಂಪನಿಯಾದ ಆಪಲ್ ಈಗ 2 ಫೇಸ್ಬುಕ್ ಗೆ ಸಮ!1 ಟ್ರಿಲಿಯನ್ ಡಾಲರ್ ಕಂಪನಿಯಾದ ಆಪಲ್ ಈಗ 2 ಫೇಸ್ಬುಕ್ ಗೆ ಸಮ!

ಹೌದು, ಎರಡೂ ಸಂಸ್ಥೆಗಳು ಪರಸ್ಪರ ಮೊಬೈಲ್ ಸೇರಿದಂತೆ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳು ಹಾಗಿದ್ದರೂ ಗೂಗಲ್‌ ಏಕೆ ಆಪಲ್‌ಗೆ ಅಷ್ಟು ದೊಡ್ಡ ಮೊತ್ತವನ್ನು ನೀಡುತ್ತಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಇದರ ಹಿಂದೆ ಶುದ್ಧ ವ್ಯಾಪಾರವಿದೆ.

ಆಪಲ್ ಉದ್ಯೋಗಿ ಹತ್ಯೆ : ಕೋಟಿ ರುಪಾಯಿ ಪರಿಹಾರ ಕೇಳಿದ ಪತ್ನಿ ಆಪಲ್ ಉದ್ಯೋಗಿ ಹತ್ಯೆ : ಕೋಟಿ ರುಪಾಯಿ ಪರಿಹಾರ ಕೇಳಿದ ಪತ್ನಿ

ಆಪಲ್‌ ಸಂಸ್ಥೆ ತನ್ನದೇ ಆದ ಆಪರೇಟಿಂಗ್ ಸಿಸ್ಟಂ (ಐಓಎಸ್‌) ಬಳಸುವುದು ಗೊತ್ತೇ ಇದೆ. ಅದರಲ್ಲಿ ವೆಬ್‌ ಬ್ರೌಸರ್‌ ಸಹ ಆಪಲ್‌ ಸಂಸ್ಥೆಯದ್ದೇ ಆದ ಸಫಾರಿ ಇದೆ. ಅದು ಗೂಗಲ್‌ ಅನ್ನು ಡೀಫಾಲ್ಟ್‌ ಆಗಿ ಬಳಸವುದಿಲ್ಲ.

Google paying Apple company 68000 crore rupees this year

ಆದರೆ ಗೂಗಲ್‌ ಸಂಸ್ಥೆಯು ಆಪಲ್‌ನ ವೆಬ್‌ ಬ್ರೌಸರ್‌ ಸಫಾರಿಯಲ್ಲಿ ಗೂಗಲ್‌ ಅನ್ನು ಡಿಫಾಲ್ಟ್‌ ವೆಬ್‌ಬ್ರೌಸರ್ ಆಗಿ ಬಳಸಲೆಂದು ಆಪಲ್‌ ಕಂಪೆನಿಗೆ ವರ್ಷದ ಶುಲ್ಕವಾಗಿ 68000 ಕೋಟಿ ನೀಡುತ್ತಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆಯೂ ಇದೆ.

ಆಪಲ್ ಕಂಪೆನಿಯಿಂದ ಹೊಸ ಫೋನ್ ಗಳು, ವಾಚ್, ಅಬ್ಬಾ! ಏನು ಬೆಲೆಯೋ..ಆಪಲ್ ಕಂಪೆನಿಯಿಂದ ಹೊಸ ಫೋನ್ ಗಳು, ವಾಚ್, ಅಬ್ಬಾ! ಏನು ಬೆಲೆಯೋ..

ಆಪಲ್‌ ಸಂಸ್ಥೆಯು ಗೂಗಲ್‌ ಜೊತೆಗೆ ಬಿಂಗ್ ಎನ್ನುವ ವೆಬ್‌ ಬ್ರೌಸರ್‌ ಅನ್ನು 'ಸಿರಿ' ( ಆಪಲ್‌ನ ಧ್ವನಿ ಆದೇಶ ) ಮೂಲಕ ಮಾಹಿತಿ ಹುಡುಕಲು ಬಳಸುತ್ತಿತ್ತು. ಆದರೆ ಇನ್ನು ಮುಂದೆ ಕೇಲವ ಗೂಗಲ್‌ ಅನ್ನೇ ಡಿಫಾಲ್ಟ್‌ ಬ್ರೌಸರ್ ಆಗಿ ಬಳಸಲಿದೆ.

ಗೂಗಲ್ 20ರ ಹುಟ್ಟುಹಬ್ಬದ ಸಂಭ್ರಮಕ್ಕೆ ವಿಶೇಷ ವಿಡಿಯೋ ಗೂಗಲ್ 20ರ ಹುಟ್ಟುಹಬ್ಬದ ಸಂಭ್ರಮಕ್ಕೆ ವಿಶೇಷ ವಿಡಿಯೋ

ನಿನ್ನೆಯಷ್ಟೆ ಭಾರತದಲ್ಲಿ ಏಪಲ್‌ನ ಹೊಸ ಮಾದರಿ ಎಕ್ಸ್‌ ಮ್ಯಾಕ್ಸ್‌ ಮೊಬೈಲ್ ಫೋನ್‌ ಮಾರುಕಟ್ಟೆಗೆ ಬಂದಿವೆ. 64 ಜಿಬಿ, 224 ಜಿಬಿ, 512 ಜಿಬಿ ಸಾಮರ್ಥ್ಯದ ಫೋನುಗಳು ಕ್ರಮವಾಗಿ 1.10 ಲಕ್ಷ, 1.25 ಲಕ್ಷ, 1.45 ಲಕ್ಷ ಬೆಲೆಯುಳ್ಳದ್ದಾಗಿವೆ.

English summary
Google paying Mobile tech jaint Apple company 68000 rupees this year for using google as default web browser in Apple's 'safari' browser app. Apple using google and bing both in their products.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X