ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Google Pay ಇನ್ಮುಂದೆ ಪೂರ್ತಿಯಾಗಿ ಉಚಿತವಲ್ಲ: ಶುಲ್ಕ ವಿಧಿಸಲಾಗುತ್ತದೆ

|
Google Oneindia Kannada News

ನವದೆಹಲಿ, ನವೆಂಬರ್ 25: ಜನಪ್ರಿಯ ಹಣ ಪಾವತಿ ಅಪ್ಲಿಕೇಶನ್ ಗೂಗಲ್ ಪೇ ಇನ್ಮುಂದೆ ಪೂರ್ತಿಯಾಗಿ ನಿಮಗೆ ಉಚಿತವಾಗಿ ಲಭ್ಯವಿರುವುದಿಲ್ಲ. ಬದಲಾಗಿ 2021ರಿಂದ ಶುಲ್ಕ ವಿಧಿಸುವ ಕಾರ್ಯಕ್ಕೆ ಮುಂದಾಗಿದೆ.

ಮುಂದಿನ ವರ್ಷ ಜನವರಿಯಿಂದ ವೆಬ್ ಅಪ್ಲಿಕೇಶನ್ ಸೈಟ್ ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ ಎಂದು ಬಳಕೆದಾರರಿಗೆ ತಿಳಿಸಿರುವ ಗೂಗಲ್ ನೋಟಿಸ್ ನೀಡಿದೆ. 2021 ರ ಆರಂಭದಿಂದಲೂ ಬಳಕೆದಾರರು ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು pay.google.com ಅನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಗೂಗಲ್ ಪೇ ಹೇಳಿದೆ. ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಒಬ್ಬರು ಹೊಸ Google Pay ಅಪ್ಲಿಕೇಶನ್ ಅನ್ನು ಬಳಸಬೇಕಾಗುತ್ತದೆ.

Google Task Mate app: ಹಣ ಗಳಿಸಬಹುದು, ಹೇಗೆಂದು ತಿಳಿಯಿರಿ..Google Task Mate app: ಹಣ ಗಳಿಸಬಹುದು, ಹೇಗೆಂದು ತಿಳಿಯಿರಿ..

ವೆಬ್ ಅಪ್ಲಿಕೇಶನ್ ಏಕೆ ಬಳಸಲು ಸಾಧ್ಯವಿಲ್ಲ?

ವೆಬ್ ಅಪ್ಲಿಕೇಶನ್ ಏಕೆ ಬಳಸಲು ಸಾಧ್ಯವಿಲ್ಲ?

ಗೂಗಲ್ ಪೇ 2021 ರ ಆರಂಭದಿಂದ ನೀವು ಹಣವನ್ನು ಕಳುಹಿಸಲು ಮತ್ತು ಇತರರಿಂದ ಸ್ವೀಕರಿಸಲು pay.google.com ಅನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ. ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಹೊಸ Google Pay ಅಪ್ಲಿಕೇಶನ್ ಬಳಸಬೇಕಾಗುತ್ತದೆ.


ಪೀರ್-ಟು-ಪೀರ್ ಪಾವತಿಯ ಹೊರತಾಗಿ, ವೆಬ್ ಅಪ್ಲಿಕೇಶನ್‌ನಲ್ಲಿ ನೀವು ಇನ್ನೂ ಪಾವತಿ ವಿಧಾನಗಳನ್ನು ನಿರ್ವಹಿಸಬಹುದು ಎಂದು ಹೇಳಿದೆ. ತ್ವರಿತ ಹಣ ವರ್ಗಾವಣೆಯ ಮೇಲೂ ಗೂಗಲ್ ಶುಲ್ಕ ವಿಧಿಸುತ್ತದೆ. ನಿಮ್ಮ ಬ್ಯಾಂಕ್ ಖಾತೆಗೆ ನೀವು ಹಣವನ್ನು ವರ್ಗಾಯಿಸಿದಾಗ, ಇದು 1-3 ಕೆಲಸದ ದಿನಗಳನ್ನು ತೆಗೆದುಕೊಳ್ಳಬಹುದು.

ಡೆಬಿಟ್ ಕಾರ್ಡ್ ವರ್ಗಾವಣೆಗೆ ಶುಲ್ಕ ವಿಧಿಸಲಾಗುತ್ತದೆ

ಡೆಬಿಟ್ ಕಾರ್ಡ್ ವರ್ಗಾವಣೆಗೆ ಶುಲ್ಕ ವಿಧಿಸಲಾಗುತ್ತದೆ

ಡೆಬಿಟ್ ಕಾರ್ಡ್ ವರ್ಗಾವಣೆ ಸಾಮಾನ್ಯವಾಗಿ ತಕ್ಷಣವೇ ಸಂಭವಿಸುತ್ತದೆ. ನೀವು ಕಳುಹಿಸಿದ ಕೆಲವೇ ಕ್ಷಣಗಳಲ್ಲಿ ನೀವು ಉಚಿತವಾಗಿ ಬೇರೆಯವರಿಗೆ ಹಣ ಕಳುಹಿಸಬಹುದಾಗಿತ್ತು. ಆದರೆ ಇನ್ಮುಂದೆ ನೀವು ಗೂಗಲ್‌ ಪೇ ಬ್ಯಾಲೆನ್ಸ್‌ನಿಂದ ಡೆಬಿಟ್ ಕಾರ್ಡ್‌ನೊಂದಿಗೆ ಹಣವನ್ನು ವರ್ಗಾಯಿಸಿದಾಗ, 1.5 ಪ್ರತಿಶತ ಅಥವಾ 0.31 ಸೆಂಟ್ಸ್‌ ಶುಲ್ಕವಿರುತ್ತದೆ (ಯಾವುದು ಹೆಚ್ಚು). ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲು ಯಾವುದೇ ಶುಲ್ಕ ವಿಧಿಸುವುದಿಲ್ಲ.

ಹೊಸ ಅಪ್ಲಿಕೇಶನ್ ಪರಿಚಯಿಸಿದೆ ಗೂಗಲ್

ಹೊಸ ಅಪ್ಲಿಕೇಶನ್ ಪರಿಚಯಿಸಿದೆ ಗೂಗಲ್

ಕಳೆದ ವಾರ ಗೂಗಲ್ ತನ್ನ ಗೂಗಲ್ ಪೇ ಅಪ್ಲಿಕೇಶನ್‌ನಲ್ಲಿ (ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ) ಪ್ರಮುಖ ಮರುವಿನ್ಯಾಸವನ್ನು ಪರಿಚಯಿಸಿತು. ಹೊಸ ಅಪ್ಲಿಕೇಶನ್ ವಹಿವಾಟುಗಳನ್ನು ನಿಭಾಯಿಸುವುದಲ್ಲದೆ, ನಿಮ್ಮ ದೈನಂದಿನ ಖರ್ಚಿನ ಬಗ್ಗೆ ನಿಗಾ ಇಡಲು ಸಹ ನಿಮಗೆ ಅನುಮತಿಸುತ್ತದೆ. ಹೊಸ ಗೂಗಲ್ ಪೇ ಅಪ್ಲಿಕೇಶನ್ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್ ಜೊತೆಗೆ ಮೆಸೇಜಿಂಗ್ ಸಾಧನವಾಗಿಯೂ ಕಾರ್ಯನಿರ್ವಹಿಸುತ್ತದೆ.

ಉಚಿತವಾಗಿದ್ದ ಅಪ್ಲಿಕೇಶನ್‌ಗೆ ಹಣ ಕೊಡಲು ಸಾಧ್ಯವೇ?

ಉಚಿತವಾಗಿದ್ದ ಅಪ್ಲಿಕೇಶನ್‌ಗೆ ಹಣ ಕೊಡಲು ಸಾಧ್ಯವೇ?

ಹಿಂದೆ, ಗೂಗಲ್ ಪೇ ಹೊರಗಿನ ಖಾತೆಗಳು ಮತ್ತು ಕಾರ್ಡ್‌ಗಳಿಗೆ ಹಣವನ್ನು ವರ್ಗಾಯಿಸಲು ಯಾವುದೇ ಶುಲ್ಕವನ್ನು ವಿಧಿಸದ ಕೆಲವೇ ಪಾವತಿ ಸೇವೆಗಳಲ್ಲಿ ಒಂದಾಗಿದೆ. ಆದರೆ ಈ ಬದಲಾವಣೆಯು ಮಾರುಕಟ್ಟೆಯಲ್ಲಿ ಯಾವ ರೀತಿ ಬದಲಾವಣೆಯನ್ನು ತರುತ್ತದೆ ಎಂಬುದನ್ನು ಕಾದು ನೋಡಬೇಕು. ಏಕೆಂದರೆ ಉಚಿತವಾಗಿದ್ದ ವೈಶಿಷ್ಟ್ಯಗಳು ಹಿಂದೆ ಸರಿದಾಗ ಅದನ್ನು ಒಪ್ಪಿಕೊಳ್ಳುವುದು ಯಾವಾಗಲೂ ಕಷ್ಟ.

English summary
The Freshly built Google pay new app has lot of new features but sending money and receiving money won't be free much longer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X