ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ಆಂಡ್ರಾಯ್ಡ್ 8.0 ಆವೃತ್ತಿಗೆ 'ಒರಿಯೊ' ಬಿಸ್ಕೆಟ್ ಹೆಸರು

By Sachhidananda Acharya
|
Google Oneindia Kannada News

ಹೊಸದಿಲ್ಲಿ, ಆಗಸ್ಟ್ 23: ಗೂಗಲ್ ಸಂಸ್ಥೆಯ ಆಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ಸಿಸ್ಟಂನ 8.0 ಆವೃತ್ತಿಗೆ ಭಾರತದಲ್ಲಿ ಜನಪ್ರಿಯವಾಗಿರುವ 'ಓರಿಯೋ' ಬಿಸ್ಕೆಟ್ ನ ಹೆಸರಿಡಲಾಗಿದೆ.

ಆಂಡ್ರಾಯ್ಡ್ ಓರಿಯೋ ಈ ಹಿಂದಿನ ಆವೃತ್ತಿಗಳಿಗಿಂತ ಹೆಚ್ಚು ಸ್ಮಾರ್ಟ್, ಪವರ್‌ಫುಲ್ ಮತ್ತು ಹೆಚ್ಚು ಆಕರ್ಷಕವಾಗಿರಲಿದೆ ಎಂದು ಆ್ಯಂಡ್ರಾಯ್ಡ್ ಕಂಪನಿ ಟ್ವೀಟ್ ಮಾಡಿದೆ.

ಆಗಸ್ಟ್ 18ರಂದು ಸಂಪೂರ್ಣ ಸೂರ್ಯಗ್ರಹಣದಂದು ಆಂಡ್ರಾಯ್ಡ್ 8.0 ಆವೃತ್ತಿಯನ್ನು ಪರಿಚಯಿಸಲಾಗಿತ್ತು. ತನ್ನ ಓಪರೇಟಿಂಗ್ ಸಿಸ್ಟಂಗಳಿಗೆ ತಿನಿಸುಗಳ ಹೆಸರನ್ನಿಟ್ಟುಕೊಂಡು ಬಂದಿರುವ ಗೂಗಲ್ ಈ ಬಾರಿ 'ಆಂಡ್ರಾಯ್ಡ್ ಓರಿಯೋ' ಎಂದು ನಾಮಕರಣ ಮಾಡಿದೆ.

Google names Android 8.0 Version as 'Android Oreo'

ಈ ಹಿಂದೆ ಆಂಡ್ರಾಯ್ಡ್ ಕಿಟ್ ಕ್ಯಾಟ್ ಬಿಡುಗಡೆ ವೇಳೆ ಒಪ್ಪಂದ ಮಾಡಿಕೊಂಡಂತೆ ಈ ಬಾರಿಯೂ ಬಿಸ್ಕೆಟ್ ಹೆಸರಿಡಲು ಕ್ಯಾಡ್ಬರಿ ಕಂಪನಿ ಜತೆ ಗೂಗಲ್ ಒಪ್ಪಂದ ಮಾಡಿಕೊಂಡಿದೆ.

ಇನ್ನೇನು ನೂತನ ಸ್ಮಾರ್ಟ್‌ಫೋನ್‌ಗಳಲ್ಲಿ 'ಆಂಡ್ರಾಯ್ಡ್ ಒರಿಯೊ' ಪ್ರವೇಶವಾಗಲಿದೆ. ಈಗಾಗಲೇ ಹಲವು ಕಂಪನಿಗಳು ತಮ್ಮ ನೂತನ ಫೋನ್ ಗಳಲ್ಲಿ 'ಆಂಡ್ರಾಯ್ಡ್ ಒರಿಯೊ' ಕಾಅರ್ಯಚರಣಾ ವ್ಯವಸ್ಥೆಯನ್ನು ಘೋಷಣೆ ಮಾಡಿವೆ.

ಆಂಡ್ರಾಯ್ಡ್ ಒರಿಯೋದ ವೀಡಿಯೋ ನೋಡಿ,

English summary
Google named the Android 8.0 version as Android Oreo. Just like Android 4.4 KitKat, Google has commercially partnered Cadbury to come up with Android 8.0 Oreo version, so-called after their famous Oreo biscuits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X