• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದ್ವಿಚಕ್ರವಾಹನ ಸಂಚಾರಿಗಳೇ ಗಮನಿಸಿ, ಗೂಗಲ್ ಮಾರ್ಗದರ್ಶಿಯಲ್ಲಿ ಕನ್ನಡ

By Mahesh
|
   ಗೂಗಲ್ ಮ್ಯಾಪ್ಸ್ ಹೊಸ ಅಪ್ಡೇಟ್ ನಿಂದ ಕನ್ನಡಿಗರಿಗೆ ಬಹಳ ಉಪಯೋಗ | Oneindia Kannada

   ಬೆಂಗಳೂರು, ಡಿಸೆಂಬರ್ 05 : ಜಿಪಿಎಸ್ ಆಧಾರದ ಮೇಲೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಕಾಶೆಯಲ್ಲಿ ದಾರಿ ತೋರುವ ತಂತ್ರಾಂಶಗಳು ಹೆಚ್ಚಾಗಿ ವಾಹನ ಸವಾರರು ಪ್ರತಿನಿತ್ಯ ಬಳಸುತ್ತಿದ್ದಾರೆ. ವಾಹನ ಸವಾರರಿಗೆ ತಂತ್ರಜ್ಞಾನದ ಮೂಲಕ ಇನ್ನಷ್ಟು ಸುಲಭ ಮಾರ್ಗವನ್ನು ಗೂಗಲ್ ಇಂಡಿಯಾ ಪರಿಚಯಿಸಿದೆ. ಈ ಸೌಲಭ್ಯಗಳು ಕನ್ನಡದಲ್ಲೂ ಲಭ್ಯವಿದೆ.

   ಗೂಗಲ್ ತೇಝ್ -ಮೊಬೈಲ್ ವ್ಯಾಲೆಟ್ ಏನು? ಎತ್ತ?

   ಈ ಪೈಕಿ ಕನ್ನಡ ಬಳಸುವ ವೇಜ್ ಆಪ್ ಬಿಟ್ಟರೆ ಗೂಗಲ್ ಮ್ಯಾಪ್ ಹೆಚ್ಚಾಗಿ ಜನರಿಗೆ ಪರಿಚಿತ. ಕನ್ನಡದ ಪಠ್ಯ ಮತ್ತು ದನಿಯಲ್ಲೇ ಪಡೆಯುತ್ತಾ ನ್ಯಾವಿಗೇಶನ್ ಮಾಡಲು ಇದರಲ್ಲಿ ಸಾಧ್ಯ

   ಕನ್ನಡದಲ್ಲಿ 'ನ್ಯಾವಿಗೇಶನ್' ತಂತ್ರಾಂಶ ಬಳಕೆ ಬಗ್ಗೆ

   ಗೂಗಲ್ ಮ್ಯಾಪ್ಸ್ ಅಪ್ಡೇಟ್: ಹೊಸ ಫೀಚರ್ ಒಂದನ್ನು ಬಳಕೆದಾರರಿಗೆ ನೀಡುತ್ತಿದೆ.Google Maps (v9.67.1) ಬಳಸುತ್ತಿದ್ದರೆ, ಟು-ವ್ಹೀಲರ್ ಮೋಡ್ ಹೊಸದಾಗಿ ಕಾಣಿಸಿಕೊಳ್ಳುತ್ತಿದೆ.. ಕಾರ್, ಫೂಟ್ ಹಾಗೂ ಟ್ರೈನ್ ಜತೆಯಲ್ಲಿ ಈಗ ದ್ವಿಚಕ್ರವಾಹನ ಸವಾರರಿಗೆ ದಾರಿ ತೋರಲು ಗೂಗಲ್ ಮುಂದಾಗಿದೆ.

   ಟ್ರಾಫಿಕ್ ಜಾಮ್ ಕಿರಿಕಿರಿ ತಪ್ಪಿಸಿಕೊಳ್ಳಿ

   ಟ್ರಾಫಿಕ್ ಜಾಮ್ ಕಿರಿಕಿರಿ ತಪ್ಪಿಸಿಕೊಳ್ಳಿ

   ಗೂಗಲ್ ಮ್ಯಾಪ್ ನಲ್ಲಿ ಮೋಟರ್ ಸೈಕಲ್ ಮೋಡ್ ಆನ್ ಮಾಡಿಕೊಂಡು ಟ್ರಾಫಿಕ್ ಜಾಮ್ ಕಿರಿಕಿರಿ ಇಲ್ಲದೆ ಸಂಚರಿಸಬಹುದಾಗಿದೆ. ಟ್ರಾಫಿಕ್ ಜಾಮ್ ಇರುವ ರೂಟ್ ಗಳನ್ನು ಕೆಂಪು ಬಣ್ಣದಲ್ಲಿ ತೋರಿಸಲಾಗುತ್ತಿದೆ.

   ಈಗ ದ್ವಿಚಕ್ರವಾಹನ ಸಂಚಾರಿಗಳು ಹೊಸ ಸೌಲಭ್ಯದಿಂದ ಶಾರ್ಟ್ ಕಟ್ ಬಳಸಿ ಗಲ್ಲಿಗಲ್ಲಿಗಳಲ್ಲಿ, ಒಳದಾರಿಗಳಲ್ಲಿ ಸಂಚರಿಸಿ ನೀವು ತಲುಪಲು ಬಯಸುವ ಜಾಗಕ್ಕೆ ಹೋಗಬಹುದಾಗಿದೆ. ಒಟ್ಟಾರೆ, ಸಂಚಾರ ದಟ್ಟಣೆ ರಹಿತ ಹತ್ತಿರದ ದಾರಿಯನ್ನು ತೋರಿಸಿಕೊಡಲಿದೆ ಹೊಸ ಸೌಲಭ್ಯ.

   ಗೂಗಲ್ ಮ್ಯಾಪ್ ನ ಅಪ್ಲಿಕೇಷನ್ ಅಪ್ಡೇಟ್ ಮಾಡಿ

   ಗೂಗಲ್ ಮ್ಯಾಪ್ ನ ಅಪ್ಲಿಕೇಷನ್ ಅಪ್ಡೇಟ್ ಮಾಡಿ

   ಗೂಗಲ್ ಮ್ಯಾಪ್ ಗಳು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಲಭ್ಯವಿರುತ್ತದೆ. ಗೂಗಲ್ ಮ್ಯಾಪಿನ v9.67.1 ಇದ್ದರೆ ಹೊಸ ಸೌಲಭ್ಯ ಬಳಸಬಹುದು. ರೂಟ್, ವಾಯ್ಸ್ ಗೈಡೆಡ್ ನೇವಿಗೇಶನ್ ಮತ್ತು ಲ್ಯಾಂಡ್ ಮಾರ್ಕ್ ನೇವಿಗೇಶನ್ ಕೂಡ ಲಭ್ಯವಿದೆ. ಭಾರತದಲ್ಲಿ ಬೈಕ್ ಸವಾರರಿಗೆ ಪ್ರತ್ಯೇಕವಾಗಿ ಈ ರೀತಿ ಸೌಲಭ್ಯವನ್ನು ಗೂಗಲ್ ನೀಡುತ್ತಿದೆ.

   ನ್ಯಾವಿಗೇಶನ್ ಕೂಡ ಕನ್ನಡದಲ್ಲಿ ಲಭ್ಯ

   ನ್ಯಾವಿಗೇಶನ್ ಕೂಡ ಕನ್ನಡದಲ್ಲಿ ಲಭ್ಯ

   ಗೂಗಲ್ ಖಾತೆಯ ಭಾಷೆಯನ್ನು ಕನ್ನಡವನ್ನಾಗಿ ಮಾಡಿಕೊಂಡವರಿಗೆ ನ್ಯಾವಿಗೇಶನ್ ಕೂಡ ಕನ್ನಡದಲ್ಲಿಯೇ ದೊರೆಯುತ್ತಿದೆ. ಗೂಗಲ್ ಕೂಡ ತನ್ನ ಅನೇಕ ಸೇವೆಗಳನ್ನು ಕ್ರೌಡ್ ಸೋರ್ಸ್ ಮಾಡಿರುವುದು ಮತ್ತು ಅದರಿಂದಲೇ ವಿವಿಧ ಭಾಷೆಗಳ ಆವೃತ್ತಿಗಳು ತಯಾರಾಗಿ ಬರುತ್ತಿರುವುದು ಇಲ್ಲಿ ಗಮನಾರ್ಹ. ವೇಜ್ ಆಪ್ ಬಿಟ್ಟರೆ ಗೂಗಲ್ ನಲ್ಲಿ ಕನ್ನಡದಲ್ಲಿ ದನಿ ಆಧಾರಿತ ಮಾರ್ಗದರ್ಶಿ ಈ ಮೂಲಕ ಬಳಸಬಹುದಾಗಿದೆ.

   ಮತ್ತೊಂದೆರಡು ಬೆಳವಣಿಗೆಗಳೆಂದರೆ

   ಮತ್ತೊಂದೆರಡು ಬೆಳವಣಿಗೆಗಳೆಂದರೆ

   * 2017 ಆಗಸ್ಟ್ ತಿಂಗಳಲ್ಲಿ ಗೂಗಲ್ 'ದನಿ ಹುಡುಕಾಟ'ವು (Google Voice Search) ಕನ್ನಡದಲ್ಲೂ ಸಾಧ್ಯವಾಗಿದೆ.

   * 2017ಸೆಪ್ಟೆಂಬರಲ್ಲಿ ಬಿಡುಗಡೆಯಾದ ಐ ಓಸ್ 11 ಆವೃತ್ತಿಯಲ್ಲಿ ಇನ್ ಬಿಲ್ಟ್ ಕನ್ನಡ ಕೀಬೋರ್ಡ್ ಒದಗಿಸಲಾಗಿದೆ. ಇದರಿಂದ ಐ ಫೋನ್ ಮತ್ತು ಐಪ್ಯಾಡ್ ಗಳಲ್ಲಿ ಯಾವ ಹೊರತಂತ್ರಾಂಶದ ಅಗತ್ಯವಿಲ್ಲದೇ ಕನ್ನಡ ಟೈಪಿಂಗ್ ಸಾಧ್ಯ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Google on Tuesday (December 5) incorporated navigation routes for two-wheelers with Voice Assistant capabilities in its Maps feature. Google announced the feature at its Google for India event, New Delhi. Two-wheeler mode in Maps shows trip routes that use “shortcuts” not accessible to cars and trucks.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more