ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೋಡಾಫೋನ್ ಸಂಸ್ಥೆಯಲ್ಲಿ ಗೂಗಲ್ ಹೂಡಿಕೆ ಸಾಧ್ಯತೆ

|
Google Oneindia Kannada News

ಮುಂಬೈ, ಮೇ 29: ಫೇಸ್ಬುಕ್ ಹಾಗೂ ಜಿಯೋ ಒಂದಾದ ಬಳಿಕ ಮೊಬೈಲ್ ಮಾರುಕಟ್ಟೆಯಲ್ಲಿ ಪೈಪೋಟಿ ಎದುರಿಸಲು ವೋಡಾಫೋನ್ ಹಾಗೂ ಗೂಗಲ್ ಮುಂದಾಗಿವೆ.

ಮುಂಬೈ ಮೂಲದ ವೋಡಾಫೋನ್ ಸಂಸ್ಥೆಯ ಶೇ 5ರಷ್ಟು ಪಾಲನ್ನು ಅಮೆರಿಕದ ಇಂಟರ್ನೆಟ್ ದಿಗ್ಗಜ ಸಂಸ್ಥೆ ಗೂಗಲ್ ಖರೀದಿಸಲು ಮುಂದಾಗಿರುವ ಸುದ್ದಿ ಬಂದಿದೆ.

ಆದಿತ್ಯಾ ಬಿರ್ಲಾ ಗ್ರೂಪ್ ಒಡೆತನದ ಐಡಿಯಾ ಹಾಗೂ ವೋಡಾಫೋನ್ ಜೊತೆ ಗೂಗಲ್ ಕೈ ಜೋಡಿಸಿ ಸ್ಪರ್ಧಿಗಿಳಿಯಲಿದೆ ಎಂದು FT ವರದಿ ಮಾಡಿದೆ.

Google likely to invest in Vodafone Idea

ಲಭ್ಯ ಮಾಹಿತಿಯಂತೆ ವೋಡಾಫೋನ್ ಶೇ 5ರಷ್ಟು ಷೇರುಗಳ ಮೌಲ್ಯ 101.5 ಮಿಲಿಯನ್ ಡಾಲರ್ ನಷ್ಟಿದೆ. ಸಂಸ್ಥೆಯ ಷೇರು ಮೌಲ್ಯ ಕಳೆದ 12 ತಿಂಗಳಲ್ಲಿ ಶೇ 57ರಷ್ಟು ಕುಸಿದಿದೆ.

ಕಳೆದ ತಿಂಗಳು ರಿಲಯನ್ಸ್ ಜಿಯೋದಲ್ಲಿ ಫೇಸ್ಬುಕ್ 5.7 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದರಿದ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿತ್ತು. ಜಿಯೋದಲ್ಲಿರುವ ಶೇ 9.9ರಷ್ಟು ಪಾಲನ್ನು ಸುಮಾರು 5.7 ಬಿಲಿಯನ್ ಡಾಲರ್ (43,574 ಕೋಟಿ ರು ) ಮೊತ್ತಕ್ಕೆ ಫೇಸ್ಬುಕ್ ಖರೀದಿಸಿದೆ. ಒಟ್ಟಾರೆ ಈ ಒಪ್ಪಂದದ ಮೌಲ್ಯ 4.62 ಲಕ್ಷ ಕೋಟಿ ರು (65.95 ಬಿಲಿಯನ್ ಡಾಲರ್) ಎಂದು ಅಂದಾಜಿಸಲಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಇದು ಅತ್ಯಂತ ದೊಡ್ಡ ಪ್ರಮಾಣದ ಹೂಡಿಕೆಯಾಗಿದೆ.

ಕಿರಾಣಿ ಅಂಗಡಿಗಳನ್ನು ಆನ್ಲೈನ್ಕಿರಾಣಿ ಅಂಗಡಿಗಳನ್ನು ಆನ್ಲೈನ್

ಜಿಯೋ ಪ್ಲಾಟ್ ಫಾರ್ಮ್, ರಿಲಯನ್ಸ್ ರೀಟೈಲ್, ಫೇಸ್ಬುಕ್ ನ ವಾಟ್ಸಾಪ್ ನಡುವೆ ಒಪ್ಪಂದ ಏರ್ಪಟ್ಟಿದ್ದು, ಜಿಯೋ ಮಾರ್ಟ್ ಪ್ಲಾಟ್ ಫಾರ್ಮ್ ಮೂಲಕ ಸಣ್ಣ ಉದ್ದಿಮೆದಾರರನ್ನು ಆಕರ್ಷಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

ಇದಕ್ಕೆ ಪ್ರತಿಯಾಗಿ ಗೂಗಲ್ ಕೂಡಾ ತನ್ನ ಸರ್ಚ್ ಇಂಜಿನ್ ನಲ್ಲಿ nearby stores ಅಪ್ಡೇಟ್ ಮಾಡಿದ್ದು, ಸ್ಥಳೀಯ ಸರ್ಚ್ ಬಲಗೊಳಿಸಲು ಯತ್ನಿಸುತ್ತಿದೆ. ಭಾರತದ 35ಕ್ಕೂ ಅಧಿಕ ನಗರಗಳಲ್ಲಿ ಈ ಫೀಚರ್ ಈಗ ಲಭ್ಯವಿದೆ. ಈ ಮೂಲಕ ಬಳಕೆ ಹೆಚ್ಚಿಸಲು ಮುಂದಾಗಿದೆ.

English summary
In order to battle against the Facebook-Jio in the mobile market, Google likely to invest in Vodafone Idea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X