ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಕೈಪ್ ಗೆ ಸೆಡ್ಡು ಹೊಡೆಯಲು ಬರುತ್ತಿದೆ ಗೂಗಲ್ ಡುವೋ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 16: ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆ ಗೂಗಲ್ ಈಗ ವಿಡಿಯೋ ಅಪ್ಲಿಕೇಷನ್ ಗಳ ವಿರುದ್ಧ ಪೈಪೋಟಿಗೆ ಬಿದ್ದಿದೆ. ಫೇಸ್ ಟೈಮ್ ಹಾಗೂ ಸ್ಕೈಪ್ ಗೆ ಸೆಡ್ಡು ಹೊಡೆಯಲು ಗೂಗಲ್ ಡುವೋ ಬಂದಿದೆ. ಆಂಡ್ರಾಯ್ಡ್ ಹಾಗೂ ಐಒಎಸ್ ನಲ್ಲಿ ಡುವೋ ಲಭ್ಯವಿರಲಿದೆ.[ಭಾರತದ 500 ರೈಲ್ವೆ ನಿಲ್ದಾಣಗಳಲ್ಲಿ ವೈಫೈ : ಗೂಗಲ್]

ಡುವೋ ಒಂದು ವಿಡಿಯೋ ಕಾಲಿಂಗ್ ಅಪ್ಲಿಕೇಷನ್ ಆಗಿದ್ದು, ಈ ಅಪ್ಲಿಕೇಷನ್ ಬಗ್ಗೆ ಗೂಗಲ್ ಮೂರು ತಿಂಗಳ ಹಿಂದೆ ಘೋಷಿಸಿತ್ತು. ವಿಡಿಯೋ ಕಾಲಿಂಗ್ ನಲ್ಲಿದ್ದ ಸಂಕೀರ್ಣತೆಯನ್ನು ತೊಡೆದು ಹಾಕಿ, ಸರಳವಾಗಿ ವಿಡಿಯೋ ಕಾಲಿಂಗ್ ಎಲ್ಲರಿಗೂ ಲಭ್ಯವಗುವಂತೆ ಮಾಡುವುದು ಗೂಗಲ್ ನ ಉದ್ದೇಶವಾಗಿದೆ.[ಆಪ್ ಗಳಿಂದ ಖಾಸಗಿ ವಿಷಯ ಬಹಿರಂಗ ಭೀತಿ]

ಭಾರತದಂಥ ರಾಷ್ಟ್ರಗಳಲ್ಲಿ ಇರುವ ನೆಟ್ವರ್ಕ್ ಸಮಸ್ಯೆ, ಇಂಟರ್ನೆಟ್ ಸ್ಪೀಡ್ ಎಲ್ಲವನ್ನು ಪರಿಗಣಿಸಿ ಈ ಅಪ್ಲಿಕೇಷನ್ ವಿನ್ಯಾಸಗೊಳಿಸಲಾಗಿದೆ. ಇತರೆ ವಿಡಿಯೋ ಕಾಲಿಂಗ್ ಗಿಂತ ಡುವೋ ಕೊಂಚ ಭಿನ್ನವಾಗಿದೆ. ಇದರಲ್ಲಿ ಕಾಲ್ ರಿಸೀವ್ ಮಾಡುವುದಕ್ಕೂ ಮುಂಚಿತವಾಗಿ ವಿಡಿಯೋ ನೋಡಬಹುದು ಎಂದು ಗೂಗಲ್ ಗ್ರೂಪ್ ಪ್ರಾಡೆಕ್ಟ್ ಮ್ಯಾನೇಜರ್ ಅಮಿತ್ ಫುಲೆ ಅವರು ಹೇಳಿದ್ದಾರೆ.['ಕರ್ನಾಟಕ ಮೊಬೈಲ್ ಒನ್' ಸೇವೆ ಪಡೆಯುವುದು ಹೇಗೆ?]

Google launches Duo to take on Apple’s FaceTime, Skype

ವಿಡಿಯೋ ಕಾಲಿಂಗ್ ಎಂಡ್ ಟು ಎಂಡ್ ಎನ್ ಕ್ರಿಪ್ಟೆಡ್ ಆಗಿದ್ದು ಸುರಕ್ಷಿತವಾಗಿದೆ. ಇದರ ಜೊತೆಗೆ 'ನಾಕ್ ನಾಕ್' ಎಂಬ ವ್ಯವಸ್ಥೆ ನೀಡಲಾಗುತ್ತಿದ್ದು, ಮೊದಲೇ ಹೇಳಿದಂತೆ ಇದರಲ್ಲಿ ಕಾಲ್ ರಿಸೀವ್ ಮಾಡುವುದಕ್ಕೂ ಮುನ್ನ ಲೈವ್ ವಿಡಿಯೋ ನೋಡಬಹುದು.[ಗೂಗಲ್ ಶುರುಮಾಡಿದೆ ಹೊಸ ಕೋರ್ಸ್, ನೀವು ಸೇರ್ತಿರಾ?]

ಪ್ರತ್ಯೇಕ ಖಾತೆ/ ಹೆಸರು ಇಲ್ಲದೆ ಫೋನ್ ನಂಬರ್ ಬಳಸಿ ಈ ಅಪ್ಲಿಕೇಷನ್ ಬಳಸಬಹುದಾಗಿದೆ. ವಿಡಿಯೋ ಕಾಲ್ ಡ್ರಾಪ್ ಸಮಸ್ಯೆಯನ್ನು ಸುಧಾರಿಸಿದ್ದು, ಸೆಲ್ಯುಲಾರ್ ಕನೆಕ್ಷನ್ ಹಾಗೂ ವೈಫೈ ನಡುವೆ ಸ್ವಯಂಚಾಲಿತವಾಗಿ ಬದಲಾಗುವುದರಿಂದ ಕಾಲ್ ಡ್ರಾಪ್ ಸಮಸ್ಯೆ ಇರುವುದಿಲ್ಲ ಎಂದು ಗೂಗಲ್ ಹೇಳಿದೆ. ಗೂಗಲ್ ಡುವೋ ಬಗ್ಗೆ ಸದ್ಯಕ್ಕೆ ಪರಿಚಯತ್ಮಾಕ ವಿಡಿಯೋ ಕೂಡಾ ಲಭ್ಯವಿದೆ ನೋಡಿ...(ಪಿಟಿಐ)

English summary
Tech giant Google has launched its video calling app, Google Duo, for Android and iOS users, which will compete with apps like FaceTime and Skype.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X