• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೂರಾರು ವೈಯಕ್ತಿಕ ಸಾಲದ ಆ್ಯಪ್‌ಗಳನ್ನು ತೆಗೆದುಹಾಕಿದ ಗೂಗಲ್

|

ನವದೆಹಲಿ, ಜನವರಿ 14: ಸಾಲ ನೀಡಿ ಬಾಯಿಗೆ ಬಂದಷ್ಟು ಗ್ರಾಹಕರಿಗೆ ಬಡ್ಡಿ ದರ ವಿಧಿಸುತ್ತಿದ್ದ ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳನ್ನು ಗೂಗಲ್‌ ಇಂಡಿಯಾ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ.

ತನ್ನ ನೀತಿಗಳನ್ನು ಉಲ್ಲಂಘಿಸಿದ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಿರುವುದಾಗಿ ಗೂಗಲ್ ಗುರುವಾರ ಪ್ರಕಟಿಸಿದೆ. ಆದಾಗ್ಯೂ, ತೆಗೆದುಹಾಕಲಾದ ಅಪ್ಲಿಕೇಶನ್‌ಗಳ ಸಂಖ್ಯೆ ಅಥವಾ ಅಪ್ಲಿಕೇಶನ್‌ಗಳನ್ನು ಗೂಗಲ್ ಬಹಿರಂಗಪಡಿಸಿಲ್ಲ.

ಎಲ್ಲ ಮಾಹಿತಿಯೂ ಫೇಸ್‌ಬುಕ್‌ಗೆ ಸೋರಿಕೆಯಾಗುತ್ತದೆಯೇ?: ವಾಟ್ಸಾಪ್ ನೀಡಿದ ಸ್ಪಷ್ಟನೆ ಏನು?

ಬಳಕೆದಾರರ ದೂರು ಮತ್ತು ಸರ್ಕಾರಿ ಸಂಸ್ಥೆಗಳು ಸಲ್ಲಿಸಿದ ಮಾಹಿತಿ ಆಧಾರದಲ್ಲಿ ಅಪ್ಲಿಕೇಶನ್‌ಗಳನ್ನು ಪರಿಶೀಲಿಸಲಾಗಿದೆ. ಗೂಗಲ್‌ನ ಪ್ಲೇ ಸ್ಟೋರ್‌ನಲ್ಲಿ ಲಕ್ಷಾಂತರ ಬಾರಿ ಡೌನ್‌ಲೋಡ್ ಮಾಡಲಾದ ಕನಿಷ್ಠ 10 ಭಾರತೀಯ ಸಾಲ ಅಪ್ಲಿಕೇಶನ್‌ಗಳು ಕೂಡ ಗೂಗಲ್ ನಿಯಮಗಳನ್ನು ಉಲ್ಲಂಘಿಸಲಾಗಿದೆ.

''ಬಳಕೆದಾರರು ಮತ್ತು ಸರ್ಕಾರಿ ಸಂಸ್ಥೆಗಳು ಸಲ್ಲಿಸಿದ ದೂರು, ಮಾಹಿತಿ ಆಧಾರದ ಮೇಲೆ ನಾವು ಭಾರತದಲ್ಲಿ ನೂರಾರು ವೈಯಕ್ತಿಕ ಸಾಲದ ಆ್ಯಪ್‌ಗಳನ್ನು ಪರಿಶೀಲಿಸಿದ್ದೇವೆ. ನಮ್ಮ ಬಳಕೆದಾರರ ಸುರಕ್ಷತಾ ನೀತಿಗಳನ್ನು ಉಲ್ಲಂಘಿಸಿದಂತೆ ಕಂಡುಬಂದ ಅಪ್ಲಿಕೇಶನ್‌ಗಳನ್ನು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಉಳಿದ ಗುರುತಿಸಲಾದ ಡೆವಲಪರ್‌ಗಳನ್ನು ನಾವು ಈಗಾಗಲೇ ಕೇಳಿದ್ದು, ಸ್ಥಳೀಯ ಕಾನೂನುಗಳು ಮತ್ತು ನಿಬಂಧನೆಗಳನ್ನು ಅವರು ಅನುಸರಿಸುತ್ತಾರೆ ಎಂಬುದನ್ನು ನಿರೂಪಿಸಬೇಕಿದೆ'' ಎಂದು ಗೂಗಲ್ ಇಂಡಿಯಾದ ಉತ್ಪನ್ನ, ಆ್ಯಂಡ್ರಾಯ್ಡ್‌ ಭದ್ರತೆ ಮತ್ತು ಗೌಪ್ಯತೆ ಉಪಾಧ್ಯಕ್ಷ ತನ್ನ ಬ್ಲ್ಯಾಗ್‌ನಲ್ಲಿ ಪ್ರಕಟಿಸಿದ್ದಾರೆ.

ಚೀನಾದಲ್ಲಿ ಕಾಲ್ಕಿತ್ತ ಆನ್‌ಲೈನ್ ಲೋನ್‌ ಆಪ್‌ ರಾಕೆಟ್‌ ಭಾರತಕ್ಕೆ ಬಂದಿದ್ದು ಹೇಗೆ ?

60 ದಿನಗಳಲ್ಲಿ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಪೂರ್ಣ ಮರುಪಾವತಿ ಅಗತ್ಯವಿರುವ ವೈಯಕ್ತಿಕ ಸಾಲಗಳನ್ನು ನೀಡುವ ನಿಷೇಧವನ್ನು ಉಲ್ಲಂಘಿಸುತ್ತಿರುವುದಾಗಿ 10 ಮಿನಿಟ್ ಲೋನ್, ಎಕ್ಸ್-ಮನಿ ಮತ್ತು ಎಕ್ಸ್ಟ್ರಾ ಮುದ್ರಾ ಮತ್ತು ಸ್ಟೂಕ್ರೆಡ್ ಎಂಬ ನಾಲ್ಕು ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಯಿತು ಎಂದು ರಾಯಿಟರ್ಸ್ ವರದಿ ಮಾಡಿದೆ.

English summary
Google India on Thursday said it has removed those personal loan apps from its Play Store that have been found in violation of its safety policies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X