ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಇಂಟರ್ನೆಟ್ ಬಳಕೆದಾರರಿಗೆ ಗೂಗಲ್ ಹೊಸ ಸೌಲಭ್ಯ

|
Google Oneindia Kannada News

ನವದೆಹಲಿ, ಆಗಸ್ಟ್ 29: ಭಾರತದ ಇಂಟರ್ನೆನ್ ಬಳಕೆದಾರರಿಗೆ ಅನುಕೂಲವಾಗುವಂತೆ ಗೂಗಲ್ ಹೊಸ ಟೂಲ್‌ಅನ್ನು ಪರಿಚಯಿಸಿದೆ.

ಪ್ರೋಗ್ರಾಮಿಂಗ್ ಭಾಷೆಯಾದ ಗೂಗಲ್ ಗೋ ಆಪ್‌ಅನ್ನು ಇನ್ನಷ್ಟು ಸುಧಾರಿಸಿರುವ ಸಂಸ್ಥೆಯು 28 ಭಾಷೆಗಳಲ್ಲಿ ಕೋಟ್ಯಂತರ ವೆಬ್‌ ಪುಟಗಳನ್ನು 'ಕೇಳಿಸಿಕೊಳ್ಳುವ' ಅವಕಾಶವನ್ನು ನೀಡಿದೆ.

ಗೂಗಲ್ ಇಂಡಿಯಾ 'ತೇಜ್' ಹೆಸರು ಬದಲು, ಪೇಮೆಂಟ್ ಸುಲಭ!ಗೂಗಲ್ ಇಂಡಿಯಾ 'ತೇಜ್' ಹೆಸರು ಬದಲು, ಪೇಮೆಂಟ್ ಸುಲಭ!

'ಗೂಗಲ್ ಗೋ ಆಪ್‌ಅನ್ನು ಬಳಸುತ್ತಿರುವ ಎಲ್ಲರಿಗೂ ವೆಬ್ ಪೇಜ್‌ಗಳನ್ನು ಸ್ವಾಭಾವಿಕವಾಗಿ ಕೇಳಿಸುವ ಧ್ವನಿಯಲ್ಲಿ ಜೋರಾಗಿ ಕೇಳಿಸಿಕೊಳ್ಳಲು ಸಾಧ್ಯವಾಗುವಂತೆ ಹೊಸ ಫೀಚರ್‌ಅನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದನ್ನು 2ಜಿ ಸಂಪರ್ಕದಲ್ಲಿಯೂ ಬಳಸಿಕೊಳ್ಳಬಹುದು' ಎಂದು ಗೂಗಲ್ ತನ್ನ ಬ್ಲಾಗ್‌ನಲ್ಲಿ ತಿಳಿಸಿದೆ.

google go app new feature for indian internet users

ಈ ತಂತ್ರಜ್ಞಾನವನ್ನು ಬಳಸಿಕೊಂಡು ಉದ್ದನೆಯ ಪಠ್ಯಗಳನ್ನು ಟಿವಿಯನ್ನು ನೋಡುವಂತೆ ಅಥವಾ ರೇಡಿಯೋ ಕೇಳಿಸಿಕೊಳ್ಳುವಂತೆ ಸುಲಭವಾಗಿ ಪಡೆದುಕೊಳ್ಳಬಹುದು.

ಕೋಟ್ಯಂತರ ಇಂಟರ್ನೆಟ್ ಬಳಕೆದಾರರನ್ನು ಸೆಳೆಯುವುದಕ್ಕಾಗಿ ಗೂಗಲ್ ಕಳೆದ ವರ್ಷ ಭಾರತ ಮತ್ತು ಇಂಡೋನೇಷ್ಯಾದಲ್ಲಿ ಈ ಆಪ್‌ಅನ್ನು ಬಿಡುಗಡೆ ಮಾಡಿತ್ತು.

ಕೇರಳ ಸಂತ್ರಸ್ತರನ್ನು ಹುಡುಕಲು ನೆರವಾಗಲಿದೆ ಗೂಗಲ್ ಟೂಲ್!ಕೇರಳ ಸಂತ್ರಸ್ತರನ್ನು ಹುಡುಕಲು ನೆರವಾಗಲಿದೆ ಗೂಗಲ್ ಟೂಲ್!

'ಭಾರತಕ್ಕಾಗಿ ಗೂಗಲ್. ಪ್ರತಿ ಭಾರತೀಯನಿಗೂ ಅವರದೇ ಭಾಷೆಯಲ್ಲಿ ಸೇವೆಯ ಸೌಲಭ್ಯ' ಎಂಬ ಶೀರ್ಷಿಕೆಯೊಂದಿಗೆ ಗೂಗಲ್ ಈ ಆಪ್ ಪರಿಚಯಿಸಿತ್ತು.

ಭಾರತವು ಜಗತ್ತಿನ ಎರಡನೆಯ ಅತಿ ದೊಡ್ಡ ಅಂತರ್ಜಾಲ ಬಳಕೆಯ ದೇಶವಾಗಿದ್ದು, ವೇಗವಾಗಿ ಬೆಳೆಯುತ್ತಿದೆ ಎಂದು ಗೂಗಲ್ ಹೇಳಿತ್ತು.

ಭಾರತದ ಈ ಇಂಟರ್ನೆಟ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಗೂಗಲ್, ವಿಷಯಗಳನ್ನು ಪಠ್ಯ ರೂಪದ ಬದಲು ಕೇಳಿಸುವ ಮತ್ತು ಹೇಳುವ ಸೌಲಭ್ಯವನ್ನು ಒದಗಿಸಿದೆ.

ತಂತ್ರಜ್ಞಾನ ದೈತ್ಯ ಗೂಗಲ್ ಮೇಲೆ ಭಾರಿ ಮೊತ್ತದ ದಂಡತಂತ್ರಜ್ಞಾನ ದೈತ್ಯ ಗೂಗಲ್ ಮೇಲೆ ಭಾರಿ ಮೊತ್ತದ ದಂಡ

ಕನ್ನಡ, ತೆಲುಗು, ಮಲಯಾಳಂ, ತಮಿಳು, ಹಿಂದಿ, ಬಂಗಾಳಿ, ಮರಾಠಿ ಸೇರಿದಂತೆ ಭಾರತದ 28 ಭಾಷೆಗಳಲ್ಲಿ ಈ ಆಪ್ ಸೇವೆ ಒದಗಿಸಲಿದೆ.

ವಿಭಿನ್ನ ಹಿನ್ನೆಲೆಗಳಿಂದ ಬಂದ ಜನರು ಗೂಗಲ್ ಗೋ ಆಪ್ ಬಳಸುತ್ತಿದ್ದಾರೆ. ಹೊಸ ಪದಗಳನ್ನು ಓದಲು ಮತ್ತು ಉಚ್ಚರಿಸಲು ಅವರು ಹೆಚ್ಚುವರಿ ಸೌಲಭ್ಯಗಳನ್ನು ಬಯಸುತ್ತಾರೆ. ಕಾಣುವ ಮತ್ತು ಓದುವ ಸಮಸ್ಯೆ ಹೊಂದಿರುವವರಿಗೆ, ವಿದೇಶಿ ಭಾಷೆ ಕಲಿಯುತ್ತಿರುವವರಿಗೆ ಅಥವಾ ಉದ್ದನೆಯ ಬರಹಗಳನ್ನು ಓದಲು ಕಷ್ಟವೆನಿಸುವವರಿಗೆ ಈ ಹೊಸ ಫೀಚರ್‌ಗಳು ನೆರವಾಗಲಿದೆ ಎಂದು ಗೂಗಲ್ ಹೇಳಿದೆ.

English summary
Google has launched a new feature for Indian internet users. Users can now listen web pages in 28 languages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X