ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂತ್ರಜ್ಞಾನ ದೈತ್ಯ ಗೂಗಲ್ ಮೇಲೆ ಭಾರಿ ಮೊತ್ತದ ದಂಡ

By Mahesh
|
Google Oneindia Kannada News

ನ್ಯೂಯಾರ್ಕ್, ಜುಲೈ 18: ಯುಎಸ್ ಮೂಲದ ತಂತ್ರಜ್ಞಾನ ದೈತ್ಯ ಗೂಗಲ್ ಸಂಸ್ಥೆ ಮೇಲೆ ಭಾರಿ ಮೊತ್ತದ ದಂಡವನ್ನು ಯುರೋಪಿಯನ್ ನಿಯಂತ್ರಕರು ಹೇರಿದ್ದಾರೆ. ಆಂಡ್ರಾಯ್ಡ್ ಮೊಬೈಲ್ ಫೋನ್ ಗಳಲ್ಲಿ ತನ್ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಅಳವಡಿಸುವಂತೆ ಒತ್ತಡ ಹೇರಿದ್ದರಿಂದ ದಂಡ ತೆರಬೇಕಾಗಿದೆ.

ಗೂಗಲ್ ತನ್ನ ಸರ್ಚ್ ಇಂಜಿನ್, ಆಪರೇಟಿಂಗ್ ಸಿಸ್ಟಮ್ ಹಾಗೂ ಇನ್ನಿತರ ಅಪ್ಲಿಕೇಷನ್ ಗಳನ್ನು ಮೊಬೈಲ್ ಫೋನ್ ಗಳಲ್ಲಿ ಬಲವಂತವಾಗಿ ಅಳವಡಿಸುವಂತೆ ಮಾಡಿರುವ ಆರೋಪ ಹೊತ್ತಿದೆ. ಇದಕ್ಕಾಗಿ ಐರೋಪ್ಯ ಒಕ್ಕೂಟವು 4.34 ಬಿಲಿಯನ್ ಯುರೋಸ್ (ಸುಮಾರು 34,257 ಕೋಟಿ ರೂಪಾಯಿ) ಮೊತ್ತದ ಭಾರಿ ದಂಡ ವಿಧಿಸಿದೆ.

Google fined record $6 billion by EU for breaking antitrust laws

ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳಲ್ಲಿ ಶೋಧ ಮತ್ತು ವೆಬ್ ಬ್ರೌಸರ್ ಆಪ್‌ಗಳನ್ನು ಅಳವಡಿಸುವ ರೀತಿಯನ್ನು ಬದಲಾಯಿಸುವಂತೆ ಅದು ಗೂಗಲ್‌ಗೆ ಆದೇಶ ನೀಡಿದೆ.

ಕೆಲಸ ಹುಡುಕಾಟ ಸುಲಭಗೊಳಿಸಿದ ಗೂಗಲ್ ಸರ್ಚ್ ಕೆಲಸ ಹುಡುಕಾಟ ಸುಲಭಗೊಳಿಸಿದ ಗೂಗಲ್ ಸರ್ಚ್

ಮೊಬೈಲ್ ಬಳಕೆದಾರರಿಗೆ ಗೂಗಲ್ ಉತ್ಪನ್ನಗಳನ್ನು ತಲುಪಿಸುವುದಕ್ಕಾಗಿ ಮೊಬೈಲ್ ಫೋನ್ ತಯಾರಿಕಾ ಕಂಪೆನಿಗಳೊಂದಿಗೆ 'ಅಕ್ರಮ ಒಪ್ಪಂದ'ಗಳನ್ನು ಮಾಡಿಕೊಳ್ಳುವುದನ್ನು ನಿಲ್ಲಿಸಲು ಐರೋಪ್ಯ ಒಕ್ಕೂಟ 90 ದಿನಗಳನ್ನು ಗೂಗಲ್‌ಗೆ ನೀಡಿದೆ.

ಇದು ಗೂಗಲ್ ಪಾಲಿಗೆ ದೊಡ್ಡ ಮೊತ್ತವಲ್ಲದಿದ್ದರೂ, ಮಾರುಕಟ್ಟೆಯಲ್ಲಿ ಸಂಸ್ಥೆಯ ಘನತೆಗೆ ಧಕ್ಕೆ ತಂದಿದೆ. ಯೂಟ್ಯೂಬ್, ಮ್ಯಾಪ್ಸ್, ಜಿಮೇಲ್ ,ಗೂಗಲ್ ಸರ್ಚ್, ಕ್ರೋಮ್ ಬ್ರೌಸರ್ ಹಾಗೂ ಆಪ್ ಸ್ಟೋರ್ ಪ್ಲೇಸ್ಟೋರ್ ಅಳವಡಿಸಲು ಬಲವಂತವಾಗಿ ಮೊಬೈಲ್ ಸಂಸ್ಥೆಗಳ ಮೇಲೆ ಒತ್ತಡ ಹೇರಲಾಗಿದೆ ಎಂದು ಮೂರು ವರ್ಷಗಳ ತನಿಖೆ ಬಳಿಕ ತಿಳಿದು ಬಂದಿದೆ.

ಕಾಂಪಿಟೇಷನ್ ಕಮಿಷನ್ ನಿಂದ ಗೂಗಲ್ ಗೆ ರೂ. 136 ಕೋಟಿ ದಂಡ ಕಾಂಪಿಟೇಷನ್ ಕಮಿಷನ್ ನಿಂದ ಗೂಗಲ್ ಗೆ ರೂ. 136 ಕೋಟಿ ದಂಡ

ಈ ವರ್ಷದ ಮೊದಲ ಮೂರು ತಿಂಗಳಿನಲ್ಲಿ ಗೂಗಲ್ ನ ಆಲ್ಪಬೆಟ್ 12.7 ಬಿಲಿಯನ್ ಡಾಲರ್ ಲಾಭ ಗಳಿಸಿದೆ. 102.9 ಬಿಲಿಯನ್ ಡಾಲರ್ ನಗದು ಆದಾಯ ಹೊಂದಿದೆ.

English summary
European regulators came down hard on US tech giant Google, fining it a record 4.34 billion euros ($6.8 billion) for forcing mobile phone makers that use the company’s Android operating system to install Google search and browser apps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X