ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ಉದ್ಯೋಗಿಗಳಿಗೆ ಜುಲೈ 2021ರವರೆಗೆ ವರ್ಕ್ ಫ್ರಮ್ ಹೋಮ್

|
Google Oneindia Kannada News

ನವದೆಹಲಿ, ಜುಲೈ 28: ವಿಶ್ವದ ಅತಿದೊಡ್ಡ ಸರ್ಚ್‌ ಎಂಜಿನ್ ಗೂಗಲ್ ತನ್ನ ಸಂಸ್ಥೆಯ 2 ಲಕ್ಷ ಉದ್ಯೋಗಿಗಳು ಮತ್ತು ಗುತ್ತಿಗೆದಾರ ಸಿಬ್ಬಂದಿಗೆ 2021 ಜೂನ್ ವರೆಗೂ ಮನೆಯಿಂದಲೇ ಕೆಲಸ ಮಾಡಬೇಕೆಂದು ನಿರ್ದೇಶಿಸಿದೆ.

Recommended Video

Japan ಇಲ್ಲಿನ ಪ್ರತಿ ಮನೆಗೂ ಮಾಸ್ಕ್ ಜೊತೆ ದುಡ್ಡು ಕೊಟ್ರು | Oneindia Kannada

ಕೊರೊನಾವೈರಸ್ ಸೋಂಕು ಹರಡುವಿಕೆಯು ದಿನದಿಂದ ದಿನಕ್ಕೆ ಏರುತ್ತಲೇ ಸಾಗುತ್ತಿದ್ದು, ಉದ್ಯೋಗಿಗಳ ಆರೋಗ್ಯ ರಕ್ಷಣೆಯ ದೃಷ್ಟಿಯಲ್ಲಿ ಗೂಗಲ್ ಸಂಸ್ಥೆಯು ಈ ನಿರ್ಧಾರಕ್ಕೆ ಬಂದಿದೆ. ಗೂಗಲ್‌ನ ಹೊರತಾಗಿ, ಇತರ ಹಲವು ಟೆಕ್ ಕಂಪನಿಗಳು ತಮ್ಮ ಉದ್ಯೋಗಿಗಳಿಗಾಗಿ ಮನೆಯಿಂದ ಕೆಲಸ ಮಾಡಲು ಆಶ್ರಯಿಸಿವೆ ಆದರೆ ವಿಸ್ತರಣೆಯನ್ನು ಯೋಜಿಸುತ್ತಿರುವ ಏಕೈಕ ಕಂಪನಿ ಗೂಗಲ್ ಆಗಿದೆ.

ಸೆಪ್ಟೆಂಬರ್‌ನಲ್ಲಿ ಆ್ಯಂಡ್ರಾಯ್ಡ್‌ 11 ಬಿಡುಗಡೆ: ಸಿಹಿ ತಿಂಡಿ ಹೆಸರು 'ರೆಡ್ ವೆಲ್ವೆಟ್ ಕೇಕ್'ಸೆಪ್ಟೆಂಬರ್‌ನಲ್ಲಿ ಆ್ಯಂಡ್ರಾಯ್ಡ್‌ 11 ಬಿಡುಗಡೆ: ಸಿಹಿ ತಿಂಡಿ ಹೆಸರು 'ರೆಡ್ ವೆಲ್ವೆಟ್ ಕೇಕ್'

ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಗೂಗಲ್ ಸಿಇಒ ಸುಂದರ್ ಪಿಚೈ ಅವರು ಉನ್ನತ ಅಧಿಕಾರಿಗಳೊಂದಿಗೆ ಈ ಬಗ್ಗೆ ಮಾತನಾಡಿದ್ದಾರೆ. ಪಿಚೈ ಸೋಮವಾರ ಹೊರಡಿಸಿದ ರಿಮೋಟ್-ವರ್ಕ್ ಆದೇಶವು ಗೂಗಲ್‌ನ ಕಾರ್ಪೊರೇಟ್ ಪೋಷಕ ಆಲ್ಫಾಬೆಟ್ ಇಂಕ್ ಒಡೆತನದ ಇತರ ಕಂಪನಿಗಳಿಗೂ ಅನ್ವಯಿಸಲಿದೆ. ಈ ವರ್ಷ ಉಳಿದ ದಿನಗಳಲ್ಲಿ ತನ್ನ ಹೆಚ್ಚಿನ ಕಚೇರಿಗಳನ್ನು ಮುಚ್ಚುವ ಗೂಗಲ್‌ನ ಹಿಂದಿನ ಯೋಜನೆಗೆ ಆರು ತಿಂಗಳ ವಿಸ್ತರಣೆ ಮಾಡಲಾಗಿದೆ.

Google Employees To Work From Home Until July 2021

"ಈ ವಿಸ್ತೃತ ಟೈಮ್‌ಲೈನ್ ಗೆ ಮಿಶ್ರ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗಿದೆ. ಆದರೆ ನೀವು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ" ಆಲ್ಫಾಬೆಟ್‌ನ ಸಿಇಒ ಆಗಿರುವ ಪಿಚೈ ಉದ್ಯೋಗಿಗಳಿಗೆ ಬರೆದ ಈ ಮೇಲ್ ನಲ್ಲಿ ಹೇಳಿದ್ದಾರೆ. ದಿ ವಾಲ್ ಸ್ಟ್ರೀಟ್ ಜರ್ನಲ್ ಪಿಚೈ ಅವರ ಈ ನಿರ್ಧಾರವನ್ನು ಮೊದಲು ಪ್ರಕಟ ಮಾಡಿದೆ.

ಗೂಗಲ್ ಈ ಮೊದಲು ಜುಲೈ 6, 2020 ರೊಳಗೆ ತನ್ನ ಕೆಲವು ಕಚೇರಿಗಳನ್ನು ಮತ್ತೆ ತೆರೆಯುವ ಯೋಜನೆಯನ್ನು ಹೊಂದಿತ್ತು. ಆದರೆ ಈಗ ಸೇರ್ಪಡೆ ದಿನಾಂಕವನ್ನು ಜುಲೈ 2021 ರವರೆಗೆ ವಿಸ್ತರಿಸಿದೆ.

ಗೂಗಲ್‌ನ ಕಚೇರಿಗಳ ದೀರ್ಘಕಾಲದ ಲಾಕ್‌ಡೌನ್ ಇತರ ಪ್ರಮುಖ ಸಂಸ್ಥೆಗಳ ಮುಖ್ಯಸ್ಥರಿಗೂ ಇದೇ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸಬಹುದು.

English summary
Google has some new working plans for its employees. A report claims that Google is planning to make its 200,000 full-time and contract employees work remotely until July 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X