ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಚ್ ಇಂಜಿನ್ ಗೂಗಲ್ ಗೆ 17ರ ಹರೆಯ, ವಿಶ್ ಮಾಡಿ

By Mahesh
|
Google Oneindia Kannada News

ಬೆಂಗಳೂರು, ಸೆ. 27: ಸರ್ಚ್ ಇಂಜಿನ್ ಲೋಕದ ದಿಗ್ಗಜ ಗೂಗಲ್ ಸಂಸ್ಥೆ ಇಂದು (ಸೆ.27) ತನ್ನ 17ನೇ ಹುಟ್ಟುಹಬ್ಬವನ್ನು ಹೊಸ ಗೂಗಲ್ ಡೂಡ್ಲ್ ಮೂಲಕ ಆಚರಿಸುತ್ತಿದೆ. ಅಂತರ್ಜಾಲ ಸಂಬಂಧಿತ ಅನೇಕಾನೇಕ ಸೇವೆ ಹಾಗೂ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಗೂಗಲ್ ಈಗ ಆಲ್ಫಾಬೆಟ್ ಸಂಸ್ಥೆಯ ಅಂಗವಾಗಿದೆ.

ಆಲ್ಫಾಬೆಟ್ ನ ಅಂಗವಾದ ಮೇಲೆ ಹಾಗೂ ಭಾರತೀಯ ಮೂಲದ ಸುಂದರ್ ಪಿಚೈ ಅವರು ಸಿಇಒ ಆದಮೇಲೆ ಇದು ಗೂಗಲ್ ಗೆ ಮೊದಲ ಹುಟ್ಟು ಹಬ್ಬವಾಗಿದೆ. ಹುಟ್ಟುಹಬ್ಬದ ಶುಭ ಸಂದರ್ಭಕ್ಕಾಗಿ ಅನಿಮೇಟೆಡ್ ಗೂಗಲ್ ಚಿತ್ರವನ್ನು ತನ್ನ ಮುಖ್ಯಪುಟದಲ್ಲಿ ಹಾಕಿಕೊಂಡಿದೆ.

ಗೂಗಲ್ ಡೂಡ್ಲ್ ನಲ್ಲಿ ಕಂಪ್ಯೂಟರ್ ಮಾನಿಟರ್, ಲಾವಾ ಲ್ಯಾಂಪ್, ಇಣುಕು ನೋಡುತ್ತಿರುವ ಪುಟ್ಟ ಪೆಂಗ್ವಿನ್, ಬಲೂನ್ ಗಳಿವೆ. ಗೂಗಲ್ ಡೂಡ್ಲ್ ಪುಟಕ್ಕೆ ಹೋದರೆ [ಲಿಂಕ್ ಇಲ್ಲಿದೆ] ಗೂಗಲ್ ಸಂಸ್ಥೆಯ ಹಳೆಯ ಡೂಡ್ಲ್ ಗಳು, ಮೊಟ್ಟ ಮೊದಲ ಬಾರಿಗೆ ಗೂಗಲ್ ಕಚೇರಿ ಚಿತ್ರಣ ಸೇರಿದಂತೆ ಅನೇಕ ಮಾಹಿತಿಗಳು ಸಿಗುತ್ತದೆ.

Google celebrates 17th Birthday with animated Doodle on homepage

ಗೂಗಲ್ ಹುಟ್ಟುಹಬ್ಬದ ದಿನಾಂಕವೂ ಕುತೂಹಲಕಾರಿಯಾಗಿದೆ. 2005ರ ತನಕ ಸೆ.7ರಂದು ಗೂಗಲ್ ತನ್ನ ಹುಟ್ಟುಹಬ್ಬ ದಿನವನ್ನಾಗಿ ಆಚರಿಸುತ್ತಾ ಬಂದಿತ್ತು. ನಂತರ ಸೆ.27ಕ್ಕೆ ಇದು ಬದಲಾಯಿತು.

ಸೆ.4, 1998ರಲ್ಲಿ ಸ್ಟಾಡ್ ಫೋರ್ಡ್ ನ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಲ್ಯಾರಿ ಪೇಜ್ ಹಾಗೂ ಸರ್ಗೆಬ್ರಿನ್ ಅವರು ಇಂಟೆರ್ ನೆಟ್ ನಲ್ಲಿ ಹುಡುಕುವಿಕೆಯನ್ನು ಸುಧಾರಣೆಗೊಳಿಸಲು ಗೂಗಲ್ ಎಂಬ ಹೊಸ ಸಂಸ್ಥೆ ಹುಟ್ಟುಹಾಕಿದರು. ಹೊಸ ಡೂಡ್ಲ್ ಚಿತ್ರದೊಂದಿಗೆ ಸೆ.27 ರಂದು ತನ್ನ ವಾರ್ಷಿಕೋತ್ಸವ ಗೂಗಲ್ ಆಚರಿಸುತ್ತದೆ.

ಡೂಡ್ಲ್ ಚಿತ್ರ: ಭಾರತ ಸೇರಿದಂತೆ ವಿಶ್ವದ ಅನೇಕ ವಿದ್ಯಮಾನಗಳು, ಐತಿಹಾಸಿಕ ದಿನಗಳು, ಹಬ್ಬ ಹರಿದಿನಗಳು, ಆಚರಣೆಗಳ ಸಂದರ್ಭದಲ್ಲಿ ಗೂಗಲ್ ತನ್ನ ಡೂಡ್ಲ್ ರೇಖಾಚಿತ್ರದ ಮೂಲಕ ಸಾಧಕರನ್ನು ಸ್ಮರಿಸುವ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಬಂದಿದೆ.

ಗೂಗಲ್ ಲೋಗೋವನ್ನು ಕಲಾತ್ಮಕವಾಗಿ ರೂಪಿಸುವುದಕ್ಕೆ ಡೂಡಲ್ಸ್ ಎನ್ನಲಾಗುತ್ತದೆ. ಪ್ರತಿ ವರ್ಷ ಶಾಲಾ ಮಕ್ಕಳಿಗೆ ಡೂಡ್ಲ್ ರಚನೆ ಸ್ಪರ್ಧೆ ಏರ್ಪಡಿಸಲಾಗುತ್ತದೆ.

English summary
The search engine giant Google is celebrating its 17th birthday today (September 27) by posting an animated doodle on its homepage. The internet giant has chosen September 27 to celebrate its birthday since 2006.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X