ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೈನಂದಿನ ಅಗತ್ಯ App ಗೂಗಲ್ ಪ್ರಶಸ್ತಿ ಗೆದ್ದ ಕೂ ಆ್ಯಪ್

|
Google Oneindia Kannada News

ಬೆಂಗಳೂರು, ಡಿ 1: ಗೂಗಲ್ ಪ್ಲೇಸ್ಟೋರ್ ಪ್ರತಿವರ್ಷ ಏರ್ಪಡಿಸುವ ಬಳಕೆದಾರರ ನೆಚ್ಚಿನ ಅಪ್ಲಿಕೇಶನ್ ಗಳ ಆಯ್ಕೆ ಸ್ಪರ್ಧೆಯಲ್ಲಿ ಸಾವಿರಾರು ಅಪ್ಲಿಕೇಶನ್ ಗಳ ಪೈಕಿ 2020 ರ ಭಾರತದ ಅತ್ಯುತ್ತಮ ದೈನಂದಿನ ಅಗತ್ಯವಿರುವ ಅಪ್ಲಿಕೇಶನ್‌ ವಿಭಾಗದಲ್ಲಿ ಕೂ ಆ್ಯಪ್ ಪ್ರಶಸ್ತಿ ಗೆದ್ದಿದೆ.

ಕೂ ಭಾರತೀಯ ಭಾಷೆಗಳಲ್ಲಿ ಭಾರತದ ಸ್ವಂತ ಮೈಕ್ರೋಬ್ಲಾಗಿಂಗ್ ವೇದಿಕೆಯಾಗಿದೆ. ಕೂ ಹಿಂದಿ, ಕನ್ನಡ, ತೆಲುಗು, ತಮಿಳು, ಬಂಗಾಳಿ, ಗುಜರಾತಿ ಮತ್ತು ಮರಾಠಿ ಭಾಷೆಗಳಲ್ಲಿ ಲಭ್ಯವಿದ್ದು, ಇದು ಶೀಘ್ರದಲ್ಲೇ ಇಂಗ್ಲಿಷ್ ಭಾಷೆಯಲ್ಲಿ ಸಹ ಆರಂಭವಾಗಲಿದೆ. ಮೈಕ್ರೋಬ್ಲಾಗಿಂಗ್ ವೇದಿಕೆಯಲ್ಲಿ ಕೂ ನೇರವಾಗಿ ಟ್ವಿಟ್ಟರ್‌ನೊಂದಿಗೆ ಸ್ಪರ್ಧಿಸುತ್ತಿವೆ.

ಭಾರತದ 90% ಜನರು ಇಂಗ್ಲಿಷ್ ಮಾತನಾಡುವುದಿಲ್ಲ ಮತ್ತು ಇಂಟರ್ನೆಟ್ ಬಳಕೆಯ ಹೆಚ್ಚಿನ ಭಾಗವನ್ನು ಇಂಗ್ಲಿಷ್ ನಲ್ಲಿಯೇ ನಿರ್ಮಿಸಲಾಗಿದೆ. ಇದರ ಫಲವಾಗಿ, ಇಂದು ಅಂತರ್ಜಾಲದಲ್ಲಿ ಭಾರತೀಯ ಭಾಷೆಗಳ ವಿಷಯದ ಕೊರತೆಯಿದೆ. ಕೂ ಭಾರತದ ಭಾಷೆ ಮಾತನಾಡುವವರಿಗೆ ತಮ್ಮ ಮಾತೃಭಾಷೆಯಲ್ಲಿ ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಲು ಮತ್ತು ಇತರರ ಆಲೋಚನೆಗಳನ್ನು ತಮ್ಮ ಆದ್ಯತೆಯ ಭಾಷೆಯಲ್ಲಿ ವ್ಯಕ್ತಪಡಿಸಲು ವೇದಿಕೆಯನ್ನು ನೀಡುತ್ತದೆ. ಕೂನಲ್ಲಿ ಬಳಕೆದಾರರು ಭಾರತೀಯ ಭಾಷೆಯಲ್ಲಿ ಪಡೆಯುವ ವಿಶೇಷ ಅನುಭವವು ಬೇರೆ ಯಾವುದೇ ಮೈಕ್ರೋಬ್ಲಾಗ್‌ನಲ್ಲಿ ಲಭ್ಯವಿರುವುದಿಲ್ಲ.

Google Awards 2020: Koo App won Best Essential App

ಆಗಸ್ಟ್ 2020 ರಲ್ಲಿ ಸರ್ಕಾರ ನಡೆಸಿದ ಆತ್ಮನಿರ್ಭರ್ ಆ್ಯಪ್ ಇನ್ನೋವೇಶನ್ ಚಾಲೆಂಜ್ ನಲ್ಲಿ ಕೂ ಆ್ಯಪ್ ಗೆಲುವನ್ನು ಘೋಷಿಸಲಾಯಿತು. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಭಾಷೆಗಳಲ್ಲಿ ತಮ್ಮನ್ನು ತಾವು ಅಭಿವ್ಯಕ್ತಿಸಲು ಕೂ ಆ್ಯಪ್ ಬಳಸಿ ಪ್ರೋತ್ಸಾಹಿಸುವಂತೆ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಭಾರತೀಯರನ್ನುದ್ದೇಶಿಸಿ ಮಾತನಾಡಿದರು.

ಅಪ್ರಮೇಯ ರಾಧಾಕೃಷ್ಣ, ಕೂ ಸಿಇಒ ಮತ್ತು ಸಹ ಸಂಸ್ಥಾಪಕರು - ಮಾತನಾಡುತ್ತ ''ಗೂಗಲ್‌ನಿಂದ ಈ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ನಾವು ತುಂಬಾ ಹೆಮ್ಮೆಪಡುತ್ತೇವೆ ಮತ್ತು ಕೃತಜ್ಞರಾಗಿರುತ್ತೇವೆ. ಪ್ಲೇಸ್ಟೋರ್‌ನಲ್ಲಿರುವ ಸಾವಿರಾರು ಅಪ್ಲಿಕೇಶನ್‌ಗಳಿಂದ ಕೂವನ್ನು ಆಯ್ಕೆ ಮಾಡಲಾಗಿದೆ. ನಾವು ಮಾರ್ಚ್‌ನಲ್ಲಿ ಕೂ ಆ್ಯಪ್ ಪ್ರಾರಂಭಿಸಿದಾಗಿನಿಂದ ಕೇವಲ 8 ತಿಂಗಳ ಅಲ್ಪಾವಧಿಯಲ್ಲಿ ಪಡೆದ ಬಳಕೆದಾರರ ಅನನ್ಯ ಪ್ರೀತಿಗೆ ಸಾಕ್ಷಿಯಾಗಿದ್ದೇವೆ. ಜನರು ತಮ್ಮ ಮಾತೃ ಭಾಷೆಯಲ್ಲಿ ತಮ್ಮ ಮನದಾಳವನ್ನು ವ್ಯಕ್ತಪಡಿಸಲು ಸಹಾಯ ಮಾಡುವ ಹಾಗು ಬರೆಯುವ ಉತ್ಸಾಹವನ್ನು ನಾವು ಪ್ರೋತ್ಸಾಹಿಸುತ್ತೇವೆ. ಈ ಶುಭ ಸಂದರ್ಭದಲ್ಲಿ ನಾವು ಪ್ರತಿಯೊಬ್ಬರನ್ನು ಕೂ ವೇದಿಕೆಯನ್ನು ಸೇರಲು ಹಾಗು ಕೂ ಕುಟುಂಬದ ಭಾಗವಾಗಲು ಆಹ್ವಾನಿಸುತ್ತೇವೆ. ''

ಕೂ ಸಹ ಸಂಸ್ಥಾಪಕ ಮಯಾಂಕ್ ಬಿಡಾವತ್ಕಾ ಅವರು, ಮಾತನಾಡಿ ''ಕೂ ಅಪ್ಲಿಕೇಷನನ್ನು ಭಾರತದ ಮತ್ತು ಭಾರತೀಯರ ಧ್ವನಿಯನ್ನು ಪ್ರತಿನಿಧಿಸಲು ರಚಿಸಲಾಗಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯವು ಕೂ ನ ಅಂತರಂಗದಲ್ಲಿದೆ. ನಾವು ಭಾರತೀಯರಿಗೆ ತಮ್ಮ ಆಲೋಚನೆಗಳನ್ನು ದೊಡ್ಡ ಸಮುದಾಯದೊಂದಿಗೆ ಹಂಚಿಕೊಳ್ಳಲು ಮತ್ತು ವಿಶ್ವದಾದ್ಯಂತ ಭಾರತೀಯರನ್ನು ಅವರ ಮಾತೃಭಾಷೆಯಲ್ಲಿ ಒಂದುಗೂಡಿಸಲು ಸಹಾಯ ಮಾಡುತ್ತೇವೆ. ಕೂ ೨೦೨೦ ರಲ್ಲಿ ಗೂಗಲ್ನ ಅತ್ಯುತ್ತಮ ಅಪ್ಲಿಕೇಶನ್‌ಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿರುವುದಕ್ಕಾಗಿ ಸಂತೋಷಪಡುತ್ತೇವೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು ಪ್ರಾರಂಭಿಸಿದ ಆತ್ಮಾನಿರ್ಭರ ಮಿಷನ್‌ಗೆ ನಾವು ಬದ್ಧರಾಗಿದ್ದೇವೆ ಮತ್ತು ಭಾರತವು ಹೆಮ್ಮೆ ಪಡುವಂತಹ ಡಿಜಿಟಲ್ ಉತ್ಪನ್ನವನ್ನು ರಚಿಸಲು ಪ್ರಯತ್ನಿಸುತ್ತೇವೆ.''

Google Awards 2020: Koo App won Best Essential App

ಎಲ್ಲಾ ಹಂತದ ವೃತ್ತಿಯ ಹಾಗೂ ವಿಭಾಗದ ಜನರು ಕೂನಲ್ಲಿದ್ದಾರೆ - ರಾಜಕಾರಣಿಗಳು, ಕನ್ನಡ ಚಲನಚಿತ್ರೋದ್ಯಮಿಗಳು, ಕ್ರೀಡಾ ತಾರೆಗಳು, ಲೇಖಕರು, ಬರಹಗಾರರು, ಕವಿಗಳು, ಗಾಯಕರು, ಸಂಗೀತ ಸಂಯೋಜಕರು, ಪತ್ರಕರ್ತರು, ಸಂಪಾದಕರು ಮತ್ತು ಲಕ್ಷಾಂತರ ಬಳಕೆದಾರರು 1000 ಕ್ಕೂ ವಿವಿಧ ವೃತ್ತಿಗಳಲ್ಲಿರುವ ಜನರಿದ್ದಾರೆ. ರೈತರು, ಚಾಲಕರು, ಬಡಗಿಗಳು ಮತ್ತು ಎಲ್ಲೂ ಕೇಳದ ಸಮಾಜದ ಕೆಲವು ವರ್ಗಗಳಿಂದ ಕೂ ವೇದಿಕೆ ಧ್ವನಿಯಾಗಿದೆ.

English summary
Google Awards 2020: A Made in India app Koo- a micro blogging application has won Best Essential App.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X