ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್, ಅಮೆಜಾನ್ ಮೇಲೆ 163 ಮಿಲಿಯನ್ ಡಾಲರ್ ದಂಡ

|
Google Oneindia Kannada News

ಪ್ಯಾರೀಸ್, ಡಿ. 11: ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ಹಾಗೂ ಪ್ರಮುಖ ಇ ಕಾಮರ್ಸ್ ಸಂಸ್ಥೆ ಅಮೆಜಾನ್ ಮೇಲೆ ಫ್ರಾನ್ಸ್ ನಲ್ಲಿ ಭಾರಿ ದಂಡ ಹಾಕಲಾಗಿದೆ. ದೇಶದ ನಾಗರಿಕರ ಖಾಸಗಿ ಗೌಪ್ಯತೆ ನಿಯಮಾವಳಿಗಳನ್ನು ಈ ಎರಡು ಸಂಸ್ಥೆಗಳು ಪಾಲಿಸಿಲ್ಲ ಎಂದು ತಿಳಿದು ಬಂದಿದೆ.

ಇಂಟರ್ನೆಟ್ ಬಳಕೆದಾರರ ಅನುಮತಿ ಇಲ್ಲದೆ ಟ್ರಾಕರ್ ಅಥವಾ ಕುಕ್ಕಿಸ್ ಬಳಸಿ ಬಳಕೆದಾರರ ಮಾಹಿತಿ ಪಡೆಯುವುದು ಹಾಗೂ ಇದನ್ನು ಬಳಸಿಕೊಂಡು ಜಾಹೀರಾತುಗಳನ್ನು ಹೇರಿಕೆ ಮಾಡಲಾಗಿದೆ ಎಂಬ ಆರೋಪವನ್ನು ಗೂಗಲ್ ಹಾಗೂ ಅಮೆಜಾನ್ ಮೇಲೆ ಹೊರೆಸಲಾಗಿದೆ.

ಗೂಗಲ್ ನಂತರ ಫೇಸ್‌ಬುಕ್‌ಗೆ ಎದುರಾಯ್ತು ಗಂಡಾಂತರಗೂಗಲ್ ನಂತರ ಫೇಸ್‌ಬುಕ್‌ಗೆ ಎದುರಾಯ್ತು ಗಂಡಾಂತರ

ಫ್ರಾನ್ಸಿನ ಇಂಟರ್ನೆಟ್ ಖಾಸಗಿ ಮಾಹಿತಿ ನಿರ್ವಾಹಕ ಸಿಎನ್ಐಎಲ್ ವರದಿಯಂತೆ ಕ್ರಮ ಜರುಗಿಸಲು ಮುಂದಾಗಿದ್ದು, ಗೂಗಲ್ ಮೇಲೆ 100 ಮಿಲಿಯನ್ ಯುರೋಸ್(121 ಮಿಲಿಯನ್ ಡಾಲರ್) ಹಾಗೂ ಅಮೆಜಾನ್ ಮೇಲೆ 35 ಮಿಲಿಯನ್ ಯುರೋಸ್ (42 ಮಿಲಿಯನ್ ಡಾಲರ್) ದಂಡ ವಿಧಿಸಲಾಗಿದೆ.

Google, Amazon fined $163 million by French privacy watchdog

ಕುಕ್ಕಿಸ್ ಮೂಲಕ ಕದ್ದ ಮಾಹಿತಿಯನ್ನು ಜಾಹೀರಾತು ಕಂಪನಿಗಳಲ್ಲಿ ಹಂಚಿಕೊಂಡು ಗೂಗಲ್ ಭಾರಿ ಆದಾಯ ಗಳಿಸಿದೆ. ಸುಮಾರು 50 ಮಿಲಿಯನ್ ಬಳಕೆದಾರರ ಮಾಹಿತಿಯನ್ನು ಅನುಮತಿ ಇಲ್ಲದೆ ಪಡೆದುಕೊಳ್ಳಲಾಗಿದೆ ಎಂದು ಸಿಎನ್ಐಎಲ್ ವರದಿ ಮಾಡಿದೆ.

ಗೂಗಲ್, ಅಮೆಜಾನ್ ಸಂಸ್ಥೆಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ಮೂರು ತಿಂಗಳಲ್ಲಿ ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಬೇಕು, ಬಳಕೆದಾರರಿಗೆ ಕುಕ್ಕೀಸ್ ರಿಜೆಕ್ಟ್ ಮಾಡುವ ಸೌಲಭ್ಯ ನೀಡಬೇಕು. ಇಲ್ಲದಿದ್ದರೆ ಹೆಚ್ಚುವರಿಯಾಗಿ 121, 0965 ಯುಎಸ್ ಡಾಲರ್ ಪ್ರತಿ ದಿನದಂತೆ ದಂಡ ಕಟ್ಟಬೇಕಾಗುತ್ತದೆ ಎಂದು ಹೇಳಿದೆ.

English summary
France's data privacy watchdog said Thursday it has fined Google 100 millions euros ($121 million) and Amazon 35 million euros ($42 million) for breaching the country's rules on advertising cookies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X