ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಗರೇಟಿನ ಮೇಲೆ ಶೇ. 5ರಷ್ಟು ಹೆಚ್ಚುವರಿ ಸೆಸ್ ಹೇರಿದ ಸರ್ಕಾರ

ಕೇಂದ್ರ ಸರ್ಕಾರವು ಸಿಗರೇಟು ಮೇಲಿನ ಸೆಸ್ ಅನ್ನು ಶೇ. 5ರಷ್ಟು ಹೇರಿಕೆ ಮಾಡಿದೆ. ಇದರಿಂದಾಗಿ, ಪ್ರತಿ ಸಿಗರೇಟಿನ ಬೆಲೆ 45ರಿಂದ 79 ಪೈಸೆಯಷ್ಟು ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.

|
Google Oneindia Kannada News

ನವದೆಹಲಿ, ಜುಲೈ 18: ಅನೇಕರ ನಿತ್ಯ ಸಂಗಾತಿಯಾಗಿರುವ ಸಿಗರೇಟ್ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಗಿದೆ. ಸೋಮವಾರ ಸಂಜೆ ಸಭೆ ಸೇರಿದ್ದ ಜಿಎಸ್ ಟಿ ಕೌನ್ಸಿಲ್, ಈ ಬಗ್ಗೆ ನಿರ್ಧಾರ ಕೈಗೊಂಡಿದೆ.

ಇದರಿಂದಾಗಿ, ಪ್ರತಿ ಸಾವಿರ ಸಿಗರೇಟು ಸ್ಟಿಕ್ ಗಳ ಬೆಲೆ 485 ರು.ಗಳಿಂದ 792 ರು.ಗಳವರೆಗೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಅದರಂತೆ, ಪ್ರತಿ ಸಿಗರೇಟಿನ ಬೆಲೆ 48 ಪೈಸೆಯಿಂದ 79 ಪೈಸೆಗಳ ಏರಿಕೆಯಾಗಲಿದೆ ಎಂದು ಹೇಳಲಾಗಿದೆ. ಆದರೆ, ಇದು ಕಂಪನಿಗಳ ಕೈಯ್ಯಲಿರುವ ನಿರ್ಧಾರ. ಈ ಬೆಲೆ ಹೆಚ್ಚಳದ ಹೊರೆಯನ್ನು ಜನರ ಮೇಲೆ ಹಾಕದಿದ್ದರೆ ಸಿಗರೇಟು ದರ ಜಿಎಸ್ ಟಿ ಜಾರಿಗೊಂಡ ನಂತರ ಯಾವ ರೀತಿಯಲ್ಲಿತ್ತೋ ಅದೇ ರೀತಿಯಲ್ಲೇ ಇರುತ್ತವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

Goods and Services tax Council raises cess on cigarettes

ಸೋಮವಾರ ಸಂಜೆ ನಡೆದ ಜಿಎಸ್ ಟಿ ಕೌನ್ಸಿಲ್ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಸೆಸ್ ಏರಿಸಿರುವ ಹಿಂದಿನ ಕಾರಣಗಳನ್ನು ಬಹಿರಂಗಪಡಿಸಿದರು. ಮಾರುಕಟ್ಟೆಯಲ್ಲಿ ತಂಬಾಕಿನ ಬೆಲೆಯು ಏರಿಳಿತವಾಗುತ್ತಲೇ ಇರುತ್ತದೆ. ಈ ಮೊದಲು ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಸಿಗರೇಟಿನ ಮೇಲೆ ಶೇ. 28ರಷ್ಟು ತೆರಿಗೆ ವಿಧಿಸಲಾಗಿತ್ತು. ಆದರೆ, ಜಿಎಸ್ ಟಿಯು ಜುಲೈ 1ರಂದು ಜಾರಿಗೆ ಬಂದಿದ್ದಾಗ, ತಂಬಾಕಿನ ಬೆಲೆ ಮಾರುಕಟ್ಟೆಯಲ್ಲಿ ಕಡಿಮೆ ಇತ್ತು. ಇದು ಕಂಪನಿಗಳಿಗೆ ವರದಾನವಾಗುತ್ತದೆ. ಇವು ಜಿಎಸ್ ಟಿ ಅನ್ವಯ ಗ್ರಾಹಕರ ಮೇಲೆ ತೆರಿಗೆ ಹೇರಿ, ತಂಬಾಕಿನ ಬೆಲೆ ಇಳಿಕೆಯ ಲಾಭವನ್ನು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತವೆ. ಇದನ್ನು ತಪ್ಪಿಸಲು ಸಿದ್ಧವಾದ ಸಿಗರೇಟಿನ ಸಗಟು ದರದ ಮೇಲೆ ಹೆಚ್ಚುವರಿಯಾಗಿ ಸೆಸ್ ಹೇರಲು ನಿರ್ಧರಿಸಲಾಗಿದೆ ಎಂದರು.

ಅಲ್ಲದೆ, ಈ ಸೆಸ್ ಏರಿಕೆಯಿಂದಾಗಿ, ಕೇಂದ್ರದ ಬೊಕ್ಕಸಕ್ಕೆ ಸುಮಾರು 5 ಸಾವಿರ ಕೋಟಿ ರು. ತೆರಿಗೆ ಸಂಗ್ರಹವಾಗುತ್ತದೆ ಎಂದು ಅರುಣ್ ಜೇಟ್ಲಿ ವಿವರಿಸಿದರು.

English summary
The GST Council on Monday stepped in to check the windfall being reaped by cigarette manufacturers and increased the cess by 48 paise to 79p per stick, although the impact on prices is currently unclear.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X