ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗತಿಕ ಟ್ರೆಂಡ್ ತಕ್ಕಂತೆ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ

|
Google Oneindia Kannada News

ನವದೆಹಲಿ, ಜೂನ್ 14: ಸ್ಥಳೀಯ ಆಭರಣ ತಯಾರಕರಿಂದ ಹೆಚ್ಚಿನ ಖರೀದಿ, ಜಾಗತಿಕ ಟ್ರೆಂಡ್ ಗೆ ತಕ್ಕಂತೆ ಚಿನ್ನದ ದರದಲ್ಲಿ ಶುಕ್ರವಾರ(ಜೂನ್ 14) ದಂದು ಏರಿಕೆ ಕಂಡು ಬಂದಿದೆ. ರಾಜಧಾನಿ ದೆಹಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 300 ರೂಪಾಯಿ ಏರಿಕೆಯಾಗಿ 33,870ರು ಪ್ರತಿ 10ಗ್ರಾಂನಂತೆ ಮಾರಾಟವಾಗಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ವರದಿ ನೀಡಿದೆ.

ಚಿನ್ನದ ಬೆಲೆ ಏರಿಕೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆ, ಯುಎಸ್ ಹಾಗೂ ಚೀನಾ ನಡುವಿನ ತಿಕ್ಕಾಟ ಹಾಗೂ ಸ್ಥಳೀಯ ಆಭರಣ ತಯಾರಕರಲ್ಲಿ ಹೆಚ್ಚಿದ ಖರೀದಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಎಐ ಎಸ್ಎ ಹೇಳಿದೆ.

Gold surges Rs 300 on fresh buying, strong global trend

ಇದೇ ವೇಳೆ ಬೆಳ್ಳಿ ಬೆಲೆ ಕೂಡಾ ಏರಿಕೆ ಕಂಡಿದ್ದು, 550 ರು ಹೆಚ್ಚಳವಾಗಿ 38,400 ಪ್ರತಿ 1 ಕೆಜಿಯಂತೆ ಮಾರಾಟ ಕಂಡಿದೆ. ನಾಣ್ಯ ತಯಾರಕರು, ಕೈಗಾರಿಕೆಗಳಿಂದ ಬೇಡಿಕೆ ಹೆಚ್ಚಳವೇ ಇದಕ್ಕೆ ಕಾರಣ ಎನ್ನಲಾಗಿದೆ.

ಜಾಗತಿಕವಾಗಿ ಚಿನ್ನದ ಬೆಲೆ ಮೇಲ್ಮುಖವಾಗಿದ್ದು, ನ್ಯೂಯಾರ್ಕ್ ನಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸಿಗೆ 1,356.70 ಡಾಲರ್ ನಷ್ಟಿದೆ. ಬೆಳ್ಳಿ ಬೆಲೆ 15.11 ಡಾಲರ್ ಪ್ರತಿ ಔನ್ಸ್ ಆಗಿದೆ.

ದೆಹಲಿಯಲ್ಲಿ 99.9% ಪರಿಶುದ್ಧ ಚಿನ್ನ ಹಾಗೂ 99.5% ಪರಿಶುದ್ಧ ಚಿನ್ನ ಬೆಲೆ ಕ್ರಮವಾಗಿ 300 ರು ಹೆಚ್ಚಳವಾಗಿ 10 ಗ್ರಾಂಗೆ 33870ರು ಹಾಗೂ 33700ರು ಪ್ರತಿ 10ಗ್ರಾಂ ನಂತೆ ಮಾರಾಟ ಕಂಡಿದೆ.

ಸವರನ್ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ, 8 ಗ್ರಾಂಗೆ 26,700ರು ನಷ್ಟಿದೆ. ಮಂಗಳವಾರದಂದು ಚಿನ್ನದ ಬೆಲೆ 10 ಗ್ರಾಂಗೆ 33370 ರು ನಷ್ಟಿತ್ತು. ಬೆಳ್ಳಿ ನಾಣ್ಯಗಳು 100ಕ್ಕೆ 80,000ರು ಖರೀದಿಗೆ ಹಾಗೂ 81000 ರು ಮಾರಾಟಕ್ಕೆ ದರ ಪಡೆದುಕೊಂಡಿವೆ. (ಪಿಟಿಐ)

English summary
Gold prices rose by Rs 300 to Rs 33,870 per 10 gram in the bullion market here on Friday on fresh buying by jewellers and a firm trend overseas, according to the All India Sarafa Association.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X