ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ ನಂತರ ತಗ್ಗಿದ ಬೇಡಿಕೆ, ಚಿನ್ನದ ಬೆಲೆ ಇಳಿಕೆ

|
Google Oneindia Kannada News

ನವದೆಹಲಿ, ನವೆಂಬರ್ 11: ದೀಪಾವಳಿ ಹಬ್ಬಕ್ಕೂ ಮುನ್ನ 6 ವರ್ಷಗಳಲ್ಲೇ ಅಧಿಕ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಚಿನ್ನದ ದರ ಈಗ ಇಳಿಮುಖವಾಗಿದೆ. ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಮುಂದುವರೆದಿದೆ. ಸುಮಾರು 580ರು ಕಡಿತಗೊಂಡು 10 ಗ್ರಾಂಗೆ 32,070 ರು ಗೆ ಇಳಿದಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ ಶನಿವಾರ 180 ರೂಪಾಯಿ ಇಳಿಕೆ ಕಂಡಿದ್ದು, 32,070 ರೂಪಾಯಿ ಪ್ರತಿ 10 ಗ್ರಾಂ ನಷ್ಟಿತ್ತು. ಬೆಳ್ಳಿ ಬೆಲೆ 400 ರೂಪಾಯಿ ಇಳಿಕೆ ಕಂಡು ಪ್ರತಿ ಕೆ.ಜಿಗೆ 38000 ರೂಪಾಯಿ ನಂತೆ ಮಾರಾಟವಾಗಿದೆ.

ದೀಪಾವಳಿ ಹಬ್ಬಕ್ಕೂ ಮುನ್ನ ಇದ್ದ ಬೇಡಿಕೆ ನಂತರ ಕಡಿಮೆಯಾಗಲು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾದ ಬದಲಾವಣೆ ಹಾಗೂ ಸ್ಥಳೀಯ ರೀಟೈಲರ್, ಆಭರಣಗಾರರಿಂದ ಬೇಡಿಕೆ ಇಳಿಕೆ ಕಾರಣ ಎನ್ನಬಹುದು.

Gold slips from 6-year high on weak global cues, end of festive demand

ದೀಪಾವಳಿ ಹಬ್ಬದ ಮೂರು ದಿನಗಳಲ್ಲಿ ಸುಮಾರು 210 ರೂಪಾಯಿ ಹಾಗೂ ಹಬ್ಬದ ಮರುದಿನ 80 ರೂಪಾಯಿ ಇಳಿಕೆ ಕಂಡಿತ್ತು. ಒಟ್ಟು ಕಳೆದ ನಾಲ್ಕೈದು ದಿನಗಳಲ್ಲಿ ಚಿನ್ನದ ಬೆಲೆ 620 ರೂಪಾಯಿ ಇಳಿದಿದೆ.

ಜಾಗತಿಕವಾಗಿ ಚಿನ್ನದ ಬೆಲೆ ಈ ವಾರದಲ್ಲಿ ಪ್ರತಿ ಔನ್ಸಿಗೆ 1,210.40 ಡಾಲರ್ ಹಾಗೂ ಬೆಳ್ಳಿ 14.25 ಡಾಲರ್ ನಷ್ಟಿತ್ತು. ಕಳೆದ ವಾರದಲ್ಲಿ 1,233.20 ಡಾಲರ್ ಹಾಗೂ ಬೆಳ್ಳಿ 14.82 ಡಾಲರ್ ಪ್ರತಿ ಔನ್ಸಿನಂತೆ ವಹಿವಾಟು ನಡೆಸಿತ್ತು.

English summary
Breaking its six-straight weeks of gains, gold slipped from near six year highs with prices falling by Rs 580 to end at Rs 32,070 per 10 grams at the bullion market during the week owing to fall in demand from jewelers and retailers amid a weak trend overseas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X