ಏ. 8ರಂದು ದೇಶದ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಏರಿಕೆ
ಬೆಂಗಳೂರು, ಏಪ್ರಿಲ್ 8: ದೇಶದ ಬಹುತೇಕ ನಗರಗಳಲ್ಲಿ ಗುರುವಾರ ಹಳದಿ ಲೋಹದ ದರದಲ್ಲಿ ಮತ್ತೆ ಏರಿಕೆಯಾಗಿದೆ. 22 ಕ್ಯಾರಟ್ನ 1 ಗ್ರಾಂ ಚಿನ್ನದ ದರ 4,435 ರೂಪಾಯಿ ಇದ್ದರೆ, 24 ಕ್ಯಾರಟ್ನ ಪ್ರತಿ ಒಂದು ಗ್ರಾಂ ಚಿನ್ನದ ದರ 4,535 ರೂಪಾಯಿ ಇದೆ.
ಎಂಸಿಎಕ್ಸ್ನಲ್ಲಿ ಗೋಲ್ಡ್ ಫ್ಯೂಚರ್ ಶೇ 0.1ರ ಕುಸಿತದೊಂದಿಗೆ ಪ್ರತಿ ಹತ್ತು ಗ್ರಾಂಗೆ 46,320 ರೂಪಾಯಿಗೆ ತಲುಪಿದೆ. ಹಿಂದಿನ ಅವಧಿಯಲ್ಲಿ ಕಳೆದ ಒಂದು ತಿಂಗಳಲ್ಲೇ ಅತ್ಯಧಿಕವಾದ 46,400 ರೂಪಾಯಿ ಇತ್ತು. ಹಾಗೆಯೇ ಬೆಳ್ಳಿ ಫ್ಯೂಚರ್ ಶೇ 0.34ರ ಇಳಿಕೆಯೊಂದಿಗೆ ಪ್ರತಿ ಒಂದು ಕೆಜಿಗೆ 66,405 ರೂ.ಗೆ ಮುಟ್ಟಿದೆ. ದೇಶದಲ್ಲಿ ಚಿನ್ನದ ಸರಾಸರಿ ದರ ಪ್ರತಿ 10 ಗ್ರಾಂಗೆ 50 ರೂಪಾಯಿ ಹೆಚ್ಚಳದೊಂದಿಗೆ 44,350 ರೂಪಾಯಿದೆ ಏರಿಕೆಯಾಗಿದೆ. 24 ಕ್ಯಾರಟ್ನ ಚಿನ್ನದ ದರ ಕೂಡ 50 ರೂ. ಹೆಚ್ಚಿದ್ದು, ಪ್ರತಿ 10 ಗ್ರಾಂಗೆ 45,350 ರೂಪಾಯಿಯಾಗಿದೆ.
ಚಿನ್ನದ ಪ್ರಿಯರಿಗೆ ಈ ತಿಂಗಳಲ್ಲಿ ಸಿಗಲಿದೆ ಸುವರ್ಣ ಹೂಡಿಕೆ ಅವಕಾಶ !
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ವಹಿವಾಟು ಬದಲಾದಂತೆ ಭಾರತದಲ್ಲಿನ ಚಿನ್ನದ ದರದಲ್ಲಿಯೂ ಬದಲಾವಣೆಗಳಾಗಲಿವೆ. ಹೀಗಾಗಿ ದಿನದ ಚಿನ್ನ-ಬೆಳ್ಳಿ ದರದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಬೆಲೆ ಸ್ಥಿರ
ರಾಜಧಾನಿ ದೆಹಲಿಯಲ್ಲಿ ಬಂಗಾರದ ಬೆಲೆಯಲ್ಲಿ ಗುರುವಾರ ಬೆಳಿಗ್ಗೆ ಅಲ್ಪ ಏರಿಕೆಯಾಗಿದೆ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 10 ರೂಪಾಯಿ ಹೆಚ್ಚಳದೊಂದಿಗೆ 44,810 ರೂಪಾಯಿ ಇದೆ. 24 ಕ್ಯಾರಟ್ ಚಿನ್ನ ಬೆಲೆ ಪ್ರತಿ 10 ಗ್ರಾಂ 10 ರೂ ಹೆಚ್ಚಿದ್ದು, 48,880 ರೂಪಾಯಿಗೆ ತಲುಪಿದೆ.
ಬೆಂಗಳೂರಲ್ಲಿ ಚಿನ್ನದ ಬೆಲೆ
ಬೆಂಗಳೂರಿನಲ್ಲಿ ಕೂಡ ಚಿನ್ನದ ದರ ಅಧಿಕ ಪ್ರಮಾಣದಲ್ಲಿ ಏರಿಕೆಯಾಗಿದೆ. 22 ಕ್ಯಾರಟ್ ಚಿನ್ನದ ಪ್ರತಿ ಹತ್ತು ಗ್ರಾಂ ಚಿನ್ನದ ದರ 350 ರೂಪಾಯಿ ತುಟ್ಟಿಯಾಗಿದ್ದು, 43,000 ರೂಪಾಯಿ ತಲುಪಿದೆ. 24 ಕ್ಯಾರಟ್ನ 10 ಗ್ರಾಂ ಚಿನ್ನದ ದರ 370 ರೂ ಏರಿಕೆಯೊಂದಿಗೆ 46,900 ರೂಪಾಯಿಗೆ ಹೆಚ್ಚಳವಾಗಿದೆ. ಹೈದರಾಬಾದ್ನಲ್ಲಿ ಕೂಡ ಇದೇ ದರವಿದೆ.
'ಚಿನ್ನ' ಖರೀದಿಸುವವರಿಗೆ ಬಂಗಾರದಂಥ ಸುದ್ದಿ ಕೊಟ್ಟ ರಾಜ್ಯ ಬಿಜೆಪಿ ಸರ್ಕಾರ!
ಚೆನ್ನೈನಲ್ಲಿ ದರ ಇಳಿಕೆ
ಚೆನ್ನೈ ನಗರದಲ್ಲಿ ಕೂಡ ಬಂಗಾರದ ದರ ಏರಿಕೆಯಾಗಿದೆ. 22 ಕ್ಯಾರಟ್ನ ಪ್ರತಿ 10 ಗ್ರಾಂಗೆ 370 ರೂ ಹೆಚ್ಚಳವಾಗಿದ್ದು, 43,340 ರೂ.ಗೆ ತಲುಪಿದೆ. ಹಾಗೆಯೇ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂ 390 ರೂ. ಹೆಚ್ಚಳವಾಗಿದ್ದು, 47,280 ರೂಪಾಯಿಗೆ ಮಾರಾಟವಾಗುತ್ತಿದೆ.
ಮುಂಬೈನಲ್ಲಿ ಚಿನ್ನದ ಬೆಲೆ ಹೆಚ್ಚಳ
ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 44,350 ರೂಪಾಯಿಗೆ ಏರಿಕೆಯಾಗಿದೆ. 24 ಕ್ಯಾರಟ್ ಚಿನ್ನ 45,350 ರೂ. ದರಕ್ಕೆ ಮಾರಾಟವಾಗುತ್ತಿದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 43,000 ರೂ ಮತ್ತು 24 ಕ್ಯಾರಟ್ ಹಳದಿ ಲೋಹ 46,900 ರೂಪಾಯಿಗೆ ಮಾರಾಟವಾಗುತ್ತಿದೆ. ಕೋಲ್ಕತಾದಲ್ಲಿ 22 ಕ್ಯಾರಟ್ ಚಿನ್ನಕ್ಕೆ 510 ರೂ ಹೆಚ್ಚಳವಾಗಿದ್ದು, 45,140 ರೂಪಾಯಿ ಮತ್ತು 24 ಕ್ಯಾರಟ್ ಚಿನ್ನಕ್ಕೆ 520 ರೂ ಏರಿಕೆಯೊಂದಿಗೆ 47,840 ರೂ ದರವಿದೆ.
ದೇಶದಲ್ಲಿ ಬೆಳ್ಳಿ ಬೆಲೆ
ದೇಶದಲ್ಲಿ ಬೆಳ್ಳಿ ದರ ಬಹುತೇಕ ನಗರಗಳಲ್ಲಿ ಏರಿಕೆಯಾಗಿದೆ. ಬೆಳ್ಳಿ ಬೆಲೆ ಪ್ರತಿ ಕೆಜಿಗೆ 360 ರೂಪಾಯಿ ಏರಿಕೆಯೊಂದಿಗೆ 66,660 ರೂಪಾಯಿಗೆ ತಲುಪಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಯಲ್ಲಿ ಪ್ರತಿ ಕೆಜಿಗೆ 360 ರೂಪಾಯಿ ತುಟ್ಟಿಯಾಗಿದ್ದು, 66,660 ರೂಪಾಯಿಗೆ ಹೆಚ್ಚಳವಾಗಿದೆ. ಚೆನ್ನೈನಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 70,900 ರೂಪಾಯಿಯಲ್ಲಿ ಸ್ಥಿರವಾಗಿದೆ. ಮುಂಬೈನಲ್ಲಿ ಬೆಳ್ಳಿ ದರ ಪ್ರತಿ ಕೆಜಿಗೆ 66,660 ರೂಪಾಯಿ ಇದೆ.
* ಚಿನ್ನ ಮತ್ತು ಬೆಳ್ಳಿ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಬದಲಾವಣೆ ಮತ್ತು ಸ್ಥಳೀಯ ತೆರಿಗೆ ನೀತಿಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಈ ಮಾಹಿತಿ ಬೆಳಿಗ್ಗೆ 10 ಗಂಟೆಯವರೆಗಿನ ಮಾರುಕಟ್ಟೆ ದರ ಬದಲಾವಣೆಯನ್ನು ಆಧರಿಸಿದೆ.