ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡ ಬಳಿಕ ಕುಸಿದ ಚಿನ್ನ, ಬೆಳ್ಳಿ ದರ

|
Google Oneindia Kannada News

Recommended Video

ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡ ಬಳಿಕ ಕುಸಿದ ಚಿನ್ನ | Oneindia Kannada

ನವದೆಹಲಿ, ಸೆ. 05: ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆಯಲ್ಲಿ ಏರುಪೇರಾಗಿದ್ದರಿಂದ ಚಿನ್ನದ ಬೆಲೆ ಗುರುವಾರದಂದು ಇಳಿಕೆ ಕಂಡಿದೆ.

ಬುಧವಾರದಂದು 10ಗ್ರಾಂ ಚಿನ್ನದ ಬೆಲೆ 39,885ರು ಮುಟ್ಟಿತ್ತು. ಬೆಳ್ಳಿ ಪ್ರತಿ ಕೆ.ಜಿಗೆ 51 489ರುನಷ್ಟಿತ್ತು. ಆದರೆ, ಜಾಗತಿಕವಾಗಿ ಚಿನ್ನದ ಬೆಲೆ 0.5% ಕುಸಿತ ಕಂಡು ಪ್ರತಿ ಔನ್ಸಿಗೆ 1.544 ಯುಎಸ್ ಡಾಲರ್ ನಷ್ಟಾಗಿದೆ.

ಗುರುವಾರಕ್ಕೂ ಮುನ್ನ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 598 ರೂ. ಏರಿಕೆಯಾಗಿದ್ದು 39,281 ರೂ. ತಲುಪಿತ್ತು. ಜಾಗತಿಕ ಆರ್ಥಿಕ ಬೆಳವಣಿಗೆ ಮತ್ತು ದೇಶದಲ್ಲಿ ಆರ್ಥಿಕತೆ ಕುಸಿತ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನದ ಮೇಲೆ ಆಸಕ್ತಿ ತೋರಿದ್ದರು.

Gold, silver prices slump today after slide from record highs

ಬೆಂಗಳೂರಿನಲ್ಲಿ ಗುರುವಾರ(ಸೆ. 05) 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 36,960 ರು ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 40,310ರುನಷ್ಟಿದೆ. ಬೆಳ್ಳಿ ಬೆಲೆ 1 ಕೆಜಿ ಬೆಲೆ 50,500 ರು ನಷ್ಟಿದೆ.

ಈಗ ಯುಎಸ್ ಹಾಗೂ ಚೀನಾ ನಡುವೆ ಅಕ್ಟೋಬರ್ ತಿಂಗಳಿನಲ್ಲಿ ವ್ಯಾಪಾರ- ವಹಿವಾಟು ಆರಂಭಗೊಳ್ಳುವ ಹಿನ್ನಲೆಯಲ್ಲಿ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರಿದೆ. ಹಾಂಗ್ ಕಾಂಗ್ ಪ್ರತಿಭಟನೆ, ಬುಧವಾರದಂದು ಬೋರಿಸ್ ಜಾನ್ಸನ್ ಬ್ರಿಟಿಷ್ ಸಂಸತ್ತಿನಲ್ಲಿ ಯುರೋಪಿಯನ್ ಯೂನಿಯನ್ ನಲ್ಲಿ ಬ್ರಿಟನ್ ಹೊರಕ್ಕೆ ಬರುವುದನ್ನು ತಡೆಗಟ್ಟಲು ಕೈಗೊಂಡ ಕ್ರಮ ಎಲ್ಲವೂ ಹಳದಿ ಲೋಹದ ಬೆಲೆ ಮೇಲೆ ಪರಿಣಾಮ ಬೀರಿದೆ.

English summary
Gold and silver prices fell sharply today in tandem with a decline in global prices. On MCX, October gold futures prices fell 0.71% to ₹39,542 per 10 grams, after they hit a new high of ₹39,885 on Wednesday. Silver futures also fell sharply today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X