ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ 800 ರುಪಾಯಿ ಏರಿಕೆ: ಬೆಳ್ಳಿ ಬೆಲೆ ಕೆಜಿಗೆ 3,400 ರುಪಾಯಿ ಹೆಚ್ಚಳ

|
Google Oneindia Kannada News

ನವದೆಹಲಿ, ಜುಲೈ 27: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರತೊಡಗಿದೆ. ಸೋಮವಾರ ಎಂಸಿಎಕ್ಸ್‌ನಲ್ಲಿ, ಆಗಸ್ಟ್ ಚಿನ್ನದ ಭವಿಷ್ಯವು ಶೇ. 1.5ರಷ್ಟು ಅಥವಾ 800 ರುಪಾಯಿಯಷ್ಟು ಏರಿಕೆಯಾಗಿದ್ದು, 10 ಗ್ರಾಂಗೆ 51,833 ರುಪಾಯಿಗೆ ತಲುಪಿದೆ

ಚಿನ್ನದ ಬೆಲೆ ಅಷ್ಟೇ ಅಲ್ಲದೆ ಬೆಳ್ಳಿ ಬೆಲೆಯು ಕೂಡ ಹೆಚ್ಚಾಗಿದೆ. ಎಂಸಿಎಕ್ಸ್‌ನಲ್ಲಿನ ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇ. 5.5ರಷ್ಟು ಅಥವಾ 3,400 ರುಪಾಯಿಗಳಿಸಿ, 64,617 ರುಪಾಯಿಗೆ ತಲುಪಿದೆ. ಹಿಂದಿನ ವಾರದಲ್ಲಿ, ಚಿನ್ನದ ಬೆಲೆ ಶೇ. 4ರಷ್ಟು ಏರಿಕೆಯಾಗಿದ್ದರೆ, ಬೆಳ್ಳಿ ಶೇ. 15ರಷ್ಟು ಹೆಚ್ಚಾಗಿದೆ.

 ಚಿನ್ನದತ್ತ ಹೂಡಿಕೆದಾರರ ಒಲವು

ಚಿನ್ನದತ್ತ ಹೂಡಿಕೆದಾರರ ಒಲವು

ಹಿಂದಿನ ವಾರದಲ್ಲಿ ಬಲವಾದ ಲಾಭವನ್ನು ಗಳಿಸಿದ ನಂತರ ಭಾರತೀಯ ಮಾರುಕಟ್ಟೆಗಳಲ್ಲಿ ಈ ವಾರ ಚಿನ್ನವು ಬೆಲೆ ಏರಿಕೆ ಪ್ರಬಲವಾಗಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ, ಅಮೆರಿಕಾ-ಚೀನಾ ಉದ್ವಿಗ್ನತೆ, ದುರ್ಬಲ ಯುಎಸ್ ಡಾಲರ್ ಮತ್ತು ಹೆಚ್ಚಿನ ಪ್ರಚೋದನೆಯ ನಿರೀಕ್ಷೆಗಳು ಹೂಡಿಕೆದಾರರನ್ನು ಚಿನ್ನದಂತಹ ಸುರಕ್ಷಿತ ಸ್ವತ್ತುಗಳತ್ತ ತಳ್ಳಿದ್ದು, ಚಿನ್ನದ ಬೆಲೆಗಳು ಇಂದು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ.

ಹೊಸ ದಾಖಲೆಯತ್ತ ಸಾಗುತ್ತಿದೆ ಚಿನ್ನದ ಬೆಲೆ: 2011ರ ಬಳಿಕ ಭಾರೀ ಏರಿಕೆಹೊಸ ದಾಖಲೆಯತ್ತ ಸಾಗುತ್ತಿದೆ ಚಿನ್ನದ ಬೆಲೆ: 2011ರ ಬಳಿಕ ಭಾರೀ ಏರಿಕೆ

ಸೆಪ್ಟೆಂಬರ್ 2011 ರ ನಂತರ ಗರಿಷ್ಠ ದಾಖಲೆ

ಸೆಪ್ಟೆಂಬರ್ 2011 ರ ನಂತರ ಗರಿಷ್ಠ ದಾಖಲೆ

ಸ್ಪಾಟ್ ಚಿನ್ನವು ಔನ್ಸ್‌ಗೆ ಶೇ. 1.5ರಷ್ಟು ಏರಿಕೆಯಾಗಿ 1,928.40 ಕ್ಕೆ ತಲುಪಿದ್ದು, ಹಿಂದಿನ ಗರಿಷ್ಠ 1,920.30 ಅನ್ನು ಮೀರಿದೆ. ಇದು ಸೆಪ್ಟೆಂಬರ್ 2011 ರ ನಂತರ ಗರಿಷ್ಟ ದಾಖಲೆಯ ಪ್ರಮಾಣವಾಗಿದೆ.

ಕೊರೊನಾವೈರಸ್ ಭೀತಿಯಿಂದಾಗಿ ಹಳದಿ ಲೋಹಕ್ಕೆ ಹೆಚ್ಚಿದ ಬೇಡಿಕೆ

ಕೊರೊನಾವೈರಸ್ ಭೀತಿಯಿಂದಾಗಿ ಹಳದಿ ಲೋಹಕ್ಕೆ ಹೆಚ್ಚಿದ ಬೇಡಿಕೆ

ಸಾಂಕ್ರಾಮಿಕ ರೋಗವು ಜಾಗತಿಕ ಆರ್ಥಿಕತೆಯನ್ನು ಆರ್ಥಿಕ ಹಿಂಜರಿತಕ್ಕೆ ಮುಳುಗಿಸಿದ ಕಾರಣ ಜಗತ್ತಿನ ಅನೇಕ ಕೇಂದ್ರ ಬ್ಯಾಂಕುಗಳು ಅಳವಡಿಸಿಕೊಂಡ ಆಕ್ರಮಣಕಾರಿ ವಿತ್ತೀಯ ಸರಾಗಗೊಳಿಸುವಿಕೆಯಿಂದಲೂ ಹಳದಿ ಲೋಹಕ್ಕೆ ಸಹಾಯವಾಗುತ್ತದೆ. ಇಂತಹ ಅಭೂತಪೂರ್ವ ಮಟ್ಟದ ಹಣ ಮುದ್ರಣವು ಅಂತಿಮವಾಗಿ ಹಣದುಬ್ಬರಕ್ಕೆ ಕಾರಣವಾಗಬಹುದು ಎಂದು ಕೆಲವು ಹೂಡಿಕೆದಾರರು ಚಿಂತಿಸುತ್ತಾರೆ.

ಮತ್ತಷ್ಟು ಎತ್ತರಕ್ಕೆ ಚಿನ್ನದ ಬೆಲೆ: ಜುಲೈ 25ರ ದರ ಹೀಗಿದೆಮತ್ತಷ್ಟು ಎತ್ತರಕ್ಕೆ ಚಿನ್ನದ ಬೆಲೆ: ಜುಲೈ 25ರ ದರ ಹೀಗಿದೆ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ದುರ್ಬಲ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ದುರ್ಬಲ

ಡಾಲರ್ ಸೂಚ್ಯಂಕವು ಇಂದು ತನ್ನ ಪ್ರಮುಖ ಪ್ರತಿಸ್ಪರ್ಧಿಗಳ ವಿರುದ್ಧ ಶೇ. 0.5ನಷ್ಟು ಕುಸಿದಿದ್ದು, ಇತರ ಕರೆನ್ಸಿಗಳನ್ನು ಹೊಂದಿರುವವರಿಗೆ ಚಿನ್ನವನ್ನು ಕಡಿಮೆ ವೆಚ್ಚದಾಯಕವಾಗಿಸಿದೆ.

ಇದರೆ ಜೊತೆಗೆ ಅಮೆರಿಕಾ-ಚೀನಾ ನಡುವಿನ ವಾಣಿಜ್ಯ ಸಮರಹಾಗೂ ಇತ್ತೀಚೆಗೆ ಚಿಂಗ್ಡುವಿನಲ್ಲಿ ಅಮೆರಿಕಾ ರಾಯಭಾರ ಕಚೇರಿ ಮುಚ್ಚಲು ಚೀನಾ ಆದೇಶ ನೀಡಿರುವುದು ಉಭಯ ದೇಶಗಳ ತಿಕ್ಕಾಟವನ್ನು ಮತ್ತಷ್ಟು ಹೆಚ್ಚಿಸಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ.

English summary
Gold is off to a strong start this week in Indian markets after posting strong gains in the previous week.On MCX, August gold futures rose 1.5% or Rs 800 to a record high of Rs 51,833 per 10 gram
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X