ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಗರಿಷ್ಠ ಮಟ್ಟ ತಲುಪಿದ ಚಿನ್ನದ ಬೆಲೆ:10 ಗ್ರಾಂ 50,000 ರುಪಾಯಿ

|
Google Oneindia Kannada News

ನವದೆಹಲಿ, ಜುಲೈ 22: ಕೊರೊನಾವೈರಸ್ ಬಿಕ್ಕಟ್ಟಿನ ನಡುವೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದಾಖಲೆಯ ಗರಿಷ್ಠಮಟ್ಟವನ್ನು ತಲುಪುತ್ತಿವೆ. ಭಾರತದಲ್ಲಿ ಚಿನ್ನದ ಬೆಲೆ ಸತತ ಎರಡನೇ ದಿನವೂ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ. ಎಂಸಿಎಕ್ಸ್‌ನಲ್ಲಿ ಆಗಸ್ಟ್ ಚಿನ್ನದ ಭವಿಷ್ಯವು ಶೇಕಡಾ 1 ರಷ್ಟು ಏರಿಕೆಯಾಗಿದ್ದು, 10 ಗ್ರಾಂಗೆ 50,010 ರುಪಾಯಿ ತಲುಪಿದೆ.

ಭಾರತದಲ್ಲಿ ಚಿನ್ನದ ಬೆಲೆ ಮೊದಲ ಬಾರಿಗೆ ಭವಿಷ್ಯದ ಮಾರುಕಟ್ಟೆಯಲ್ಲಿ 50,000 ರೂ.ಗಳನ್ನು ಮುಟ್ಟಿದೆ. ಇದರೊಂದಿಗೆ ಬೆಳ್ಳಿಯ ಬೆಲೆಯಲ್ಲೂ ದಾಖಲೆಯ ಏರಿಕೆ ದಾಖಲಾಗಿದೆ. ಎಂಸಿಎಕ್ಸ್‌ನಲ್ಲಿ ಸೆಪ್ಟೆಂಬರ್ ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇ. 6.6 ರಷ್ಟು ಜಿಗಿದು 61,130 ರುಪಾಯಿಗೆ ತಲುಪಿದೆ.

ಬೆಳ್ಳಿ ಬೆಲೆಯ ಜಿಗಿತ

ಬೆಳ್ಳಿ ಬೆಲೆಯ ಜಿಗಿತ

ಕಳೆದ ಮೂರು ಅಧಿವೇಶನದಲ್ಲೂ ಬೆಳ್ಳಿ ಬೆಲೆ ಏರುತ್ತಲೇ ಸಾಗುತ್ತಿದೆ. ಹಿಂದಿನ ವಹಿವಾಟಿನಲ್ಲಿ ಬೆಳ್ಳಿಯ ಬೆಲೆ ಆರು ಶೇಕಡಾ ಅಂದರೆ ಕೆಜಿಗೆ ಸುಮಾರು 3,400 ರಷ್ಟು ಏರಿಕೆಯಾಗಿದೆ ಮತ್ತು ಸೋಮವಾರ ಬೆಳ್ಳಿಯ ಬೆಲೆ 1,150 ರೂ.ಗಳಷ್ಟು ಹೆಚ್ಚಾಗಿದೆ. ಶೇಕಡಾ 7.2 ರಷ್ಟು ಏರಿಕೆಯಾಗಿ ಔನ್ಸ್‌ಗೆ 22.8366 ಡಾಲರ್‌ಗೆ ತಲುಪಿದೆ.

ಬೆಳ್ಳಿ ಬೆಲೆ ಕಳೆದ ಮೂರು ದಿನದಲ್ಲಿ 8,500 ರುಪಾಯಿ ಏರಿಕೆ: ಬೆಲೆ ಹೆಚ್ಚಳಕ್ಕೆ ಕಾರಣ ಏನು?ಬೆಳ್ಳಿ ಬೆಲೆ ಕಳೆದ ಮೂರು ದಿನದಲ್ಲಿ 8,500 ರುಪಾಯಿ ಏರಿಕೆ: ಬೆಲೆ ಹೆಚ್ಚಳಕ್ಕೆ ಕಾರಣ ಏನು?

ಹಳದಿ ಲೋಹಕ್ಕೂ ಹೆಚ್ಚಿದ ಬೇಡಿಕೆ

ಹಳದಿ ಲೋಹಕ್ಕೂ ಹೆಚ್ಚಿದ ಬೇಡಿಕೆ

ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಸ್ಥಾನವು ಔನ್ಸ್‌ಗೆ ಶೇ. 1.3ರಷ್ಟು ಏರಿಕೆಯಾಗಿ 1,865.81 ಕ್ಕೆ ತಲುಪಿದೆ. ಇದು ಕಳೆದ ಒಂಬತ್ತು ವರ್ಷಗಳಲ್ಲಿ ಗರಿಷ್ಠವಾಗಿದೆ. ಗಮನಾರ್ಹವಾಗಿ, ಯುಎಸ್ ಡಾಲರ್‌ನ ಮಂದಗತಿ ಮತ್ತು ಕೊರೊನಾ ವೈರಸ್ ಪ್ರಕರಣಗಳು ಪ್ರಪಂಚದಾದ್ಯಂತ ಹರಡುವಿಕೆ ಮತ್ತು ಹೆಚ್ಚಿನ ಪ್ರಚೋದಕ ಕ್ರಮಗಳ ನಿರೀಕ್ಷೆಯು ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಅಮೂಲ್ಯ ಲೋಹಗಳ ಬೆಲೆಯನ್ನು ಹೆಚ್ಚಿಸಿದೆ.

ಅಮೆರಿಕಾ ಡಾಲರ್ ಮೇಲೆ ಕೊರೊನಾ ಪ್ರಭಾವ

ಅಮೆರಿಕಾ ಡಾಲರ್ ಮೇಲೆ ಕೊರೊನಾ ಪ್ರಭಾವ

ಸಾಂಕ್ರಾಮಿಕ ರೋಗದಿಂದಾಗಿ ಪ್ರಾದೇಶಿಕ ಆರ್ಥಿಕತೆಗಳಿಗಾಗಿ ಯುರೋಪಿಯನ್ ಯೂನಿಯನ್ ನಾಯಕರು 750 ಬಿಲಿಯನ್ ಯೂರೋ ಯೋಜನೆಯನ್ನು ಒಪ್ಪಿದ್ದಾರೆ. ಮಾಹಿತಿಯ ಪ್ರಕಾರ, ಕೊರೊನಾ ಬಿಕ್ಕಟ್ಟಿನಲ್ಲಿರುವ ಯುಎಸ್ ಡಾಲರ್ ಸೂಚ್ಯಂಕವು ನಾಲ್ಕು ತಿಂಗಳಿಗಿಂತಲೂ ಕಡಿಮೆ ಮಟ್ಟದಲ್ಲಿಯೇ ಇದ್ದು, ಇತರ ಕರೆನ್ಸಿಗಳನ್ನು ಹೊಂದಿರುವವರಿಗೆ ಚಿನ್ನವನ್ನು ಕಡಿಮೆ ವೆಚ್ಚದಾಯಕವಾಗಿಸಿದೆ. ಅಮೆರಿಕಾದಲ್ಲಿ ಕೊರೊನಾವೈರಸ್ ಪ್ರಕರಣಗಳು 4 ಮಿಲಿಯನ್‌ಗೆ ತಲುಪಿದೆ.

ಚಿನ್ನದ ಬೆಲೆ ಏರಿಕೆ: ಜುಲೈ 21ರಂದು ಎಷ್ಟು ಹೆಚ್ಚಾಗಿದೆ?ಚಿನ್ನದ ಬೆಲೆ ಏರಿಕೆ: ಜುಲೈ 21ರಂದು ಎಷ್ಟು ಹೆಚ್ಚಾಗಿದೆ?

ಸುರಕ್ಷಿತ ಹೂಡಿಕೆಗಳತ್ತ ಆಯ್ಕೆ ಹೆಚ್ಚು

ಸುರಕ್ಷಿತ ಹೂಡಿಕೆಗಳತ್ತ ಆಯ್ಕೆ ಹೆಚ್ಚು

ಅಮೆರಿಕಾದಲ್ಲಿ ರಾಜಕೀಯ ಮತ್ತು ಆರ್ಥಿಕ ಅನಿಶ್ಚಿತತೆಯ ಸಮಯದಲ್ಲಿ ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಬಳಸಲಾಗುತ್ತದೆ. ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ, ಆರ್ಥಿಕತೆಯ ಬಗೆಗಿನ ಕಳವಳಗಳ ನಡುವೆ ಹೂಡಿಕೆದಾರರ ಸುರಕ್ಷಿತ ಆಯ್ಕೆಗಳತ್ತ ಹೆಚ್ಚುತ್ತಿರುವ ಪ್ರವೃತ್ತಿಯಿಂದಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಬೆಂಬಲವನ್ನು ಪಡೆಯುತ್ತಿವೆ. ವರದಿಯ ಪ್ರಕಾರ, ಕೊರೊನಾ ಗಣಿಗಾರಿಕೆ ಕಾರ್ಯಾಚರಣೆ ಮತ್ತು ಪೂರೈಕೆ ಅಡೆತಡೆಗಳಿಂದಾಗಿ ಬೆಳ್ಳಿಯ ಬೆಲೆ ತೀವ್ರವಾಗಿ ಏರಿಕೆಯಾಗುತ್ತಿದೆ.

ಮುಂಬರುವ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಬೆಳ್ಳಿಯ ಬೆಲೆ ಪ್ರತಿ ಕೆ.ಜಿ.ಗೆ 62 ಸಾವಿರ ರೂ.ಗೆ ಏರುವ ಸಾಧ್ಯತೆಯಿದೆ. ಏತನ್ಮಧ್ಯೆ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗುತ್ತದೆ.

English summary
Gold Prices in India hit new highs for the second day in a row. On MCX, august gold futures rose 1% to new high Rs 50,010 Per 10 Gram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X