• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏ.22ರಂದು ಚಿನ್ನದ ಬೆಲೆ ಏರಿಕೆ, ಯಾವ ಊರಲ್ಲಿ ಎಷ್ಟಿದೆ ದರ?

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಗುರುವಾರದಂದು ಏರಿಕೆಯಾಗಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ 0.4% ಏರಿಕೆಯಾಗಿ 10 ಗ್ರಾಂಗೆ 48, 040ರು ತಲುಪಿದೆ. ಬೆಳ್ಳಿ ಬೆಲೆ 0.9% ಏರಿಕೆಯಾಗಿ ಪ್ರತಿ ಕೆ.ಜಿ 69, 363 ರು ಆಗಿದೆ. ಏಪ್ರಿಲ್ ತಿಂಗಳಲ್ಲಿ ಚಿನ್ನದ ಬೆಲೆ ನಿರಂತರ ಏರಿಳಿತ ಕಂಡಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರು ಏರಿಕೆ ಕಂಡು 44,100ರುಪಾಯಿ, 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 270 ರು ಏರಿಕೆ ಕಂಡು 49,200 ರುಪಾಯಿ ಇದೆ. ಬೆಳ್ಳಿ ಒಂದು ಕೆಜಿಗೆ 70,300ರುಪಾಯಿ ಇದೆ.

ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಶೇ 0.1ರಷ್ಟು ಏರಿಕೆ ಕಂಡು ಪ್ರತಿ ಔನ್ಸ್‌ಗೆ 1,778.19 ಯುಎಸ್ ಡಾಲರ್‌ನಷ್ಟಿತ್ತು. ಬೆಳ್ಳಿ ಬೆಲೆ 0.1% ಏರಿಕೆಯಾಗಿ ಪ್ರತಿ ಔನ್ಸ್ ಬೆಲೆ 25.89 ಯುಎಸ್ ಡಾಲರ್ ಆಗಿದೆ.

ನಿಮ್ಮ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ, ಕಳೆದ 5 ದಿನಗಳಲ್ಲಿ ಏರಿಳಿತ ಕಂಡಿರುವ ಬಗ್ಗೆ ಮಾಹಿತಿ ಈ ಕೆಳಗಿದೆ.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 22: 45,100 (250 ರು ಏರಿಕೆ) 49,200 (270 ರು ಏರಿಕೆ)
ಏಪ್ರಿಲ್ 21: 44,850 (+700) 48,930 (+770)
ಏಪ್ರಿಲ್ 20: 44,150 (-100) 48,160 (-110)
ಏಪ್ರಿಲ್ 19: 44,250 (+90) 48,270 (+100)
ಏಪ್ರಿಲ್ 18: 44,160 (+10) 48,170 (+10)

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 22: 46,600 (10 ಏರಿಕೆ) 50, 820 (10 ಏರಿಕೆ)
ಏಪ್ರಿಲ್ 21: 46,590 (+290) 50, 810 (+290)
ಏಪ್ರಿಲ್ 20: 46,300 (-100) 50, 520 (-110)
ಏಪ್ರಿಲ್ 19: 46,400 (+130) 50, 620 (+200)
ಏಪ್ರಿಲ್ 18: 46, 270 (+10) 50, 420 (+10)

ಬೆಳ್ಳಿ: 1 ಕೆ.ಜಿಗೆ 70,300ರುಪಾಯಿ

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 22: 45,060 (310 ರು ಏರಿಕೆ) 49,160 (340 ರು ಏರಿಕೆ)
ಏಪ್ರಿಲ್ 21: 45,060 (+560) 49,160 (+610)
ಏಪ್ರಿಲ್ 20: 44,500 (-450) 48,550 (-480)
ಏಪ್ರಿಲ್ 19: 44,950 (+420) 48,270 (+460)
ಏಪ್ರಿಲ್ 18: 44,530 (+10)48,570 (+10)

ಬೆಳ್ಳಿ: 1 ಕೆ.ಜಿಗೆ 75,700ರುಪಾಯಿ

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 22: 45,210 (+10) 46,210 (+10)
ಏಪ್ರಿಲ್ 21: 45,200 (+220) 46,200 (+220)
ಏಪ್ರಿಲ್ 20: 44,980(-90) 45,980 (-90)
ಏಪ್ರಿಲ್ 19: 45,070 (+60) 46,070 (+60)
ಏಪ್ರಿಲ್ 18: 45,010 (+10)46,010 (+50)

ಬೆಳ್ಳಿ: 1 ಕೆ.ಜಿಗೆ 70,300ರುಪಾಯಿ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 22: 45,100 (250 ರು ಏರಿಕೆ) 49,200 (270 ರು ಏರಿಕೆ)
ಏಪ್ರಿಲ್ 21: 44,850 (+700) 48,930 (+770)
ಏಪ್ರಿಲ್ 20: 44,150 (-100) 48,160 (-110)
ಏಪ್ರಿಲ್ 19: 44,250 (+90) 48,270 (+100)
ಏಪ್ರಿಲ್ 18: 44,160 (+10)48,170 (+10)

ಬೆಳ್ಳಿ: 1 ಕೆ.ಜಿಗೆ73,900ರುಪಾಯಿ

English summary
The price of gold on MCX is at Rs. 48, 040 But, Gold Rates surged Major Cities in India Today April 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X