ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಏರಿಕೆ; ಪ್ರಮುಖ ನಗರಗಳಲ್ಲಿ ಜನವರಿ 21ರ ಬೆಲೆ ಎಷ್ಟು?

|
Google Oneindia Kannada News

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಏರುತ್ತಲೇ ಸಾಗುತ್ತಿದೆ. ಗುರುವಾರದಂದು ನವದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನ 10 ಗ್ರಾಂ 47,910ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 50,730 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಒಂದು ಕೆಜಿಗೆ ಏರಿಕೆಗೊಂಡು 66,500 ರೂಪಾಯಿ ದಾಖಲಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಶೇ 1.5ರಷ್ಟು ಏರಿಕೆ ಕಂಡು ಪ್ರತಿ ಔನ್ಸ್‌ಗೆ 1,867.06 ಯುಎಸ್ ಡಾಲರ್ ನಷ್ಟಿದೆ.

ಅಮೆರಿಕದಲ್ಲಿ ಹೊಸ ಅಧ್ಯಕ್ಷರಾಗಿ ಬೈಡನ್ ಅಧಿಕಾರ ಸ್ವೀಕಾರ, ಆರ್ಥಿಕ ಪ್ಯಾಕೇಜ್ ಘೋಷಣೆ, ಕೊರೊನಾ ಲಸಿಕೆ ಅಭಿಯಾನ ಎಲ್ಲವೂ ಹಳದಿ ಲೋಹದ ಮೇಲೆ ಪರಿಣಾಮ ಬೀರಿವೆ. ಅಮೆರಿಕ ಅಲ್ಲದೆ, ಏಷ್ಯಾ, ಭಾರತದ ಷೇರುಪೇಟೆಯಲ್ಲೂ ಸೂಚ್ಯಂಕ ದಾಖಲೆ ಮಟ್ಟ ಮುಟ್ಟಿದೆ.

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್
ಜನವರಿ 21: 46,250 (450 ರು ಏರಿಕೆ) 50,450 (490 ರು ಏರಿಕೆ)
ಜನವರಿ 20: 45,80049,960
ಜನವರಿ 19: 45,65049,800
ಜನವರಿ 18: 45,50049,640

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್
ಜನವರಿ 21: 48,400 (490 ರು ಏರಿಕೆ) 52,800(540 ರು ಏರಿಕೆ)
ಜನವರಿ 20: 47,91052,260
ಜನವರಿ 19: 47,80052,150
ಜನವರಿ 18: 47,65051,980

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್
ಜನವರಿ 21: 46,910 (400 ರು ಏರಿಕೆ) 51,180(450 ರು ಏರಿಕೆ)
ಜನವರಿ 20: 46,510 50,730
ಜನವರಿ 19: 46,320 50,150
ಜನವರಿ 18: 46,130 49,680

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್
ಜನವರಿ 21: 48,600 (500 ರು ಏರಿಕೆ) 49, 600 (500 ರು ಏರಿಕೆ)
ಜನವರಿ 20: 48,100-49,100
ಜನವರಿ 19: 48,000-49,000
ಜನವರಿ 18: 47,960-48,960

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್
ಜನವರಿ 21: 48,400 (490 ರು ಏರಿಕೆ) 52,800 (540 ರು ಏರಿಕೆ)
ಜನವರಿ 20: 47,910-52,260
ಜನವರಿ 19: 47,800-52,150
ಜನವರಿ 18: 47,650-51,980

ಹೈದರಾಬಾದ್ ನಲ್ಲಿ ಚಿನ್ನದ ಬೆಲೆ

ಹೈದರಾಬಾದ್ ನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್24 ಕ್ಯಾರೆಟ್
ಜನವರಿ 21: 46,250 (450 ರು ಏರಿಕೆ) 50,450 (490 ರು ಏರಿಕೆ)
ಜನವರಿ 20: 47,910-52,260
ಜನವರಿ 19: 47,800-52,150
ಜನವರಿ 18: 47,650-51,980

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

English summary
Rates of gold have jumped on Thursday. The price of gold on MCX is at Rs. 49,100 with a rise of Rs. 100.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X