ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಏರಿಕೆ: 3 ದಿನದಲ್ಲಿ 1,350 ರೂಪಾಯಿ ಹೆಚ್ಚಳ

|
Google Oneindia Kannada News

ನವದೆಹಲಿ, ಡಿಸೆಂಬರ್ 03: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತೆ ಏರುಮುಖವಾಗಿ ಸಾಗತೊಡಗಿದೆ. ಇದಕ್ಕೆ ಉದಾಹರಣೆ ಸತತ ಮೂರನೇ ದಿನವು ಚಿನ್ನದ ಬೆಲೆ ಏರಿಕೆಯಾಗಿದೆ.

ಎಂಸಿಎಕ್ಸ್‌ನಲ್ಲಿ ಫೆಬ್ರವರಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇ. 0.5ರಷ್ಟು ಹೆಚ್ಚಾಗಿ 49,172 ರಷ್ಟಿದ್ದರೆ, ಬೆಳ್ಳಿ ಭವಿಷ್ಯವು ಶೇ. 0.55 ರಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ 63,670 ರೂಪಾಯಿಗೆ ತಲುಪಿದೆ. ಹಿಂದಿನ ದಿನದ ವಹಿವಾಟಿನಲ್ಲಿ, ಚಿನ್ನವು 10 ಗ್ರಾಂಗೆ 400 ರೂಪಾಯಿ ಜಿಗಿದಿದ್ದು, ಮಂಗಳವಾರ 700 ರೂಪಾಯಿ ಹೆಚ್ಚಳಗೊಂಡಿತ್ತು. ಬೆಳ್ಳಿ ಬೆಲೆಯು ಬುಧವಾರ 200 ರೂಪಾಯಿ ಏರಿಕೆಗೊಂಡಿತ್ತು.

ಇಳಿಕೆಗೊಂಡಿದ್ದ ಚಿನ್ನದ ಬೆಲೆ ಸತತ 2ನೇ ದಿನ ಏರಿಕೆ: 10ಗ್ರಾಂ ಎಷ್ಟು ರೂ. ಹೆಚ್ಚಳ?ಇಳಿಕೆಗೊಂಡಿದ್ದ ಚಿನ್ನದ ಬೆಲೆ ಸತತ 2ನೇ ದಿನ ಏರಿಕೆ: 10ಗ್ರಾಂ ಎಷ್ಟು ರೂ. ಹೆಚ್ಚಳ?

ಕಳೆದ ಕೆಲವು ವಾರಗಳಲ್ಲಿ ಚಿನ್ನ ತೀವ್ರವಾಗಿ ಕುಸಿಯಿತು ಮತ್ತು ಜೂನ್ ನಂತರದ ಅತ್ಯಂತ ಕಡಿಮೆ ಮಟ್ಟವನ್ನು ತಲುಪಿತ್ತು. ಆದರೆ ''ದುರ್ಬಲ ಯುಎಸ್ ಡಾಲರ್‌ನಿಂದ ಬೆಂಬಲವನ್ನು ಗಳಿಸಲು ಚಿನ್ನವು ಹಿಂತಿರುಗಿತು " ಎಂದು ಕೊಟಕ್ ಸೆಕ್ಯುರಿಟೀಸ್ ತನ್ನ ಟಿಪ್ಪಣಿಯಲ್ಲಿ ತಿಳಿಸಿದೆ. ಡಾಲರ್ ಸೂಚ್ಯಂಕ ಇಂದು ಶೇ. 0.18ರಷ್ಟು ಕುಸಿದಿದೆ.

Gold Prices Today Rise Rs 1350 In 3 Days: Silver Rates Up

Recommended Video

Burevi ಚಂಡಮಾರುತ ಕೇರಳ ಪ್ರವೇಶಿಸಿದ್ದಕ್ಕೆ , ನಮ್ಮ ರಾಜ್ಯದಲ್ಲಿ ಮಳೆ | Oneindia Kannada

ಜಾಗತಿಕ ಮಾರುಕಟ್ಟೆಗಳಲ್ಲಿ, ಸ್ಪಾಟ್ ಚಿನ್ನವು ಔನ್ಸ್‌ಗೆ 1,830 ಡಾಲರ್‌ನಷ್ಟಿದೆ. ಕೋವಿಡ್ ಪ್ರಕರಣಗಳ ಹೆಚ್ಚಳದ ಕುರಿತು ಮಾರುಕಟ್ಟೆಯಲ್ಲಿ ಕಳವಳವಿದ್ದು, ಸುರಕ್ಷಿತ ಹೂಡಿಕೆ ಚಿನ್ನದತ್ತ ಹೂಡಿಕೆದಾರರು ಮುಖ ಮಾಡಿದ್ದಾರೆ. ಇಂದು ಏಷ್ಯಾದ ಷೇರು ಮಾರುಕಟ್ಟೆಗಳು ಸಮತಟ್ಟಾಗಿ ಮುಂದುವರಿದಿವೆ. ನವೆಂಬರ್ ತಿಂಗಳಿನಲ್ಲಿ ಕೋವಿಡ್-19 ಲಸಿಕೆಯ ಆಶಾವಾದವೂ ಷೇರು ಪೇಟೆಯಲ್ಲಿನ ಭಾರೀ ಏರಿಕೆಗೆ ಕಾರಣಗಳಲ್ಲಿ ಒಂದಾಗಿದೆ.

English summary
Gold has bounced back from recent lows in indian market for the third day in a row
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X