ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಳಿಕೆಯತ್ತ ಮುಖ ಮಾಡಿದ್ದ ಚಿನ್ನದ ಬೆಲೆ ಏರಿಕೆ

|
Google Oneindia Kannada News

ನವದೆಹಲಿ, ಆಗಸ್ಟ್‌ 28: ಭಾರತೀಯ ಮಾರುಕಟ್ಟೆಯಲ್ಲಿ ಹಲವು ವಹಿವಾಟುಗಳಲ್ಲಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಏರಿಕೆ ದಾಖಲಿಸಿದೆ. ಎಂಸಿಎಕ್ಸ್‌ನಲ್ಲಿ, ಅಕ್ಟೋಬರ್ ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇಕಡಾ 0.3 ರಷ್ಟು ಏರಿಕೆಗೊಂಡು 51,071 ಕ್ಕೆ ತಲುಪಿದ್ದರೆ, ಬೆಳ್ಳಿ ಭವಿಷ್ಯವು ಪ್ರತಿ ಕೆ.ಜಿ.ಗೆ ಶೇಕಡಾ 0.7ರಷ್ಟು ಹೆಚ್ಚಾಗಿ, 65,673 ರೂಪಾಯಿಗೆ ತಲುಪಿದೆ.

Recommended Video

Unlock 4 ಮಹತ್ವ ಬದಲಾವಣೆ | Oneindia Kannada

ಹಿಂದಿನ ವಹಿವಾಟಿನಲ್ಲಿ, ಚಿನ್ನವು 10 ಗ್ರಾಂಗೆ 900 ರೂಪಾಯಿ ಕುಸಿದಿದ್ದರೆ, ಬೆಳ್ಳಿ ಪ್ರತಿ ಕೆ.ಜಿ.ಗೆ, 2,500 ರೂಪಾಯಿ ಕುಸಿದಿದೆ. ಆಗಸ್ಟ್ 7 ರಂದು ದಾಖಲೆಯ ಗರಿಷ್ಠ, 56,200 ಕ್ಕೆ ತಲುಪಿದಾಗಿನಿಂದ ಭಾರತದಲ್ಲಿ ಚಿನ್ನದ ಬೆಲೆಗಳು ಬಹಳ ಏರಿಳಿತಗೊಂಡಿವೆ.

Gold prices today rise after a big fall, silver prices edge higher

 ಚಿನ್ನದ ಬೆಲೆಯ ಹಾವು-ಏಣಿ ಆಟ: ಇಳಿಕೆ ಕಂಡಿದ್ದ ಹಳದಿ ಲೋಹದ ಬೆಲೆ ಏರಿಕೆ ಚಿನ್ನದ ಬೆಲೆಯ ಹಾವು-ಏಣಿ ಆಟ: ಇಳಿಕೆ ಕಂಡಿದ್ದ ಹಳದಿ ಲೋಹದ ಬೆಲೆ ಏರಿಕೆ

ಜಾಗತಿಕ ಮಾರುಕಟ್ಟೆಗಳಲ್ಲಿ, ಹಿಂದಿನ ಅಧಿವೇಶನದಲ್ಲಿ ತೀವ್ರ ಕುಸಿತದ ನಂತರ ಚಿನ್ನದ ಬೆಲೆ ಸ್ಥಿರವಾಗಿತ್ತು. ಹಿಂದಿನ ಅಧಿವೇಶನದಲ್ಲಿ ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.1ರಷ್ಟು ಏರಿಕೆಯಾಗಿ 1,929.94 ಡಾಲರ್‌ಗೆ ತಲುಪಿದೆ. ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಔನ್ಸ್‌ಗೆ ಶೇಕಡಾ 0.1ರಷ್ಟು ಕಡಿಮೆಯಾಗಿದ್ದರೆ, ಪ್ಲಾಟಿನಂ ಶೇಕಡಾ 0.7 ರಷ್ಟು ಕುಸಿದು 922.07 ಡಾಲರ್‌ಗೆ ತಲುಪಿದೆ.

English summary
Gold and silver prices rose today in Indian markets after slumping in the previous session.know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X