ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7 ದಿನದಲ್ಲಿ 6ನೇ ಬಾರಿಗೆ ಕುಸಿತ ಕಂಡ ಚಿನ್ನದ ಬೆಲೆ

|
Google Oneindia Kannada News

ನವದೆಹಲಿ, ಆಗಸ್ಟ್‌ 27: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಂದು ಕಡಿಮೆಯಾಗಿದೆ. ಎಂಸಿಎಕ್ಸ್‌ನಲ್ಲಿ ಅಕ್ಟೋಬರ್ ಚಿನ್ನದ ಭವಿಷ್ಯವು ಪ್ರತಿ 10 ಗ್ರಾಂ ಶೇಕಡಾ 0.22ರಷ್ಟು ಇಳಿಕೆಯಾಗಿ, 51,665 ರೂಪಾಯಿಗೆ ತಲುಪಿದೆ.

Recommended Video

Virat Kohli ಅಭಿಮಾನಿಗಳ ಪ್ರಕಾರ ಮನೆಗೆ ಪಾಪು ಬರೋ ಹೊತ್ತಿಗೆ ಕಪ್ ನಮ್ಮದೆ | Oneindia Kannada

ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇಕಡಾ 1ರಷ್ಟು ಕುಸಿದು 66,821 ರೂಪಾಯಿಗೆ ತಲುಪಿದೆ. ಹಿಂದಿನ ಅಧಿವೇಶನದಲ್ಲಿ ಚಿನ್ನವು ಐದು ದಿನಗಳ ಇಳಿಕೆಯನ್ನು ಕಂಡಿದೆ. ಚಿನ್ನದ ಭವಿಷ್ಯವು 10 ಗ್ರಾಂಗೆ 900 ಏರಿಕೆಯಾಗಿದ್ದರೆ, ಬೆಳ್ಳಿ ಪ್ರತಿ ಕೆ.ಜಿ.ಗೆ, 3,500 ಏರಿದೆ.

ಚಿನ್ನದ ಬೆಲೆ ಮತ್ತಷ್ಟು ಇಳಿಕೆ : ಆಗಸ್ಟ್‌ 26ರ ದರ ಹೀಗಿದೆಚಿನ್ನದ ಬೆಲೆ ಮತ್ತಷ್ಟು ಇಳಿಕೆ : ಆಗಸ್ಟ್‌ 26ರ ದರ ಹೀಗಿದೆ

ಜಾಗತಿಕ ಮಾರುಕಟ್ಟೆಗಳಲ್ಲಿ, ಹಿಂದಿನ ಅಧಿವೇಶನದಲ್ಲಿ ಬಲವಾದ ಲಾಭವನ್ನು ಗಳಿಸಿದ ನಂತರ ಚಿನ್ನದ ಬೆಲೆಗಳು ಸ್ಥಿರವಾಗಿದ್ದವು. ಸ್ಪಾಟ್ ಚಿನ್ನವು ಔನ್ಸ್‌ಗೆ 1,952.11 ಡಾಲರ್‌ರಂತೆ ಸ್ಥಿರವಾಗಿತ್ತು, ಇದು ಅಮೆರಿಕನ್ ಡಾಲರ್‌ ಅನ್ನು ಡಾಲರ್ ದುರ್ಬಲಗೊಳಿಸಿತು. ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಔನ್ಸ್‌ಗೆಗೆ ಶೇಕಡಾ 0.8ರಷ್ಟು ಇಳಿದು 27.30 ಡಾಲರ್‌ಗೆ ತಲುಪಿದೆ. ಪ್ಲಾಟಿನಂ ಶೇಕಡಾ 0.6 ರಷ್ಟು ಏರಿಕೆಯಾಗಿ 934.29 ಅಮೆರಿಕನ್ ಡಾಲರ್‌ಗೆ ತಲುಪಿದೆ.

Gold prices today fall for sixth time in 7 days, silver rates rise

ಡಾಲರ್ ಸೂಚ್ಯಂಕವು ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಶೇಕಡಾ 0.2 ನಷ್ಟು ಕುಸಿದು ಒಂದು ವಾರದ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇದರಿಂದಾಗಿ ಇತರ ಕರೆನ್ಸಿಗಳನ್ನು ಹೊಂದಿರುವವರಿಗೆ ಚಿನ್ನವು ಕಡಿಮೆ ವೆಚ್ಚವಾಗುತ್ತದೆ.

ಹಣದುಬ್ಬರ ಮತ್ತು ವಿತ್ತೀಯ ನೀತಿಯ ಕುರಿತಾದ ಅಮೆರಿಕಾ ಸೆಂಟ್ರಲ್ ಬ್ಯಾಂಕಿನ ಕಾರ್ಯತಂತ್ರದ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಚಿನ್ನದ ವ್ಯಾಪಾರಿಗಳು ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರ ಭಾಷಣಕ್ಕಾಗಿ ಎದುರು ನೋಡುತ್ತಿದ್ದಾರೆ.

English summary
Gold and silver prices edged lower in Indian markets today after posting strong gains in the previous session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X