ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಇಳಿಕೆ: ನಾಲ್ಕು ದಿನಗಳ ಬಳಿಕ ಕುಸಿತ

|
Google Oneindia Kannada News

ನವದೆಹಲಿ, ಫೆಬ್ರವರಿ 11: ಜಾಗತಿಕ ಮಾರುಕಟ್ಟೆಗಳಲ್ಲಿ ಸತತ ನಾಲ್ಕು ದಿನಗಳ ಏರಿಕೆ ಬಳಿಕ ಗುರುವಾರ ಚಿನ್ನದ ಬೆಲೆಗಳು ಕುಸಿತ ಕಂಡಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ನಾಲ್ಕು ದಿನಗಳ ಏರಿಕೆ ನಂತರ 10 ಗ್ರಾಂಗೆ ಶೇಕಡಾ 0.32ರಷ್ಟು ಕುಸಿದು 47,857 ರೂಪಾಯಿಗೆ ತಲುಪಿದೆ.

ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇಕಡಾ 1ರಷ್ಟು ಇಳಿದು, 68,275 ರೂಪಾಯಿಗೆ ತಲುಪಿದೆ. ಇದರ ಜೊತೆಗೆ ಜಾಗತಿಕ ಮಾರುಕಟ್ಟೆಗಳಲ್ಲಿ, ಚಿನ್ನದ ಬೆಲೆಗಳು ಔನ್ಸ್‌ಗೆ ಶೇಕಡಾ 0.2ರಷ್ಟು ಇಳಿದು 1,838.41 ಡಾಲರ್‌ಗೆ ತಲುಪಿದೆ.

ಚಿನ್ನದ ಬೆಲೆ ಮತ್ತಷ್ಟು ಏರಿಕೆ: ಫೆಬ್ರವರಿ 10ರ ಬೆಲೆ ತಿಳಿದುಕೊಳ್ಳಿಚಿನ್ನದ ಬೆಲೆ ಮತ್ತಷ್ಟು ಏರಿಕೆ: ಫೆಬ್ರವರಿ 10ರ ಬೆಲೆ ತಿಳಿದುಕೊಳ್ಳಿ

ಇತರ ಅಮೂಲ್ಯ ಲೋಹಗಳ ಪೈಕಿ, ಸ್ಪಾಟ್ ಸಿಲ್ವರ್ ಶೇಕಡಾ 0.4ರಷ್ಟು ಇಳಿಕೆಗೊಂಡು 26.89 ಡಾಲರ್‌ಗೆ ತಲುಪಿದೆ. ಪಲ್ಲಾಡಿಯಮ್ ಶೇಕಡಾ 0.2ರಷ್ಟು 2,351.24 ಡಾಲರ್‌ಗೆ ಇಳಿದಿದೆ.

Gold Prices Today Fall For First Time After 4 Days

ಅಮೆರಿಕಾದ ನೂತನ ಅಧ್ಯಕ್ಷ ಜೋ ಬೈಡೆನ್ ಆರ್ಥಿಕ ಪರಿಹಾರ ಪ್ಯಾಕೇಜ್ ಘೋಷಣೆಯು ವಿಳಂಬವಾಗುವುದರ ಜೊತೆಗೆ ಹೂಡಿಕೆದಾರರು ನಿರೀಕ್ಷೆಗಳು ಹೆಚ್ಚಾಗಿದೆ.

ಜನವರಿಯಲ್ಲಿ ಭಾರತದಲ್ಲಿ ಚಿನ್ನದ ಆಮದು ಒಂದು ವರ್ಷದ ಹಿಂದಿನ ಪ್ರಮಾಣಕ್ಕಿಂತ ಶೇಕಡಾ 72ರಷ್ಟು ಏರಿಕೆಯಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಚಿಲ್ಲರೆ ಖರೀದಿದಾರರು ಮತ್ತು ಆಭರಣ ವ್ಯಾಪಾರಿಗಳ ದಾಖಲೆಯ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ.

English summary
Gold futures today fell 0.32% to Rs 47,857 per 10 gram after a four-day rising streak
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X