ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ 4ನೇ ದಿನ ಚಿನ್ನದ ಬೆಲೆ ಇಳಿಕೆ: ಬೆಳ್ಳಿ ದರದಲ್ಲೂ ಕುಸಿತ

|
Google Oneindia Kannada News

ನವದೆಹಲಿ, ನವೆಂಬರ್ 19: ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತಷ್ಟು ಇಳಿಕೆ ಕಂಡಿದ್ದು, ಇಂದು ಕೂಡ ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕುಸಿತವನ್ನು ಮುಂದುವರಿಸಿದೆ.

ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಸತತ ನಾಲ್ಕನೇ ದಿನ ನಷ್ಟದಲ್ಲಿ ಮುಂದುವರಿದ್ದು, 10 ಗ್ರಾಂಗೆ ಶೇ. 0.3ರಷ್ಟು ಕುಸಿದು, 50,180 ರೂಪಾಯಿಗೆ ತಲುಪಿದೆ ಮತ್ತು ಬೆಳ್ಳಿಯ ಭವಿಷ್ಯವು ಪ್ರತಿ ಕೆಜಿಗೆ ಶೇ. 0.8ರಷ್ಟು ಇಳಿಕೆಯಾಗಿದ್ದು 62,043 ರೂಪಾಯಿಗೆ ತಲುಪಿದೆ.

ಚಿನ್ನದ ಬೆಲೆ ಮತ್ತಷ್ಟು ಇಳಿಕೆ: ದೇಶದ ಪ್ರಮುಖ ನಗರಗಳ ದರ ಇಲ್ಲಿದೆಚಿನ್ನದ ಬೆಲೆ ಮತ್ತಷ್ಟು ಇಳಿಕೆ: ದೇಶದ ಪ್ರಮುಖ ನಗರಗಳ ದರ ಇಲ್ಲಿದೆ

ಹಿಂದಿನ ದಿನ ವಹಿವಾಟು ಅಂತ್ಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ತೀವ್ರವಾಗಿ ಕುಸಿಯಿತು. ಚಿನ್ನವು 10 ಗ್ರಾಂಗೆ 450 ರೂಪಾಯಿನಷ್ಟು ಕುಸಿಯಿತು ಮತ್ತು ಬೆಳ್ಳಿಯ ದರವು ಪ್ರತಿ ಕೆ.ಜಿ.ಗೆ 718 ರೂಪಾಯಿ ಕಡಿಮೆಯಾಗಿದೆ. ಚಿನ್ನದ ಬೆಲೆಗಳು ಆಗಸ್ಟ್‌ನ ಗರಿಷ್ಠ ಮಟ್ಟ 56,200 ರೂಪಾಯಿ ಮಟ್ಟದಿಂದ 6000 ರೂಪಾಯಿ ಕಡಿಮೆಯಾಗಿದೆ.

 Gold prices today drop for 4th day in a row, silver prices slump

ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಗಳು ಕುಸಿತ ಮುಂದುವರಿಸಿದ್ದು, ಯುಎಸ್ ಡಾಲರ್‌ನಿಂದ ಒತ್ತಡಕ್ಕೊಳಗಾಗಿದೆ. ಕೋವಿಡ್ ಲಸಿಕೆ ಅಭಿವೃದ್ಧಿಯಲ್ಲಿನ ಪ್ರಗತಿಯ ಬಗ್ಗೆ ಆಶಾವಾದವು ಹಳದಿ ಲೋಹದ ಮೇಲೆ ಪರಿಣಾಮ ಬೀರಿದೆ. ಸ್ಪಾಟ್ ಚಿನ್ನವು ಔನ್ಸ್‌ಗೆ ಶೇ. 0.1ರಷ್ಟು ಕುಸಿದು 1,869.86 ಡಾಲರ್‌ಗೆ ತಲುಪಿದೆ.

ಚಿನ್ನದ ವಿಮೆ: ಆಭರಣಗಳಿಗೆ ಉಚಿತ ವಿಮೆ ನೀಡಲಾಗುತ್ತಿದೆ, ಹೇಗೆ ಎಂದು ತಿಳಿಯಿರಿಚಿನ್ನದ ವಿಮೆ: ಆಭರಣಗಳಿಗೆ ಉಚಿತ ವಿಮೆ ನೀಡಲಾಗುತ್ತಿದೆ, ಹೇಗೆ ಎಂದು ತಿಳಿಯಿರಿ

ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಔನ್ಸ್‌ಗೆ ಶೇ. 0.3ರಷ್ಟು ಕುಸಿದು 24.24 ಡಾಲರ್‌ಗೆ ಮುಟ್ಟಿದೆ. ಪ್ಲ್ಯಾಟಿನಂ ಶೇ. 0.5ರಷ್ಟು ಇಳಿದು 937.30 ಡಾಲರ್‌ಗೆ ತಲುಪಿದ್ದರೆ, ಪಲ್ಲಾಡಿಯಮ್ ಶೇ. 0.7ನಷ್ಟು ಇಳಿದು 2,311.91 ಡಾಲರ್‌ನಷ್ಟಿದೆ.

English summary
Gold and silver prices in India edged lower today for 4th day. gold rates are down about Rs 6,000 from their August highs
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X