ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾದಲ್ಲಿ ಡಲ್ ಆಗಿದ್ದ ಚಿನ್ನದ ಬೆಲೆ, ದೀಪಾವಳಿಯಲ್ಲಿ ಏರಿಕೆ!

By Mahesh
|
Google Oneindia Kannada News

Recommended Video

ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನ ಬೆಳ್ಳಿ ದರ ಆಗಸಕ್ಕೆ | Oneindia Kannada

ಬೆಂಗಳೂರು, ಅಕ್ಟೋಬರ್ 19: ನವರಾತ್ರಿ, ದಸರಾ ಹಬ್ಬದ ಅಬ್ಬರ ಕಡಿಮೆಯಾಗುತ್ತಿದ್ದಂತೆ ಹಳದಿ ಲೋಹ ತನ್ನ ಬೆಲೆ ಕಳೆದುಕೊಳ್ಳುತ್ತಿದೆ. ದೀಪಾವಳಿ ವೇಳೆಗೆ ಬೆಲೆ ಮತ್ತೆ ಚೇತರಿಕೆ ಕಂಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಡಿಮೆ ಇದ್ದರೂ ಹಬ್ಬದ ಸೀಸನ್ ಹಿನ್ನಲೆಯಲ್ಲಿ ಹಳದಿ ಲೋಹದ ಬೆಲೆ ಒಂದೇ ದಿನ 290 ರೂ. ಏರಿಕೆಯಾಗಿದೆ.

ದಸರಾ ಹಬ್ಬದ ಸಂದರ್ಭದಲ್ಲಿ ಚಿನ್ನಾಭರಣ ವ್ಯಾಪಾರಿಗಳು, ಕಂಪನಿಗಳಿಂದ ಖರೀದಿ ಪ್ರಮಾಣ ತಗ್ಗಿರುವುದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿತ್ತು.

Gold prices surge by Rs290 on Deepavali demand


ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸ್ಥಳೀಯ ವರ್ತಕರು, ಗ್ರಾಹಕರು ಖರೀದಿಗೆ ಹೆಚ್ಚಿನ ಆಸಕ್ತಿ ತೋರಿದ ಹಿನ್ನಲೆಯಲ್ಲಿ ಬೆಲೆ ಏರಿಕೆಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೇ. 99.9 ಮತ್ತು ಶೇ. 99.5 ಶುದ್ಧತೆಯ ಚಿನ್ನ ಪ್ರತಿ 10 ಗ್ರಾಂಗೆ ಕ್ರಮವಾಗಿ 31,000 ರೂ. ಹಾಗೂ 30,850 ರೂ. ಆಗಿದೆ.

ಚಿನ್ನ, ಬೆಳ್ಳಿ ದರಗಳ ಸಂಪೂರ್ಣ ವಿವರ ಇಲ್ಲಿ ಲಭ್ಯ

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನ 10 ಗ್ರಾಮಿಗೆ 30,180 ರು ನಷ್ಟಿದ್ದರೆ, 22 ಕ್ಯಾರಟ್ ಚಿನ್ನ 28,300ರು ನಷ್ಟಿದೆ. ಬೆಳ್ಳಿ ಬೆಲೆ ಸ್ಥಿರವಾಗಿದ್ದು ಪ್ರತಿ ಕೆ.ಜಿಗೆ 41, 000 ರು (ದೆಹಲಿ)ನಷ್ಟಿದೆ. ಬೆಂಗಳೂರಿನಲ್ಲಿ 42,935ರು ನಷ್ಟಿದೆ.(ಪಿಟಿಐ)

English summary
Gold prices surged by Rs 290 to a three-week high of Rs31,000 per 10 grams on the eve of Diwali on Wednesday on increased buying by local jewellers to meet festive demand
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X