ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರೇ! ಏನಿದು ಒಂದೇ ದಿನ ಚಿನ್ನದ ದರ ಜಿಗಿತ

By Mahesh
|
Google Oneindia Kannada News

ನವದೆಹಲಿ,ಡಿ.2: ಚಿನ್ನದ ಗ್ರಾಹಕರಿಗೆ ಸಂತಸದ ಸುದ್ದಿ ಬಂದಿದೆ. ಚಿನ್ನದ ಬೆಲೆಯಲ್ಲಿ ಇಳಿಕೆ ಮುಂದುವರಿಯುವ ಲಕ್ಷಣಗಳು ಗೋಚರಿಸಿದ ಬೆನ್ನಲ್ಲೇ ಮಂಗಳವಾರ ಒಂದೇ ದಿನ 840 ರು ಏರಿಕೆ ಕಂಡಿದೆ. ಇದು ಈ ವರ್ಷದಲ್ಲೇ ಒಂದೇ ದಿನ ಅತ್ಯಂತ ಅಧಿಕ ಪ್ರಮಾಣದ ದರ ಏರಿಕೆ ಇದಾಗಿದೆ ಎಂದು ಚಿನಿವಾರ ಪೇಟೆಯಿಂದ ತಿಳಿದು ಬಂದಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಏರುಪೇರು, ಶುಭ ಸಮಾರಂಭಕ್ಕಾಗಿ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಆಭರಣಕ್ಕಾಗಿ ರೀಟೈಲರ್ ಗಳಿಗೆ ಬೇಡಿಕೆ ಹೆಚ್ಚಿರುವುದು ದರ ಏರಿಕೆಗೆ ಕಾರಣವಾಗಿದೆ. ದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಸುಮಾರು 27,000 ರು ನಷ್ಟಿದೆ. ಬೆಂಗಳೂರಿನ ಡಿ.2ರಂದು ಚಿನ್ನದ ದರ 10ಗ್ರಾಂಗೆ 24,660(22 K) ಹಾಗೂ 26,860 ರು (24K) ಆಸುಪಾಸಿನಲ್ಲಿದೆ.

ಆರ್ ಬಿಐ ಚಿನ್ನದ ಆಮದು ಮೇಲೆ ನಿರ್ಬಂಧ ಹೇರಿದ ಮೇಲೆ ಚಿನ್ನ ಸತತವಾಗಿ ಕುಸಿತ ಕಂಡಿತ್ತು. ಇತ್ತೀಚೆಗೆ 730 ರು ಕುಸಿತ ಕಂಡಿತ್ತು. ಅದರೆ, ಬೆಳ್ಳಿ ಪ್ರತಿ ಕೆಜಿಗೆ 37000 ರು ನಷ್ಟಿದೆ.[ಡಿಸೆಂಬರ್ ವೇಳೆಗೆ ಚಿನ್ನದ ದರ ಇನ್ನಷ್ಟು ಕುಸಿತ!]

Gold prices soar by Rs. 840 in biggest single-day gain this year

ಭಾರತೀಯ ರುಪಾಯಿಯ ಬಲ ಸಿಕ್ಕರೆ ಚಿನ್ನದ ದರದಲ್ಲಿ ಇನ್ನಷ್ಟು ಇಳಿಕೆಯಾಗಲಿದೆ. ಡಿಸೆಂಬರ್ ತಿಂಗಳ ಆರಂಭದಲ್ಲೇ ಪ್ರತಿ 10ಗ್ರಾಂಗೆ 24,500 ರು ಗೆ ಇಳಿದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಚಿನಿವಾರ ಪೇಟೆ ಪಂಡಿತರು ನವೆಂಬರ್ ತಿಂಗಳ ಆರಂಭದಲ್ಲೇ ಭವಿಷ್ಯ ನುಡಿದಿದ್ದರು.

ವರ್ಷಾಂತ್ಯಕ್ಕೆ ಜಾಗತಿಕವಾಗಿ ಪ್ರತಿ ಔನ್ಸಿಗೆ 1,080-1120 ಯುಎಸ್ ಡಾಲರ್ ಗೆ ಇಳಿಯಲಿದೆ. ಡಾಲರ್ ಎದುರು ರುಪಾಯಿ ಮೌಲ್ಯ 60-61 ರುನಂತೆ ಮುಂದುವರೆದರೆ ಪ್ರತಿ 10 ಗ್ರಾಂ ಚಿನ್ನದ ದರ 24,500 ರು ನಿಂದ 25,500 ರು ಆಗಲಿದೆ ಎಂದು ಮಾರುಕಟ್ಟೆ ತಜ್ಞ ಜ್ಞಾನಶೇಖರ್ ತ್ಯಾಗರಾಜನ್ ಹೇಳಿದ್ದರು. [ಚಿನ್ನದ ಅಂಗಿ ತೊಟ್ಟ ಉದ್ಯಮಿ ಪಂಕಜ]

ಇದಕ್ಕೆ ಪೂರಕವಾಗಿ ನವೆಂಬರ್ ನಲ್ಲಿ ಭಾರತದ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 25,800 ರು ತಲುಪಿ ಗ್ರಾಹಕರ ಕಣ್ಣು ಅರಳಿಸಿತ್ತು. ಅದರೆ, ಮದುವೆ ಮುಂತಾದ ಶುಭ ಸಮಾರಂಭ, ವರ್ಷಾಂತ್ಯದ ಆಫರ್ ಗಳು ಚಿನ್ನದ ಬೇಡಿಕೆ ಹೆಚ್ಚಿಸಿವೆ. ಹೀಗಾಗಿ ಒಂದೇ ದಿನ ಈ ಪರಿ ದರದಲ್ಲಿ ಜಿಗಿತ ಕಂಡು ಬಂದಿದೆ.

English summary
Posting this year’s biggest single-day rise of Rs. 840, gold on Tuesday regained the Rs. 27,000 per ten gram level after a gap of over one month in the national capital, tracking rebounds in global markets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X