ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆಯಲ್ಲಿ ಮತ್ತೊಮ್ಮೆ ಏರಿಕೆ, ಬೆಳ್ಳಿಗೂ ತಕ್ಕ ಬೆಲೆ!

|
Google Oneindia Kannada News

ನವದೆಹಲಿ, ಡಿಸೆಂಬರ್ 24: ಸ್ಥಳೀಯ ಆಭರಣಗಾರರಿಂದ ಬೇಡಿಕೆ ಹೆಚ್ಚುತ್ತಿದ್ದಂತೆ, ಚಿನಿವಾರ ಪೇಟೆಯಲ್ಲಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ಸೋಮವಾರದಂದು ಮತ್ತೊಮ್ಮೆ ಬೆಲೆ ಏರಿಕೆ ಕಂಡು ಬಂದಿದೆ.

ದೆಹಲಿ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಕೆಯಾಗಿದೆ. ಬಂಗಾರದ ಬೆಲೆ 175 ರೂಪಾಯಿ ಏರಿಕೆ ಕಂಡು 10 ಗ್ರಾಂಗೆ 32,275 ರೂಪಾಯಿಯಾಗಿದೆ. ಬೆಳ್ಳಿ ಬೆಲೆ 200 ರೂಪಾಯಿ ಏರಿಕೆ ಕಂಡು ಕೆ.ಜಿಗೆ 38,000 ರೂಪಾಯಿಯಾಗಿದೆ.

ಸತತ ಎರಡು ದಿನಗಳಿಂದ ಚಿನ್ನದ ಬೆಲೆ ಏರಿಕೆ, ಬೆಳ್ಳಿಯೂ ದುಬಾರಿಸತತ ಎರಡು ದಿನಗಳಿಂದ ಚಿನ್ನದ ಬೆಲೆ ಏರಿಕೆ, ಬೆಳ್ಳಿಯೂ ದುಬಾರಿ

ದೆಹಲಿಯಲ್ಲಿ ಶೇಕಡಾ 99.9 ಹಾಗೂ ಶೇಕಡಾ 99.5 ರಷ್ಟು ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ ತಲಾ 32,275 ರೂಪಾಯಿ ಹಾಗೂ 32,125 ರೂಪಾಯಿಯಾಗಿದೆ.

Gold prices rise sharply today, silver rates jump

ಸವರನ್ ಚಿನ್ನದಲ್ಲಿ 8ಗ್ರಾಂನ ತುಂಡಿಗೆ 25000ರುನಷ್ಟಿದೆ. ಬೆಳ್ಳಿ ನಾಣ್ಯಗಳು 100ಕ್ಕೆ ಖರೀದಿಗಾಗಿ 74000 ರು ಹಾಗೂ ಮಾರಾಟಕ್ಕೆ 75000ರು ನಷ್ಟಿದೆ.

ಯುಎಸ್ಎ ಸರ್ಕಾರದ ನೀತಿ, ಚೀನಾ-ಅಮೆರಿಕ ಮಧ್ಯೆ ನಡೆಯುತ್ತಿರುವ ವ್ಯಾಪಾರಿ ವಹಿವಾಟಿನ ಬೆಳವಣಿಗೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಚಿನ್ನ-ಬೆಳ್ಳಿ ಬೆಲೆ ಏರಿಕೆಗೆ ಕಾರಣವಾಗಿದೆ.

ನ್ಯೂಯಾರ್ಕ್ ನಲ್ಲಿ ಚಿನ್ನದ ಬೆಲೆ ಶೇಕಡಾ 0.51ರಷ್ಟು ಹೆಚ್ಚಳ ಕಂಡು 1,263.80 ಡಾಲರ್ ಪ್ರತಿ ಔನ್ಸ್ ಆಗಿದೆ. ಇನ್ನು ಶೇಕಡಾ 0.41ರಷ್ಟು ಹೆಚ್ಚಳ ಕಂಡ ಚಿನ್ನದ ಬೆಲೆ 14.76 ಡಾಲರ್ ಪ್ರತಿ ಔನ್ಸ್ ಆಗಿದೆ.

English summary
Gold prices today jumped Rs 175 to Rs 32,275 per 10 gram at the bullion market while silver rates advanced by Rs 200 to Rs 38,000 per kg. In Delhi, gold of 99.9% and 99.5% purities added Rs 175 each at Rs 32,275 and Rs 32,125 per 10 gram
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X