ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ ಎರಡು ದಿನಗಳಿಂದ ಚಿನ್ನದ ಬೆಲೆ ಏರಿಕೆ, ಬೆಳ್ಳಿಯೂ ದುಬಾರಿ

|
Google Oneindia Kannada News

ನವದೆಹಲಿ, ಡಿಸೆಂಬರ್ 21: ಹಳದಿ ಲೋಹ ಬಂಗಾರಕ್ಕೆ ಮತ್ತೊಮ್ಮೆ ಬೆಲೆ ಪಡೆದುಕೊಳ್ಳುತ್ತಿದೆ. ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ. ದೆಹಲಿ ಮಾರುಕಟ್ಟೆಯಲ್ಲಿ ಶುಕ್ರವಾರದಂದು ಚಿನ್ನದ ಬೆಲೆ ಎರಡು ದಿನಗಳಿಂದ 380 ರೂಪಾಯಿ ಹೆಚ್ಚಳವಾಗಿದೆ. ಇಳಿಕೆಯಾಗಿದ್ದ ಬೆಳ್ಳಿ ಬೆಲೆ ಕೂಡ ಏರಿದೆ.

ಶುಕ್ರವಾರ ಬಂಗಾರದ ಬೆಲೆ 230 ರೂಪಾಯಿ ಹೆಚ್ಚಳವಾಗಿದ್ದು 10 ಗ್ರಾಂ ಬಂಗಾರದ ಬೆಲೆ 32,230 ರೂಪಾಯಿಯಾಗಿದೆ. ಇನ್ನು ಬೆಳ್ಳಿ ಕೂಡ 250 ರೂಪಾಯಿ ಹೆಚ್ಚಾಗಿ ಕೆ.ಜಿಗೆ 38,000 ರೂಪಾಯಿಯಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಬಂಗಾರ ತಯಾರಕರ ಬೇಡಿಕೆ ಹೆಚ್ಚಾಗಿದ್ದು ಬೆಲೆ ಏರಿಕೆಗೆ ಕಾರಣವಾಗಿದೆ.

Gold Prices Rise For Second Straight Day

ಅಂತಾರಾಷ್ಟ್ರೀಯ ಮಾರುಕಟ್ಟೆ ನ್ಯೂಯಾರ್ಕ್ ನಲ್ಲಿ ಬಂಗಾರದ ಬೆಲೆ 1,259.12 ಡಾಲರ್ ಪ್ರತಿ ಔನ್ಸ್ ಆಗಿದೆ. ಬೆಳ್ಳಿ 14.72 ಡಾಲರ್ ಪ್ರತಿ ಔನ್ಸ್ ನಷ್ಟಿದೆ.

ದೆಹಲಿಯಲ್ಲಿ ಶೇಕಡಾ 99.9 ಹಾಗೂ ಶೇಕಡಾ 99.5 ರಷ್ಟು ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ ತಲಾ 32,230 ರೂಪಾಯಿ ಹಾಗೂ 32,080 ರೂಪಾಯಿಯಾಗಿದೆ.

ಬೆಳ್ಳಿ ಬೆಲೆಯಲ್ಲಿ 250ರು ಏರಿಕೆ ಕಂಡು ಕೆಜಿಗೆ 38000ರು ಆಗಿದೆ. ಬೆಳ್ಳಿ ನಾಣ್ಯಗಳು 100ಕ್ಕೆ ಖರೀದಿಗೆ74000ರು ಹಾಗೂ ಮಾರಾಟಕ್ಕೆ 75000ರು ನಷ್ಟಿದೆ.

English summary
Rising for the second straight session, gold prices on Friday jumped Rs. 230 to close at Rs. 32,230 per 10 grams at the bullion market in the national capital reported news agency Press Trust of India (PTI).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X