ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ 10ನೇ ದಿನ ಚಿನ್ನದ ಬೆಲೆ ಏರಿಕೆ: ಬೆಳ್ಳಿ ಬೆಲೆ ಕೊಂಚ ಕುಸಿತ

|
Google Oneindia Kannada News

ನವದೆಹಲಿ, ಜುಲೈ 30: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರುತ್ತಲೇ ಸಾಗಿದ್ದು, ಸತತ 10 ದಿನ ಹಳದಿ ಲೋಹದ ಬೆಲೆ ಜಿಗಿದಿದೆ.

ಎಂಸಿಎಕ್ಸ್‌ನಲ್ಲಿ, ಆಗಸ್ಟ್‌ ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇ. 0.21 ರಷ್ಟು ಏರಿಕೆಗೊಂಡು 53,300 ರೂಪಾಯಿಗೆ ತಲುಪಿದೆ. 10 ದಿನಗಳಲ್ಲಿ ಅಮೂಲ್ಯವಾದ ಲೋಹವು 10 ಗ್ರಾಂಗೆ, 5,500 ರೂಪಾಯಿ ಅಥವಾ ಸುಮಾರು ಶೇ. 11ರಷ್ಟು ಹೆಚ್ಚಾಗಿದೆ.

ಚಿನ್ನ ಇದೀಗ ಮತ್ತಷ್ಟು ದುಬಾರಿ: ಜುಲೈ 29ರ ದರ ಹೀಗಿದೆಚಿನ್ನ ಇದೀಗ ಮತ್ತಷ್ಟು ದುಬಾರಿ: ಜುಲೈ 29ರ ದರ ಹೀಗಿದೆ

ಎಂಸಿಎಕ್ಸ್‌ನಲ್ಲಿನ ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇ. 0.22ರಷ್ಟು ಏರಿಕೆಗೊಂಡು ಕೆಜಿಗೆ 65,212 ರೂಪಾಯಿಗೆ ತಲುಪಿದೆ.

Gold Prices Rise For 10th Day In A Row

ಹಿಂದಿನ ಅಧಿವೇಶನದಲ್ಲಿ, ಚಿನ್ನವು 10 ಗ್ರಾಂಗೆ ಆರಂಭಿಕ ವಹಿವಾಟಿನಲ್ಲಿ ಇಳಿಕೆ ಕಂಡು ನಂತರ ಶೇ.1.4ರಷ್ಟು ಅಥವಾ 730 ರೂಪಾಯಿ ಏರಿಕೆಯಾಗಿತು. ಅಲ್ಲದೆ ಹೊಸ ಗರಿಷ್ಠ 53,399 ರೂಪಾಯಿ ಅನ್ನು ಮುಟ್ಟಿದೆ. ಬೆಳ್ಳಿ ಶೇ. 0.5ರಷ್ಟು ಹೆಚ್ಚಾಗಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ, ಒಂಬತ್ತು ದಿನಗಳ ಸತತ ಏರಿಕೆ ನಂತರ ಚಿನ್ನದ ಬೆಲೆ ಹೊಸ ಉತ್ತುಂಗಕ್ಕೇರಿತು. ಸ್ಪಾಟ್ ಚಿನ್ನ ಶೇ. 0.3ರಷ್ಟು ಇಳಿಕೆಯಾಗಿ ಔನ್ಸ್‌ಗೆ 1,965.90 ಡಾಲರ್‌ಗೆ ತಲುಪಿದೆ. ಮಂಗಳವಾರ, ಬೆಲೆಗಳು ಸಾರ್ವಕಾಲಿಕ ಗರಿಷ್ಠ 1,981 ಡಾಲರ್‌ಗೆ ತಲುಪಿದೆ. ಈ ವಾರ 2,000 ಡಾಲರ್‌ಗೆ ಏರಿದ ನಂತರ ಚಿನ್ನದ ಭವಿಷ್ಯವು ಶೇ. 0.2ರಷ್ಟು ಹೆಚ್ಚಳದಿಂದ 1,981.60 ಡಾಲರ್‌ಗೆ ವಹಿವಾಟು ನಡೆಸಿತು.

ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಶೇ. 0.2 ನಷ್ಟು ಕಡಿಮೆಯಾಗಿ ಔನ್ಸ್‌ಗೆ 24.2614 ಡಾಲರ್‌ಗೆ ತಲುಪಿದೆ. ಈ ವರ್ಷ ಇಲ್ಲಿಯವರೆಗೆ ಚಿನ್ನವು ಜಾಗತಿಕ ಮಾರುಕಟ್ಟೆಗಳಲ್ಲಿ ಸುಮಾರು ಶೇ. 30ರಷ್ಟು ಹೆಚ್ಚಾಗಿದೆ, ಇದು ಲೋಹಕ್ಕೆ ಸುರಕ್ಷಿತವಾದ ಬೇಡಿಕೆಯ ನಡುವೆ, ದುರ್ಬಲ ಡಾಲರ್, ಕಡಿಮೆ ಬಡ್ಡಿದರಗಳು ಮತ್ತು ಕೊರೊನಾವೈರಸ್ ಪ್ರಕರಣಗಳ ಉಲ್ಬಣದಿಂದ ಪ್ರೇರಿತವಾಗಿದೆ.

English summary
Gold prices today moved higher in Indian markets, extending gains to the 10th day. On MCX, August gold futures were up 0.21% to Rs 53,300 per 10 gram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X