ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂಪಾಯಿ ಮೌಲ್ಯ ಇಳಿಕೆ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ

|
Google Oneindia Kannada News

ಬೆಂಗಳೂರು, ಆಗಸ್ಟ್ 23: ರೂಪಾಯಿ ಮೌಲ್ಯ ಇಳಿಕೆಯಾಗಿ ಷೇರು ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆಗಳ ಪರಿಣಾಮ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಗುರುವಾರ ಚಿನ್ನದ ಬೆಲೆ 10 ಗ್ರಾಂಗೆ 150 ರೂ. ಏರಿಕೆಯಾಗಿ 38,200 ರೂ. ತಲುಪಿದೆ.

ಡಾಲರ್ ಎದುರು ರೂಪಾಯಿ ಬೆಲೆ ಕುಸಿತ, ಆರ್ಥಿಕ ಪ್ರಗತಿ ಮಾಗದರ್ಶಿ ಸೂತ್ರಗಳಿಂದ ಕಾಣದ ಪ್ರಗತಿ, ಸ್ಥಳೀಯ ಮಾರುಕಟ್ಟೆಯಲ್ಲಿ ತಗ್ಗಿದ ಬೇಡಿಕೆಗೆ ಅನುಗುಣವಾಗಿ ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಕೆ ಕಂಡಿದೆ.

ಕಲಂ 370 ರದ್ದು, ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಕೇಳಿದರೆ ಬೆಚ್ಚುತ್ತೀರಿ! ಕಲಂ 370 ರದ್ದು, ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಕೇಳಿದರೆ ಬೆಚ್ಚುತ್ತೀರಿ!

ಕಳೆದ ಮಂಗಳವಾರದಿಂದಲೂ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಕೈಗಾರಿಕೆ ಘಟಕ ಮತ್ತು ನಾಣ್ಯ ತಯಾರಕರಿಂದ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಳ್ಳಿ ಬೆಲೆಯಲ್ಲಿಯೂ ಕೂಡ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ಬೆಲೆ 60 ರೂ. ಏರಿಕೆಯಾಗಿ 45,100 ರೂ. ತಲುಪಿದೆ.

Gold prices remain near record highs, silver struggles

ಗುರುವಾರದಂದು ದೆಹಲಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರು ಏರಿಕೆ ಕಂಡು, 10 ಗ್ರಾಂಗೆ 38970 ರೂಪಾಯಿ ತಲುಪಿದೆ. ಬೆಳ್ಳಿ ಬೆಲೆಯಲ್ಲೂ 60 ರು ಏರಿಕೆಯಾಗಿದ್ದು, 1 ಕೆಜಿಗೆ 45,100 ರೂಪಾಯಿನಂತೆ ವಹಿವಾಟು ನಡೆಸಿತ್ತು.

ಡಾಲರ್ ಎದುರು ರುಪಾಯಿ ಕುಸಿದಿದ್ದು 71.72 ಪ್ರತಿ ಡಾಲರ್ ನಂತೆ ಇಂದು ವಹಿವಾಟು ನಡೆಸಿದೆ. ಜಾಗತಿಕವಾಗಿ ನ್ಯೂಯಾರ್ಕಿನಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸಿಗೆ 1,500 ಯುಎಸ್ ಡಾಲರ್ ನಂತೆ ಹಾಗೂ ಬೆಳ್ಳಿ ಬೆಲೆ ಪ್ರತಿ ಔನ್ಸಿಗೆ 17.09 ಯುಎಸ್ ಡಾಲರ್ ನಂತೆ ವ್ಯವಹಾರ ಕಂಡಿದೆ.

ಅಖಿಲ ಭಾರತ ಸರಾಫಾ ಅಸೋಸಿಯೇಷನ್ ವರದಿಯಂತೆ, ಶೇ 99.9 ಪರಿಶುದ್ಧ ಚಿನ್ನ ಹಾಗೂ ಶೇ 99.5 ಪರಿಶುದ್ಧ ಚಿನ್ನದ ಕ್ರಮವಾಗಿ 38,970ರು ಪ್ರತಿ 10 ಗ್ರಾಂ ಹಾಗೂ 38,820 ರುನಷ್ಟಾಗಿದೆ.

ಆಗಸ್ಟ್ 23ರಂದು ಬೆಳ್ಳಿ ಬೆಲೆ ಸ್ಥಿರವಾಗಿದ್ದು, ಪ್ರತಿ 1 ಕೆಜಿಗೆ 45,100ರು ನಷ್ಟಿದೆ. ಆದರೆ, ಬೆಳ್ಳಿ ನಾಣ್ಯಗಳಿಗೆ ಬೇಡಿಕೆ ಕಂಡು ಬಂದಿದ್ದು 100 ಕ್ಕೆ 91,000 ರು ಖರೀದಿಗೆ ಹಾಗೂ 92,000ರು ಮಾರಾಟದ ಬೆಲೆ ಪಡೆದುಕೊಂಡಿದೆ.(ಪಿಟಿಐ)

English summary
Gold prices in India today remained supported near ₹38,200 level in futures markets while silver struggled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X