ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವರ್ಷದ ಆರಂಭದಲ್ಲಿ ಚಿನ್ನ, ಬೆಳ್ಳಿ ಬೆಲೆ ಸತತ ಏರಿಕೆ

|
Google Oneindia Kannada News

ನವದೆಹಲಿ, ಜನವರಿ 02: ಹೊಸ ವರ್ಷ 2019ರ ಆರಂಭದಲ್ಲಿ ಸತತವಾಗಿ ಚಿನ್ನ, ಬೆಳ್ಳಿ ಏರಿಕೆಯಾಗಿದೆ. ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ.

ಮಂಗಳವಾರ(ಜನವರಿ 01)ದಂದು ಚಿನ್ನದ ಬೆಲೆಯಲ್ಲಿ 200ರು ಏರಿಕೆ ಕಂಡು 10ಗ್ರಾಂಗೆ 32,470 ರು ನಂತೆ ಮಾರಾಟವಾಗಿದೆ. ಸ್ಥಳೀಯ ಆಭರಣಗಾರರಿಂದ ಹೆಚ್ಚಿನ ಬೇಡಿಕೆ ಕಂಡು ಬಂದ ಹಿನ್ನಲೆ ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ ಕಂಡಿದೆ.

Gold prices jump, silver rates rise

ಬೆಳ್ಳಿ ಬೆಲೆ 150ರು ಏರಿಕೆ ಕಂಡು ಪ್ರತಿ 1 ಕೆಜಿಗೆ 39250 ರು ನಷ್ಟಿದೆ. ಕೈಗಾರಿಕೆ ಹಾಗೂ ನಾಣ್ಯ ತಯಾರಿಕಾರಿಂದ ಬೇಡಿಕೆ ಹೆಚ್ಚಾಗಿದೆ.

ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ, ಬೆಳ್ಳಿ ದರ ಇಲ್ಲಿ ಪಡೆಯಿರಿ

ದೆಹಲಿ ಚಿನಿವಾರ ಮಾರುಕಟ್ಟೆಯಲ್ಲಿ ಬುಧವಾರದಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 30850 ರು ನಷ್ಟಿತ್ತು. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂನ ಬೆಲೆ 32650 ರು ನಷ್ಟಿತ್ತು.

ಸವರನ್ ಚಿನ್ನ 8 ಗ್ರಾಂ ಚಿನ್ನದ ತುಂಡುಗಳ ಬೆಲೆ 25,200 ರು, ಬೆಳ್ಳಿ ನಾಣ್ಯ 100 ಗಳಿಗೆ 76000 ರು ಖರೀದಿ ಹಾಗೂ 77000 ರು ಮಾರಾಟಕ್ಕಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಳೆದ ವಾರ ಪ್ರತಿ ಔನ್ಸಿಗೆ 1,280 ಡಾಲರ್ ನಷ್ಟಿತ್ತು.

English summary
Gold prices jumped on the first day of the New Year, rising Rs 200 to Rs 32,470 per 10 gram at the bullion market. A pick-up in demand from local jewellers supported gold prices, traders said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X