ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿತೃಪಕ್ಷದಲ್ಲೂ ಏರಿತು ಚಿನ್ನದ ಬೆಲೆ, ಏರಿಕೆಯಲ್ಲೂ ದಾಖಲೆ

|
Google Oneindia Kannada News

ಚಿನ್ನದ ಆಭರಣ ಖರೀದಿ ಮಾಡಬೇಕು ಅಂದುಕೊಂಡಿದ್ದೀರಾ? ಈಗ ಪಿತೃಪಕ್ಷ, ಹಬ್ಬದ ಹೊತ್ತಿಗೆ ಖರೀದಿ ಮಾಡ್ತೀವಿ ಅಂದುಕೊಂಡಿದ್ದರೂ ಈ ಸುದ್ದಿ ಒಮ್ಮೆ ಓದಿಕೊಳ್ಳಿ. ಚಿನ್ನದ ಬೆಲೆ ಹೇಗೆ ಏರಿದೆ ಪ್ರತಿ ಗ್ರಾಮ್ ಗೆ ಎಷ್ಟು ಹೆಚ್ಚು'ವರಿ' ಆಗುತ್ತದೆ ಅನ್ನೋದೆಲ್ಲ ತಿಳಿದುಕೊಂಡೇ ಅಂಗಡಿಗೆ ಹೊರಡಿ.

ಏಕೆಂದರೆ, ಚಿನಿವಾರ ಪೇಟೆಯಲ್ಲಿ ಬುಧವಾರ ಪ್ರತಿ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 555 ರುಪಾಯಿ ಏರಿಕೆ ಆಗಿ, 32,030 ರುಪಾಯಿ ತಲುಪಿದೆ. ಸ್ಥಳೀಯ ಆಭರಣ ವ್ಯಾಪಾರಿಗಳಿಂದ ಹೆಚ್ಚಿದ ಖರೀದಿ ಉತ್ಸಾಹ, ಜಾಗತಿಕ ಮಾರುಕಟ್ಟೆಯ ಸಕಾರಾತ್ಮಕ ಪ್ರಭಾವದಿಂದ ಚಿನ್ನದ ಬೆಲೆ ಏರಿಕೆ ಕಂಡಿದೆ. ಬೆಳ್ಳಿ ಕೂಡ ಕೇಜಿಗೆ 39 ಸಾವಿರ ರುಪಾಯಿ ದಾಟಿದೆ.

ರೈತರು ಖುಷ್, ವರ್ಷದ ದ್ವಿತೀಯಾರ್ಧದಲ್ಲಿ ಚಿನ್ನಕ್ಕೆ ಭರ್ಜರಿ ಬೇಡಿಕೆರೈತರು ಖುಷ್, ವರ್ಷದ ದ್ವಿತೀಯಾರ್ಧದಲ್ಲಿ ಚಿನ್ನಕ್ಕೆ ಭರ್ಜರಿ ಬೇಡಿಕೆ

ಡಾಲರ್ ವಿರುದ್ಧ ರುಪಾಯಿ ಸಾರ್ವಕಾಲಿಕ ಕುಸಿತ ಕಂಡು, ಆಮದು ದುಬಾರಿಯಾದರೂ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ. ಇಟಲಿಯು ಬಜೆಟ್ ನ ಕೊರತೆ ನೀಗಿಸಲು ಯೋಜನೆ ರೂಪಿಸುತ್ತಿರುವ ಹಿನ್ನೆಲೆಯಲ್ಲಿ ಅದರ ಸುತ್ತ ಇರುವ ಆತಂಕದ ಕಾರಣಕ್ಕೆ ಚಿನ್ನದ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ.

Gold prices jump over 550 rupees, silver price also raised

ದೆಹಲಿಯಲ್ಲಿ 99.9% ಹಾಗೂ 99.5% ಶುದ್ಧತೆಯ ಚಿನ್ನದ ಬೆಲೆಯಲ್ಲಿ 555 ರುಪಾಯಿ ಏರಿಕೆಯಾಗಿ, ಪ್ರತಿ 10 ಗ್ರಾಮ್ ಗೆ ಕ್ರಮವಾಗಿ 32,030 ಮತ್ತು 31,880 ರುಪಾಯಿ ತಲುಪಿದೆ. ಸೋಮವಾರದಂದು ಚಿನ್ನದ ಬೆಲೆಯಲ್ಲಿ 150 ರುಪಾಯಿ ಇಳಿಕೆಯಾಗಿತ್ತು. ಗಾಂಧಿ ಜಯಂತಿ ಪ್ರಯುಕ್ತ ಮಂಗಳವಾರ ಮಾರುಕಟ್ಟೆಗೆ ರಜಾ ಇತ್ತು. ಸವರನ್ (ಎಂಟು ಗ್ರಾಮ್) ಚಿನ್ನದ ಬೆಲೆಯಲ್ಲೂ 100 ರುಪಾಯಿ ಏರಿಕೆಯಾಗಿ 24,600 ರುಪಾಯಿ ಮುಟ್ಟಿದೆ.

English summary
Gold prices surged by Rs. 555 to touch Rs. 32,030 per 10 grams at the bullion market on Wednesday, taking positive leads from global markets amid fresh buying by local jewellers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X