• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಥಿರತೆ ಕಂಡುಕೊಂಡ ಚಿನ್ನ, ಬೆಳ್ಳಿ ದರ, ಗ್ರಾಹಕರಿಗೆ ಖುಷಿ

|

ಬೆಂಗಳೂರು, ನವೆಂಬರ್ 28: ಹಬ್ಬದ ಸೀಸನ್ ನಂತರ ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಸ್ಥಿರತೆ ಕಾಣುತ್ತಿದೆ. ಜಾಗತಿಕ ರಾಜಕೀಯದಲ್ಲಿನ ಬದಲಾವಣೆ, ರುಪಾಯಿ ಮೌಲ್ಯ ಚೇತರಿಕೆ, ಸ್ಥಳೀಯ ಆಭರಣಗಾರರಿಗೆ ತಗ್ಗಿದ ಬೇಡಿಕೆ ಹೀಗೆ ನಾನಾ ಕಾರಣಗಳು ಚಿನ್ನದ ಬೆಲೆ ನಿರ್ಧರಿಸುತ್ತವೆ.

ಬುಧವಾರ(ನವೆಂಬರ್ 28)ದಂದು 290ರು ಕುಸಿತ ಕಂಡು 31,560 ರು ಪ್ರತಿ 10ಗ್ರಾಂನಂತೆ ದೆಹಲಿಯಲ್ಲಿ ವಹಿವಾಟು ನಡೆಸಿದೆ. ಬೆಳ್ಳಿ ಬೆಲೆ 200 ರು ಕುಸಿತ ಕಂಡು ಪ್ರತಿ ಕೆಜಿಗೆ 37,100ರು ನಷ್ಟಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಬದಲಾವಣೆ ಹಾಗೂ ಸ್ಥಳೀಯ ಆಭರಣ ತಯಾರಕರಲ್ಲಿ ಹೆಚ್ಚಾದ ಬೇಡಿಕೆ ಬೆಲೆ ಏರಿಕೆಗೆ ಕಾರಣವಾಗಿತ್ತು. ಬೆಳ್ಳಿ ದರ ಇತ್ತೀಚೆಗೆ 250 ರೂಪಾಯಿ ಏರಿಕೆ ಕಂಡು, ಕೆ.ಜಿ. ಬೆಳ್ಳಿ ಬೆಲೆ 39,100 ರೂಪಾಯಿ ತನಕ ಮುಟ್ಟಿತ್ತು.

ಜಾಗತಿಕವಾಗಿ ಚಿನ್ನದ ಇಳಿಕೆಗೆ ಜಿ20 ಶೃಂಗಸಭೆ ಕಾರಣ ಎನ್ನಬಹುದಾಗಿದ್ದು, ಯುಎಸ್ಎ ಹಾಗೂ ಚೀನಾ ದೇಶದವರು ಯಾವ ರೀತಿ ಮಾತುಕತೆ ನಡೆಸಬಹುದು, ಏನೆಲ್ಲ ಒಪ್ಪಂದ ಮಾಡಿಕೊಳ್ಳಬಹುದು ಎಂಬುದರ ಮೇಲೆ ಅವಲಂಬಿತವಾಗಿದೆ.

ಚೀನಾ ನಂತರ ಭಾರತವು ಅತಿಹೆಚ್ಚು ಚಿನ್ನ ಆಮದು ಮಾಡಿಕೊಳ್ಳುತ್ತದೆ. ವರ್ಷಾಂತ್ಯ ಸಮೀಪಿಸುತ್ತಿದ್ದಂತೆ ಹಳದಿ ಲೋಹದ ಬೆಲೆಯಲ್ಲಿ ವ್ಯತ್ಯಾಸ ನಿರೀಕ್ಷಿತ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿದರ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿದರ

ಬುಧವಾರ(ನವೆಂಬರ್ 28) 10ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 28,600ರು ನಷ್ಟಿದೆ. 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 30,560ರು ನಷ್ಟಿದೆ. ನ.27ರಂದು 28,800(22 carat) ಹಾಗೂ 30,760ರು(24Carat) ನಷ್ಟಿತ್ತು.

ಬೆಳ್ಳಿದರ ಬುಧವಾರ(ನ.28)ದಂದು 1 ಕೆಜಿಗೆ 41,000ರು ನಷ್ಟಿದೆ. ಅ.27ರಂದು 1 ಕೆಜಿಗೆ 41,250ರು ನಷ್ಟಿತ್ತು.

ದೆಹಲಿಯಲ್ಲಿ ಚಿನ್ನ, ಬೆಳ್ಳಿ ದರ

ದೆಹಲಿಯಲ್ಲಿ ಚಿನ್ನ, ಬೆಳ್ಳಿ ದರ

ದೆಹಲಿಯಲ್ಲಿ 290 ರೂಪಾಯಿ ಇಳಿಕೆ ಕಂಡ ಬಂಗಾರದ ಬೆಲೆ 10 ಗ್ರಾಂಗೆ 31,560 ರೂಪಾಯಿಯಾಗಿದೆ. ಬೆಳ್ಳಿ 200 ರೂಪಾಯಿ ಕಡಿಮೆಯಾಗಿ 37,100 ರೂಪಾಯಿ ಪ್ರತಿ ಕೆ.ಜಿ. ಯಾಗಿದೆ.

ದೆಹಲಿಯಲ್ಲಿ ಶೇಕಡಾ 99.9 ಹಾಗೂ ಶೇಕಡಾ 99.5ರಷ್ಟು ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ ತಲಾ 31,560 ರೂಪಾಯಿ ಮತ್ತು 31,410 ರೂಪಾಯಿಯಾಗಿದೆ.

ಚೆನ್ನೈನಲ್ಲಿ ಚಿನ್ನ, ಬೆಳ್ಳಿ ದರ

ಚೆನ್ನೈನಲ್ಲಿ ಚಿನ್ನ, ಬೆಳ್ಳಿ ದರ

ಬುಧವಾರ(ನವೆಂಬರ್ 28) 10ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 29,120ರು ನಷ್ಟಿದೆ. 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 30,680ರು ನಷ್ಟಿದೆ. ನ.27ರಂದು 29,340(22 carat) ಹಾಗೂ 30,880ರು(24Carat) ನಷ್ಟಿತ್ತು.

ಬೆಳ್ಳಿದರ ಬುಧವಾರ(ನ.28)ದಂದು 1 ಕೆಜಿಗೆ 41,000ರು ನಷ್ಟಿದೆ. ಅ.27ರಂದು 1 ಕೆಜಿಗೆ 41,250ರು ನಷ್ಟಿತ್ತು.

ಮುಂಬೈನಲ್ಲಿ ಚಿನ್ನ, ಬೆಳ್ಳಿ ದರ

ಮುಂಬೈನಲ್ಲಿ ಚಿನ್ನ, ಬೆಳ್ಳಿ ದರ

ಬುಧವಾರ(ನವೆಂಬರ್ 28) 10ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 29,950ರು ನಷ್ಟಿದೆ. 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 31,800ರು ನಷ್ಟಿದೆ. ನ.27ರಂದು 30,150(22 carat) ಹಾಗೂ 32,000ರು(24Carat) ನಷ್ಟಿತ್ತು.

ಬೆಳ್ಳಿದರ ಬುಧವಾರ(ನ.28)ದಂದು 1 ಕೆಜಿಗೆ 41,000ರು ನಷ್ಟಿದೆ. ಅ.27ರಂದು 1 ಕೆಜಿಗೆ 41,250ರು ನಷ್ಟಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Muted demand from jewellers and weak global cues sent domestic gold prices sharply lower today(Nov 28). Gold prices today fell Rs 290 to Rs 31,560 per 10 grams. Tracking gold, silver rates too slumped Rs 200 to Rs 37,100 per kg.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more