ದಾಖಲೆಯ ಗಡಿ ಮುಟ್ಟಿದ್ದ ಚಿನ್ನದ ಬೆಲೆ ಸತತ 3ನೇ ಇಳಿಕೆ
ನವದೆಹಲಿ, ಜೂನ್ 26:ಭಾರತೀಯ ಮಾರುಕಟ್ಟೆಯಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದ ಚಿನ್ನದ ಬೆಲೆ ಇಂದು ಆರಂಭಿಕ ವಹಿವಾಟಿನಲ್ಲಿ ಕಡಿಮೆಯಾಗಿ, ಮೂರನೇ ದಿನಕ್ಕೆ ಇಳಿಮುಖವಾಗಿದೆ.
ವಿಶ್ವದಾದ್ಯಂತಕ ಕೊರೊನಾವೈರಸ್ ಪ್ರಕರಣಗಳ ಕಳವಳ ಜಾಗತಿಕ ದರಗಳನ್ನು ಬೆಂಬಲಿಸುವುದರಿಂದ ನಷ್ಟಗಳು ಮಧ್ಯಮವಾಗಿದೆ. ಎಂಸಿಎಂಕ್ಸ್ನಲ್ಲಿ ಚಿನ್ನವು 10 ಗ್ರಾಂಗೆ 0.02% ನಷ್ಟು ಇಳಿದು, 47,930 ರುಪಾಯಿಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಚಿನ್ನವು 0.3% ನಷ್ಟು ಕುಸಿದಿದೆ.
ಎಸ್ಬಿಐ ಚಿನ್ನದ ಹಣಗಳಿಸುವ ಯೋಜನೆ: 13,212 ಕೆ.ಜಿ ಚಿನ್ನ ಸಂಗ್ರಹ
ಎಂಸಿಎಕ್ಸ್ನ ಭವಿಷ್ಯವು ಪ್ರತಿ ಕೆಜಿಗೆ 0.1% ಇಳಿಕೆಯಾಗಿ, 48,075 ಕ್ಕೆ ತಲುಪಿದ್ದು, ಬೆಳ್ಳಿ ದರಗಳು ಇಂದು ಅಲ್ಪ ಪ್ರಮಾಣದಲ್ಲಿ ಕುಸಿದಿವೆ. ಈ ವಾರ ಭಾರತದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ದಾಖಲೆಯ ಗರಿಷ್ಠ, 48,589 ಕ್ಕೆ ತಲುಪಿದೆ.
ಜಾಗತಿಕ ಮಾರುಕಟ್ಟೆಗಳಲ್ಲಿ, ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತದ ಕೊರೊನಾವೈರಸ್ ಪ್ರಕರಣಗಳ ಹೆಚ್ಚಳದಿಂದಾಗಿ ಬಾಂಡ್ಗಳು ಮತ್ತು ಚಿನ್ನದಂತಹ ಸುರಕ್ಷಿತ ಸ್ವತ್ತುಗಳನ್ನು ಆಯ್ಕೆ ಮಾಡಲು ಹೂಡಿಕೆದಾರರನ್ನು ಉತ್ತೇಜಿಸಿದೆ. ಸ್ಪಾಟ್ ಚಿನ್ನವು 1 ಔನ್ಸ್ಗೆ 0.1% ಏರಿಕೆಯಾಗಿ 1,763.48 ಕ್ಕೆ ತಲುಪಿದೆ. ಈ ವಾರದವರೆಗೆ, ಚಿನ್ನವು 1% ಕ್ಕಿಂತ ಹೆಚ್ಚಾಗಿದೆ. ಈ ವಾರದ ಆರಂಭದಲ್ಲಿ ಬೆಲೆಗಳು ಎಂಟು ವರ್ಷಗಳ ಗರಿಷ್ಠ ಔನ್ಸ್ಗೆ 1,779.06 ರು.ರಷ್ಟಿದೆ.
SBI ಚಿನ್ನದ ಮೇಲಿನ ಸಾಲ ಯೋಜನೆ: ಬಡ್ಡಿದರ, ಅರ್ಹತೆ, ಪಾವತಿ ಆಯ್ಕೆಯ ಕುರಿತು ಮಾಹಿತಿ ಇಲ್ಲಿದೆ
ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಎರಡನೇ ಸುತ್ತಿನ ಪರಿಣಾಮಗಳು ಜಪಾನಿನ ಆರ್ಥಿಕತೆಗೆ ಪರಿಣಾಮ ಬೀರಬಹುದು ಎಂದು ಗವರ್ನರ್ ಹರುಹಿಕೋ ಕುರೊಡಾ ಹೇಳಿದ ನಂತರ ಬ್ಯಾಂಕ್ ಆಫ್ ಜಪಾನ್ನಿಂದ ಮತ್ತಷ್ಟು ಪ್ರಚೋದನೆಯ ನಿರೀಕ್ಷೆಗಳು ಹೆಚ್ಚಾದವು.