ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆಯಲ್ಲಿ ಮತ್ತಷ್ಟು ಕುಸಿತ: 3 ದಿನದಲ್ಲಿ 1800 ರೂ. ಇಳಿಕೆ

|
Google Oneindia Kannada News

ನವದೆಹಲಿ, ನವೆಂಬರ್ 25: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಇಳಿಕೆ ಮುಂದುವರಿದಿದ್ದು, ಬುಧವಾರ ಹಳದಿ ಲೋಹ ಮತ್ತಷ್ಟು ದುರ್ಬಲಗೊಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ರಿಸ್ಕ್‌ ರ್ಯಾಲಿಯ ನಡುವೆ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತ ಮೂರನೇ ದಿನವೂ ಇಳಿಮುಖಗೊಂಡಿದೆ.

Recommended Video

ಚಿನ್ನದ ಮೇಲೆ ಇನ್ವೆಸ್ಟ್ ಮಾಡೋದಕ್ಕೆ ಒಳ್ಳೆ ಸಮಯ | Oneindia Kannada

ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇ. 0.21ರಷ್ಟು ಕುಸಿದು 48,485 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ 59,460 ರೂಪಾಯಿಗೆ ಇಳಿದಿದೆ. ಹಿಂದಿನ ಎರಡು ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ತೀವ್ರ ಕುಸಿದಿದ್ದು, ಹಿಂದಿನ ವಹಿವಾಟಿನಲ್ಲಿ ಚಿನ್ನದ ಭವಿಷ್ಯ 900 ರೂಪಾಯಿ ಕುಸಿದಿದ್ದು, ಮಂಗಳವಾರದ 750 ರೂ. ಇಳಿಕೆಯನ್ನು ವಿಸ್ತರಿಸಿದೆ.

 ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ: ಬೆಳ್ಳಿ ದರದಲ್ಲೂ ಇಳಿಕೆ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ: ಬೆಳ್ಳಿ ದರದಲ್ಲೂ ಇಳಿಕೆ

ಇನ್ನು ಮಂಗಳವಾರ ಬೆಳ್ಳಿ ಕೆಜಿಗೆ ಬರೋಬ್ಬರಿ 1,600 ಕುಸಿತದ ನಂತರ 800 ರೂಪಾಯಿ ಕುಸಿತ ಮುಂದುವರಿಸಿದೆ. ದುರ್ಬಲಗೊಂಡ ಡಾಲರ್‌ನಿಂದಾಗಿ ಹಳದಿ ಲೋಹ ಮತ್ತು ಬೆಳ್ಳಿ ನಾಲ್ಕು ತಿಂಗಳಿಗಿಂತಲೂ ಕಡಿಮೆ ಮಟ್ಟಕ್ಕೆ ತಲುಪಿದೆ.

Gold Prices Fall again, down Rs 1800 in 3 Days, Silver Rates Drop

ಇದರ ಜೊತೆಗೆ ಸ್ಪಾಟ್ ಚಿನ್ನವು ಔನ್ಸ್‌ಗೆ ಶೇ. 0.1ರಷ್ಟು ಏರಿಕೆಯಾಗಿ 1,809.41 ಡಾಲರ್‌ಗೆ ತಲುಪಿದೆ. ಇದು ಜುಲೈ 17 ರ ನಂತರದ ಕನಿಷ್ಠ ಮಟ್ಟವಾಗಿದೆ. ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಔನ್ಸ್‌ಗೆ ಶೇ. 0.2ರಷ್ಟು ಏರಿಕೆಗೊಂಡು 23.29 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಶೇ. 0.2ರಷ್ಟು ಕುಸಿದು 959.64 ಡಾಲರ್‌ಗೆ ತಲುಪಿದೆ.

ಅಮೆರಿಕಾ ಚುನಾಯಿತ ಅಧ್ಯಕ್ಷ ಜೋ ಬಿಡೆನ್ ಅವರ ಔಪಚಾರಿಕ ಅನುಮೋದಿತ ಪರಿವರ್ತನೆ ಸುಗಮಗೊಂಡಿದ್ದು, ಸಂಭವನೀಯ ಕೋವಿಡ್-19 ಲಸಿಕೆಯ ಸಕಾರಾತ್ಮಕ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಷೇರುಪೇಟೆಯಲ್ಲಿ ಭಾರೀ ಏರಿಕೆಗೆ ಕಾರಣವಾಗಿದೆ. ಅದರಲ್ಲೂ ಏಷ್ಯಾದ ಮಾರುಕಟ್ಟೆಗಳು ಏರುಮುಖದತ್ತ ಸಾಗಿವೆ.

English summary
Gold and silver prices in India Fall again on wednesday. Silver Rate Drops again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X