ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ ಏರಿಕೆ ನಂತರ ಬಂಗಾರದ ಬೆಲೆಯಲ್ಲಿ ಇಳಿಕೆ, ಬೆಳ್ಳಿ ಏರಿಕೆ

|
Google Oneindia Kannada News

ನವದೆಹಲಿ, ಜನವರಿ 04: ಆಭರಣ ತಯಾರಕರ ಬೇಡಿಕೆ, ರುಪಾಯಿ ಮೌಲ್ಯದಲ್ಲಿ ಚೇತರಿಕೆಯೊಂದಿಗೆ ಸತತ ಮೂರು ದಿನಗಳ ಕಾಲ ಏರಿಕ ಕಂಡಿದ್ದ ಚಿನ್ನದ ಬೆಲೆಯಲ್ಲಿ ಶುಕ್ರವಾರದಂದು ಇಳಿಕೆ ಕಂಡು ಬಂದಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದ್ದು, ಪ್ರತಿ ಕೆಜಿಗೆ 40,000 ರುಪಾಯಿಯಂತೆ ವಹಿವಾಟು ನಡೆಸಿದೆ.

ದೆಹಲಿ ಚಿನಿವಾರ ಪೇಟೆಯಲ್ಲಿ ಶುಕ್ರವಾರದಂದು ಚಿನ್ನದ ಬೆಲೆ 145 ರೂಪಾಯಿ ಇಳಿಕೆ ಕಂಡಿದೆ. 10 ಗ್ರಾಂ ಬಂಗಾರದ ಬೆಲೆ 32,690 ರೂಪಾಯಿ ನಷ್ಟಿದೆ. ಬೆಳ್ಳಿ ಬೆಲೆಯಲ್ಲಿ 440 ರು ಏರಿಕೆ ಕಂಡಿದ್ದು, ಪ್ರತಿ ಕೆಜಿಗೆ 40,140 ರು ನಷ್ಟಿದೆ.

ಹೊಸ ವರ್ಷದ ಆರಂಭದಲ್ಲಿ ಚಿನ್ನ, ಬೆಳ್ಳಿ ಬೆಲೆ ಸತತ ಏರಿಕೆ ಹೊಸ ವರ್ಷದ ಆರಂಭದಲ್ಲಿ ಚಿನ್ನ, ಬೆಳ್ಳಿ ಬೆಲೆ ಸತತ ಏರಿಕೆ

ಕೈಗಾರಿಕಾ ಘಟಕಗಳು ಹಾಗೂ ನಾಣ್ಯ ತಯಾರಕರ ಬೇಡಿಕೆ ಹೆಚ್ಚಾಗಿದ್ದು, ಹೀಗಾಗಿ, ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಹಾಗೂ ತಗ್ಗಿದ ಬೇಡಿಕೆ ಚಿನ್ನದ ಬೆಲೆಯಲ್ಲಿ ಸತತ ಕುಸಿತ ಕಂಡಿದೆ.

Gold prices fall after 3 days but silver rates top Rs 40,000

ದೆಹಲಿ ಮಾರುಕಟ್ಟೆಯಲ್ಲಿ ಶೇಕಡಾ 99.9 ಹಾಗೂ ಶೇಕಡಾ 99.5ರಷ್ಟು ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 145 ರೂಪಾಯಿ ಏರಿಕೆ ಕಂಡು 32,690 ರೂ. ಮತ್ತು 32,540 ರೂಪಾಯಿಯಾಗಿದೆ. ಸವರನ್ ಚಿನ್ನ 8 ಗ್ರಾಂ ಬೆಲೆ ಖರೀದಿಗೆ 76,000 ರು ಹಾಗೂ 100 ತುಂಡುಗಳ ಬೆಲೆ ಮಾರಾಟಕ್ಕೆ 77,000 ರು ನಂತೆ ವಹಿವಾಟು ನಡೆಸಿದೆ.

ಸತತ ಎರಡು ದಿನಗಳಿಂದ ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ ಸತತ ಎರಡು ದಿನಗಳಿಂದ ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ 0.2ರಷ್ಟು ಏರಿಕೆ ಕಂಡು ಪ್ರತಿ ಔನ್ಸಿಗೆ 1,295.55 ರು ನಷ್ಟಿದೆ.

English summary
Gold prices fell today, snapping three days of gains, amid a strengthening rupee and muted demand from jewellers. But silver rates continued their rising streak, topping the Rs 40,000 mark on increased demand from industrial units and coin makers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X