ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಕೊಂಚ ಏರಿಕೆ: ಆಗಸ್ಟ್‌ನ ಗರಿಷ್ಠಕ್ಕಿಂತ 7,500 ರೂ. ಕಡಿಮೆ

|
Google Oneindia Kannada News

ನವದೆಹಲಿ, ನವೆಂಬರ್ 26: ಭಾರತೀಯ ಮಾರುಕಟ್ಟೆಗಳಲ್ಲಿ ಸತತ ಇಳಿಕೆಯತ್ತ ಮುಖ ಮಾಡಿದ್ದ ಹಳದಿ ಲೋಹದ ಬೆಲೆ ಗುರುವಾರ ಕೊಂಚ ಏರಿಕೆ ದಾಖಲಿಸಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇಕಡಾ 0.17ರಷ್ಟು ಏರಿಕೆಗೊಂಡು 48,594 ರೂಪಾಯಿಗೆ ತಲುಪಿದೆ.

ಚಿನ್ನದ ಜೊತೆಗೆ ಬೆಳ್ಳಿ ಬೆಲೆಯು ಕೂಡ ಕೆಜಿಗೆ ಶೇಕಡಾ 0.34ರಷ್ಟು ಹೆಚ್ಚಳಗೊಂಡು 60,045 ರೂಪಾಯಿಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಚಿನ್ನದ ಬೆಲೆ ಸ್ವಲ್ಪಮಟ್ಟಿಗೆ ಕುಸಿತಗೊಂಡಿತ್ತು ಬೆಳ್ಳಿ ಬೆಲೆಗಳು ಶೇಕಡಾ 0.25ರಷ್ಟು ಏರಿಕೆ ದಾಖಲಿಸಿತ್ತು.

 ಬಂಗಾರದ ಬೆಲೆ ಮತ್ತಷ್ಟು ಕುಸಿತ: 10 ಗ್ರಾಂಗೆ ಎಷ್ಟು ರೂ. ಇಳಿಕೆ? ಬಂಗಾರದ ಬೆಲೆ ಮತ್ತಷ್ಟು ಕುಸಿತ: 10 ಗ್ರಾಂಗೆ ಎಷ್ಟು ರೂ. ಇಳಿಕೆ?

ಈ ವಾರದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,600 ರೂಪಾಯಿಗೂ ಅಧಿಕ ಇಳಿಕೆ ಕಂಡಿದೆ. ಆಗಸ್ಟ್‌ನಲ್ಲಿ ಚಿನ್ನದ ಬೆಲೆ ಗರಿಷ್ಠ 10 ಗ್ರಾಂಗೆ 56,200 ರೂಪಾಯಿವರೆಗೂ ಏರಿಕೆ ಕಂಡಿತ್ತು. ಬುಧವಾರ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 600 ರೂಪಾಯಿ ಇಳಿಕೆಗೊಂಡು 47,650 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 650 ರೂಪಾಯಿ ಕುಸಿದು 51,980 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 60,000 ರೂ. ಗಡಿ ಮುಟ್ಟಿದೆ.

Gold Prices Edge Higher: Down Rs 7,500 From August Highs

ಕೋವಿಡ್-19 ಲಸಿಕೆಯ ಸಕಾರಾತ್ಮಕ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಷೇರುಪೇಟೆ ಹಾಗೂ ಹಳದಿ ಲೋಹದ ಮೇಲೆ ಪರಿಣಾಮ ಬೀರಿದೆ.

English summary
Gold and silver prices in India Rose up marginally on Thursday. Silver Rate advanced Rs 60,045 per KG
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X