ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ 4ನೇ ದಿನ ಚಿನ್ನದ ಬೆಲೆ ಇಳಿಕೆ: ಕಳೆದ 7 ವರ್ಷಗಳಲ್ಲಿ ಭಾರೀ ಕುಸಿತ

|
Google Oneindia Kannada News

ನವದೆಹಲಿ, ಆಗಸ್ಟ್‌ 13: ಜಾಗತಿಕ ಮಾರುಕಟ್ಟೆಯಲ್ಲಿ ಆಗಸದತ್ತ ಸಾಗಿದ್ದ ಹಳದಿ ಲೋಹದ ಬೆಲೆ ಸತತ ನಾಲ್ಕನೇ ದಿನ ಕುಸಿತ ಕಂಡಿದ್ದು, ಕಳೆದ ಏಳು ವರ್ಷದಲ್ಲೇ ಕಾಣದ ಭಾರೀ ಕುಸಿತವನ್ನು ದಾಖಲಿಸಿದೆ. ಗುರುವಾರ ಜಾಗತಿಕ ಮಾರುಕಟ್ಟೆಗಳಲ್ಲಿನ ಚೇತರಿಕೆಯ ಮಧ್ಯೆ ಭಾರತೀಯ ಸರಕು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ದಾಖಲಿಸಿದರೂ, ಮತ್ತೆ ಇಳಿಕೆ ಕಂಡಿದೆ.

ಎಂಸಿಎಕ್ಸ್‌ನಲ್ಲಿ ಅಕ್ಟೋಬರ್ ಚಿನ್ನದ ಭವಿಷ್ಯವು 10ಗ್ರಾಂ ಶೇ. 0.4ರಷ್ಟು ಅಂದರೆ 52,036 ರೂಪಾಯಿ ಕುಸಿದಿದೆ. ಇದು ಕಳೆದ ಮೂರು ದಿನಗಳಲ್ಲಿ ಕಂಡಂತಹ ಎರಡನೇ ಕುಸಿತವಾಗಿದೆ. ಎಂಸಿಎಕ್ಸ್‌ನಲ್ಲಿ ಬೆಳ್ಳಿ ಭವಿಷ್ಯವು ಪ್ರತಿ ಗ್ರಾಂಗೆ ಶೇ. 0.4ರಷ್ಟು ಏರಿಕೆಗೆ 67050 ಕ್ಕೆ ತಲುಪಿದೆ.

ಕುಸಿಯುತ್ತಲೇ ಸಾಗಿದೆ ಚಿನ್ನದ ಬೆಲೆ

ಕುಸಿಯುತ್ತಲೇ ಸಾಗಿದೆ ಚಿನ್ನದ ಬೆಲೆ

ಹೌದು, ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಭಾರೀ ಕುಸಿತಕ್ಕೆ ಸಾಕ್ಷಿಯಾಗಿದೆ. ಸೋಮವಾರ ಮೊದಲ ಬಾರಿಗೆ ಕೊಂಚ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಮಂಗಳವಾರ, ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಸುಮಾರು ಶೇ. 6 ಅಥವಾ, 3,200 ರೂಪಾಯಿ ಕುಸಿದಿದೆ. ಬುಧವಾರವೂ ಕೂಡ 22 ಕ್ಯಾರೆಟ್ ಚಿನ್ನ 10 ಗ್ರಾಂ 3,200 ರೂಪಾಯಿ ಕಡಿತಗೊಂಡು 50,250 ರೂಪಾಯಿಗೆ ಇಳಿಕೆಯಾಗಿದೆ. ಶುದ್ಧ ಚಿನ್ನವು 10 ಗ್ರಾಂ 200 ರೂಪಾಯಿ ಇಳಿಕೆಗೊಂಡು 54,500 ರೂಪಾಯಿ ದಾಖಲಿಸಿತ್ತು. ಕಳೆದ ವಾರ ಚಿನ್ನವು 56,000 ರೂಪಾಯಿ ದಾಟಿದೆ.

ಅಬ್ಬಾ..! ಚಿನ್ನದ ಬೆಲೆ ಭಾರೀ ಇಳಿಕೆ: ಎಷ್ಟು ಕಮ್ಮಿ ಆಗಿದೆ?ಅಬ್ಬಾ..! ಚಿನ್ನದ ಬೆಲೆ ಭಾರೀ ಇಳಿಕೆ: ಎಷ್ಟು ಕಮ್ಮಿ ಆಗಿದೆ?

ಏಳು ವರ್ಷಗಳಲ್ಲೇ ಭಾರೀ ಕುಸಿತ ಕಂಡ ಜಾಗತಿಕ ಮಾರುಕಟ್ಟೆ

ಏಳು ವರ್ಷಗಳಲ್ಲೇ ಭಾರೀ ಕುಸಿತ ಕಂಡ ಜಾಗತಿಕ ಮಾರುಕಟ್ಟೆ

ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏಳು ವರ್ಷಗಳಲ್ಲಿ ಭೀಕರ ಕುಸಿತವನ್ನು ದಾಖಲಿಸಿವೆ. ಗುರುವಾರ ಅಧಿವೇಶನದಲ್ಲಿ ಶೇ. 1ರಷ್ಟು ಹೆಚ್ಚಿನ ವಹಿವಾಟು ನಡೆಸಿದವು. ದುರ್ಬಲ ಡಾಲರ್ ಇತರ ಕರೆನ್ಸಿಗಳನ್ನು ಹೊಂದಿರುವವರಿಗೆ ಚಿನ್ನ ಅಗ್ಗವಾಗಿಸಿದೆ. ಡಾಲರ್ ಸೂಚ್ಯಂಕ ಇಂದು ಪ್ರತಿಸ್ಪರ್ಧಿಗಳ ವಿರುದ್ಧ ಶೇ. 0.2ರಷ್ಟು ಕುಸಿದಿದೆ.

ಅಮೆರಿಕಾ-ಚೀನಾ ನಡುವಿನ ಹೆಚ್ಚಿದ ತಿಕ್ಕಾಟ

ಅಮೆರಿಕಾ-ಚೀನಾ ನಡುವಿನ ಹೆಚ್ಚಿದ ತಿಕ್ಕಾಟ

ಅಮೆರಿಕಾ-ಚೀನಾ ಉದ್ವಿಗ್ನತೆ ಮತ್ತು ಡಾಲರ್‌ನಲ್ಲಿನ ತಿದ್ದುಪಡಿ ಸುರಕ್ಷಿತ ಹೂಡಿಕೆಯಾಗಿದ್ದ ಚಿನ್ನದ ಮೇಲಿನ ಲಾಭದ ಬುಕ್ಕಿಂಗ್‌ಗೆ ಕಾರಣವಾಗಿದೆ. ಚೀನಿ ಅಪ್ಲಿಕೇಶನ್‌ಗಳ ನಿಷೇಧದ ನಂತರ ವಿಶ್ವದ ಎರಡು ಬೃಹತ್ ಆರ್ಥಿಕತೆಗಳ ನಡುವಿನ ಉದ್ವಿಗ್ನತೆ ಹೆಚ್ಚಿದೆ. ಹೂಡಿಕೆದಾರರು ಆಗಸ್ಟ್ 15, 2020 ರಂದು ನಿಗದಿಯಾದ ಯುಎಸ್-ಚೀನಾ ಪ್ರಮುಖ ವ್ಯಾಪಾರ ಮಾತುಕತೆಗಳ ಮೇಲೆ ನಿಗಾ ಇಟ್ಟಿದ್ದಾರೆ.

ಕೊನೆಗೂ ಇಳಿಕೆ ಹಾದಿ ಹಿಡಿದ ಚಿನ್ನದ ಬೆಲೆ: ಯಾವ ನಗರಗಳಲ್ಲಿ ಎಷ್ಟಿದೆ?ಕೊನೆಗೂ ಇಳಿಕೆ ಹಾದಿ ಹಿಡಿದ ಚಿನ್ನದ ಬೆಲೆ: ಯಾವ ನಗರಗಳಲ್ಲಿ ಎಷ್ಟಿದೆ?

ಷೇರು ಮಾರುಕಟ್ಟೆ ಮೇಲೆ ಹೂಡಿಕೆದಾರರ ಒಲವು

ಷೇರು ಮಾರುಕಟ್ಟೆ ಮೇಲೆ ಹೂಡಿಕೆದಾರರ ಒಲವು

ಕೊರೊನಾವೈರಸ್ ಸಾಂಕ್ರಾಮಿಕದಿಂದಾಗಿ ಆಗಿದ್ದ ವಿಶ್ವವ್ಯಾಪಿ ಲಾಕ್‌ಡೌನ್ ಹಾಗೂ ಆರ್ಥಿಕತೆ ಮೇಲಿನ ಪರಿಣಾಮದಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆ ವಲಯ ಚಿನ್ನದತ್ತ ಒಲವು ತೋರಿದ್ದರು. ಹೀಗಾಗಿ ಚಿನ್ನದ ಬೆಲೆಯು ದಿನೇ ದಿನೇ ಏರತೊಡಗಿ 56 ಸಾವಿರ ಗಡಿ ದಾಟಿತ್ತು.

ಆದರೆ ಜಾಗತಿಕವಾಗಿ ಕೊರೊನಾ ಲಸಿಕೆ ಸೇರಿದಂತೆ ಆರ್ಥಿಕತೆ ಚೇತರಿಕೆ ಹಾದಿಗೆ ಮರಳುವ ಮುನ್ಸೂಚನೆ ಸಿಕ್ಕ ಮೇಲೆ ಹೂಡಿಕೆದಾರರು ಷೇರು ಮಾರುಕಟ್ಟೆ ಮೇಲೆ ನಿಧಾನವಾಗಿ ಹಣ ಹೂಡಲು ಆರಂಭಿಸಿದ್ದಾರೆ. ಇದರಿಂದಾಗಿ ಗಗನಕ್ಕೇರಿದ ಚಿನ್ನದ ಬೆಲೆಯು ದಿಢೀರ್ ಕುಸಿತದ ಹಾದಿ ಹಿಡಿದಿದೆ.

English summary
gold and silver prices recouped from the worst fall in seven years and traded 1% higher on Thursday's session as bleak economic data strengthened concerns over economic slowdown due to the Covid-19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X