ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ದಿನ ಇಳಿಕೆಗೊಂಡಿದ್ದ ಚಿನ್ನದ ಬೆಲೆ ಏರಿಕೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 07: ಭಾರತೀಯ ಮಾರುಕಟ್ಟೆಯಲ್ಲಿ ಮೂರು ದಿನಗಳ ನಷ್ಟದ ಬಳಿಕ ಸೋಮವಾರ ಚಿನ್ನದ ಬೆಲೆ ಏರಿಕೆ ದಾಖಲಿಸಿದೆ. ಎಂಸಿಎಕ್ಸ್‌ನಲ್ಲಿ, ಅಕ್ಟೋಬರ್ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.25ರಷ್ಟು ಏರಿಕೆ ಕಂಡು 50,805 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ಭವಿಷ್ಯವು ಶೇಕಡಾ 1.3ರಷ್ಟು ಜಿಗಿದು ಪ್ರತಿ ಕೆಜಿಗೆ 68,120 ಕ್ಕೆ ತಲುಪಿದೆ.

ಹಿಂದಿನ ವಹಿವಾಟಿನಲ್ಲಿ, ಚಿನ್ನದ ಬೆಲೆಗಳು ಶೇಕಡಾ 0.1ರಷ್ಟು ನಷ್ಟು ಕುಸಿದಿದ್ದರೆ, ಬೆಳ್ಳಿ ದರಗಳು 0.8ರಷ್ಟು ಹೆಚ್ಚಾಗಿದೆ. ಭಾರತದಲ್ಲಿ, ಆಗಸ್ಟ್ 7 ರಂದು ಚಿನ್ನವು 10 ಗ್ರಾಂಗೆ, 56,200 ರೂಪಾಯಿ ದಾಖಲೆಯಾಗಿದೆ. ಆ ಗರಿಷ್ಠ ಮಟ್ಟದಿಂದ, ಚಿನ್ನವು ಈಗ 10 ಗ್ರಾಂಗೆ 5,000 ರೂಪಾಯಿಗಿಂತ ಕಡಿಮೆಯಾಗಿದೆ. ಮತ್ತೊಂದೆಡೆ, ಬೆಳ್ಳಿ ಹಿಂದಿನ ತಿಂಗಳ ಗರಿಷ್ಠಕ್ಕಿಂತ ಪ್ರತಿ ಕೆಜಿಗೆ 10,000 ರೂಪಾಯಿಗಿಂತಲೂ ಕಡಿಮೆಯಾಗಿದೆ.

ಇಂದು ಚಿನ್ನದ ಬೆಲೆ ಎಷ್ಟು ಏರಿಳಿತಗೊಂಡಿದೆ: ಪ್ರಮುಖ ನಗರಗಳ ದರ ಇಲ್ಲಿದೆಇಂದು ಚಿನ್ನದ ಬೆಲೆ ಎಷ್ಟು ಏರಿಳಿತಗೊಂಡಿದೆ: ಪ್ರಮುಖ ನಗರಗಳ ದರ ಇಲ್ಲಿದೆ

ಜಾಗತಿಕ ಮಾರುಕಟ್ಟೆಗಳಲ್ಲಿ, ಚಿನ್ನದ ಬೆಲೆಗಳು ಇಂದು ಹೆಚ್ಚಿನ ಮಟ್ಟದಲ್ಲಿವೆ. ಆದರೆ ಯುಎಸ್ ಡಾಲರ್‌ನಿಂದ ಲಾಭಗಳನ್ನು ಗಳಿಸಲಾಗಿದೆ. ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.2ರಷ್ಟು ಏರಿಕೆಯಾಗಿ 1,935.53 ಡಾಲರ್‌ಗೆ ತಲುಪಿದೆ. ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಔನ್ಸ್‌ಗೆಗೆ 0.2ರಷ್ಟು ಇಳಿಕೆಯಾಗಿ, 26.84 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಶೇಕಡಾ 0.6ರಷ್ಟು ಏರಿಕೆಯಾಗಿ 900.01 ಡಾಲರ್‌ಗೆ ತಲುಪಿದೆ.

Gold Price Up After 3 Day Fall: Know More

''ಜಾಗತಿಕ ವೈರಸ್ ಪ್ರಕರಣಗಳು ಹೆಚ್ಚುತ್ತಲೇ ಇರುತ್ತವೆ ಮತ್ತು ಆರ್ಥಿಕ ಚೇತರಿಕೆಯ ಮೇಲೆ ಪರಿಣಾಮ ಬೀರುವ ಅಪಾಯವಿದೆ'' ಎಂದು ಕೋಟಕ್ ಸೆಕ್ಯುರಿಟೀಸ್ ಹೇಳಿದೆ.

ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವುದು ಮತ್ತು ಅಮೆರಿಕಾ-ಚೀನಾ ನಡುವಿನ ಉದ್ವಿಗ್ನತೆಯು ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

English summary
Gold prices in India snapped a three-day losing streak when they edged higher today. On MCX, October gold futures rose 0.25% to Rs 50,805 per 10 gram while silver futures jumped 1.3% to Rs 68,120 per kg.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X