ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಏರಿಕೆ : ಗರಿಷ್ಠ ಮಟ್ಟಕ್ಕಿಂತ ಇನ್ನೂ ಕಡಿಮೆ

|
Google Oneindia Kannada News

ನವದೆಹಲಿ, ಜನವರಿ 13: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಂದು ಆರಂಭಿಕ ವಹಿವಾಟಿನಲ್ಲಿ ಏರಿಕೆ ಕಂಡುಬಂದಿದೆ. ಎಂಸಿಎಕ್ಸ್‌ನಲ್ಲಿ ಫೆಬ್ರವರಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.74ರಷ್ಟು ಏರಿಕೆಗೊಂಡು, 49,410 ಕ್ಕೆ ತಲುಪಿದೆ. ಬೆಳ್ಳಿಯ ಬೆಲೆ ಶೇಕಡಾ 0.57ರಷ್ಟು ಹೆಚ್ಚಾಗಿ ಪ್ರತಿ ಕೆಜಿಗೆ 66,279 ಕ್ಕೆ ತಲುಪಿದೆ.

ಕಳೆದ ವಹಿವಾಟಿನಲ್ಲಿ ಚಿನ್ನದ ಬೆಲೆ ಶೇಕಡಾ 0.53ರಷ್ಟು ರಷ್ಟು ಕಡಿಮೆಯಾಗಿತ್ತು. ಅಮೆರಿಕಾ ಬಾಂಡ್ ಇಳುವರಿ ಹೆಚ್ಚಳ ಮತ್ತು ಡಾಲರ್‌ ಮೌಲ್ಯ ಹೆಚ್ಚಳದಿಂದಾಗಿ ರೂಪಾಯಿ ದುರ್ಬಲಗೊಂಡು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.

ಚಿನ್ನದ ಬೆಲೆ ಏರಿಳಿತ: ಕಳೆದ 4 ದಿನದಲ್ಲಿ ಯಾವ ನಗರಗಳಲ್ಲಿ ಎಷ್ಟಿದೆ?ಚಿನ್ನದ ಬೆಲೆ ಏರಿಳಿತ: ಕಳೆದ 4 ದಿನದಲ್ಲಿ ಯಾವ ನಗರಗಳಲ್ಲಿ ಎಷ್ಟಿದೆ?

ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.1ರಷ್ಟು ಏರಿಕೆಯಾಗಿ 1,856.86 ಡಾಲರ್‌ಗೆ ತಲುಪಿದೆ. ಯುಎಸ್ ಚುನಾಯಿತ ಅಧ್ಯಕ್ಷ ಜೋ ಬಿಡನ್ ಟ್ರಿಲಿಯನ್ ಡಾಲರ್ ಪ್ಯಾಕೇಜ್‌ ಯೋಜನೆಗಳನ್ನು ಬಿಡುಗಡೆ ಮಾಡಲು ಸಿದ್ಧರಾಗಿರುವುದರಿಂದ ಹಣದುಬ್ಬರ ನಿರೀಕ್ಷೆ ಹೆಚ್ಚಾಗುವುದೂ ಚಿನ್ನಕ್ಕೆ ಸಹಾಯ ಮಾಡಿದೆ.

Gold Price Today Up But Still Down Rs 6000 From Record Highs

ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಔನ್ಸ್‌ಗೆ 25.57 ಡಾಲರ್‌ನಷ್ಟಿದ್ದರೆ, ಪ್ಲಾಟಿನಂ ಶೇಕಡಾ 0.3ರಷ್ಟು ಏರಿಕೆ ಕಂಡು 1,078.80 ಡಾಲರ್‌ಗೆ ತಲುಪಿದೆ.

English summary
Gold and silver moved higher in Indian markets, tracking positive global cues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X