ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಸತತ 3ನೇ ದಿನ ಕುಸಿತ: ಬೆಳ್ಳಿ ಬೆಲೆ ಏರಿಕೆ

|
Google Oneindia Kannada News

ನವದೆಹಲಿ, ಜನವರಿ 25: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸತತ ಮೂರನೇ ದಿನವೂ ದುರ್ಬಲವಾಗಿ ಮುಂದುವರಿದಿದ್ದು, ಕುಸಿತ ಕಂಡಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.02ರಷ್ಟು ಇಳಿದು 49,131 ರೂಪಾಯಿಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಚಿನ್ನವು ಶೇಕಡಾ 0.5ರಷ್ಟು ಇಳಿಕೆ ಸಾಧಿಸಿದರೆ, ಬೆಳ್ಳಿ 0.9ರಷ್ಟು ಕುಸಿದಿತ್ತು.

ಒಂದೆಡೆ ಚಿನ್ನದ ಬೆಲೆ ಇಳಿಕೆ ಮುಂದುವರಿಸಿದರೆ, ಇಂದು ಎಂಸಿಎಕ್ಸ್‌ನಲ್ಲಿ ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇಕಡಾ 0.4ರಷ್ಟು ಏರಿಕೆ ಕಂಡು 66,885 ಕ್ಕೆ ತಲುಪಿದೆ. ಅಮೆರಿಕಾದಲ್ಲಿ ದೊಡ್ಡ ಆರ್ಥಿಕ ಪ್ಯಾಕೇಜ್‌ ಘೋಷಣೆಯಾಗುವ ನಿರೀಕ್ಷೆಯು ಹಳದಿ ಲೋಹದ ಮೇಲೆ ಪರಿಣಾಮ ಬೀರಿದೆ.

ಅಮೆರಿಕಾ ನೂತನ ಅಧ್ಯಕ್ಷರ ಪದಗ್ರಹಣದ ಬಳಿಕ ಹೊಸ ಆರ್ಥಿಕ ಪುನರುಜ್ಜೀವನಗೊಳಿಸಲಾಗುವುದು ಎಂಬ ಆಶಾವಾದವು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಕಳೆದ ವಹಿವಾಟಿನಲ್ಲಿ ಶೇಕಡಾ 0.9ರಷ್ಟು ಕುಸಿದ ನಂತರ ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.3ರಷ್ಟು ಏರಿಕೆಯಾಗಿ 1,858.57 ಡಾಲರ್‌ಗೆ ತಲುಪಿದೆ.

 Gold Price Today Fall For 3rd Day In A Row: Silver Rate Up

Recommended Video

ಆಸ್ಟ್ರೇಲಿಯಾ ನಾಯಕನ ರೀತಿಯಲ್ಲ ಈ ಇಂಗ್ಲೆಂಡ್ ನಾಯಕ | Oneindia Kannada

ಚಿನ್ನದ ಇಟಿಎಫ್, ಎಸ್‌ಪಿಡಿಆರ್ ಗೋಲ್ಡ್ ಟ್ರಸ್ಟ್ ಶೇಕಡಾ 0.07ರಷ್ಟು ಇಳಿಕೆಯಾಗಿ 1,173.25 ಟನ್‌ಗಳಿಗೆ ತಲುಪಿದೆ. ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಔನ್ಸ್‌ಗೆ ಶೇಕಡಾ 0.9ರಷ್ಟು ಏರಿಕೆ ಕಂಡು 25.61 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಶೇಕಡಾ 0.6ರಷ್ಟು ಏರಿಕೆ ಕಂಡು 1,105.06 ಡಾಲರ್‌ಗೆ ತಲುಪಿದೆ.

English summary
Gold prices in India continued to be weak for the third day in a row. Silver Rates edge Higher
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X