ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಭರಣ ಪ್ರಿಯರಿಗೆ ನಿರಾಸೆ, ಇಳಿಕೆಯಾಗದ ಚಿನ್ನದ ಬೆಲೆ

|
Google Oneindia Kannada News

ಭಾರತದ ಮಾರುಕಟ್ಟೆಯಲ್ಲಿ ಕಳೆದ ವಾರ ತೀವ್ರ ಕುಸಿತದ ನಂತರ ಚಿನ್ನದ ಬೆಲೆಯು ಏರಿಕೆ ದಾಖಲಿಸುತ್ತಿದ್ದು, ಹಬ್ಬ ಮುಗಿದರೂ ಮಂಗಳವಾರ ಹಳದಿ ಲೋಹದ ಬೆಲೆ ಏರಿಕೆಯತ್ತ ಮುಖಮಾಡಿದೆ.

ಎಂಸಿಎಕ್ಸ್‌ನಲ್ಲಿ, ಡಿಸೆಂಬರ್ ಚಿನ್ನವು 10 ಗ್ರಾಂಗೆ ಶೇ. 0.05ರಷ್ಟು ಏರಿಕೆ ಕಂಡು ಪ್ರತಿ ಗ್ರಾಂಗೆ 50,856 ಕ್ಕೆ ತಲುಪಿದ್ದರೆ, ಬೆಳ್ಳಿಯ ಭವಿಷ್ಯವು(ಫ್ಯೂಚರ್ಸ್) ಪ್ರತಿ ಕೆ.ಜಿ.ಗೆ 63,700 ರೂಪಾಯಿಗೆ ಸ್ಥಿರವಾಗಿದೆ. ಹಿಂದಿನ ಮಾರುಕಟ್ಟೆ ದಿನದ ಅಂತ್ಯಕ್ಕೆ ಚಿನ್ನದ ಬೆಲೆಗಳು ಸುಮಾರು ಶೇ. 0.2ರಷ್ಟು ಕಡಿಮೆಯಾಗಿದೆ. ಏಕೆಂದರೆ ರಜಾದಿನದ ಕಾರಣ ಬೆಳಿಗ್ಗೆ ಎಂಸಿಎಕ್ಸ್ ಮುಚ್ಚಲ್ಪಟ್ಟಿದೆ.

ಕಳೆದ ವಾರ, ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ ಪ್ರತಿ ಕೆ.ಜಿ.ಗೆ 1,200 ರೂಪಾಯಿ ಕುಸಿತ ಕಂಡಿತು. ಸಾಗರೋತ್ತರ ಮಾರುಕಟ್ಟೆಗಳಲ್ಲಿ ಕೋವಿಡ್ ಲಸಿಕೆ ಮೇಲಿನ ಆಶಾವಾದವು ಚಿನ್ನದ ಬೆಲೆಗಳ ಮೇಲೆ ಒತ್ತಡ ಹೇರಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ, ಚಿನ್ನದ ಬೆಲೆಗಳು ಇಂದು ಸ್ಥಿರವಾಗಿವೆ. ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಕುರಿತಾದ ಕಳವಳಗಳು, ಲಸಿಕೆ ಮೇಲಿನ ಆಶಾವಾದವು ಯುಎಸ್ ಮತ್ತು ಯುರೋ ಮೇಲಿನ ಒತ್ತಡವನ್ನು ಸರಿದೂಗಿಸಿದೆ.

Gold Price Today: After A Sharp Fall Last week, December Gold Rose Up

ಇನ್ನು ಇತ್ತೀಚೆಗೆ ಪ್ರಾಯೋಗಿಕ ಕೋವಿಡ್ ಲಸಿಕೆ ಶೇ. 94.5ರಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಿದ ಬಳಿಕವೂ ಚಿನ್ನದ ಬೆಲೆಯು, ಔನ್ಸ್‌ಗೆ 1,890.43 ಡಾಲರ್‌ನಂತೆ ಸ್ಥಿರವಾಗಿತ್ತು. ಈ ಮೂಲಕ ನವೆಂಬರ್‌ ತಿಂಗಳಿನಲ್ಲಿ ಕೊಂಚ ಮಟ್ಟಿಗೆ ಕಡಿಮೆಯಾಗಿದ್ದ ಚಿನ್ನದ ಬೆಲೆ ಹಬ್ಬದ ಸಮಯದಲ್ಲಿ ಕಡಿಮೆಯಾಗಬಹುದೇನೋ ಎಂಬ ಸಣ್ಣ ನಿರೀಕ್ಷೆಯನ್ನು ಆಭರಣಪ್ರಿಯರು ಇರಿಸಿದ್ದರು. ಆದರೆ ಗ್ರಾಹಕರ ನಿರೀಕ್ಷೆಯು ಹುಸಿಯಾಗಿದೆ.

English summary
Gold and silver prices in India struggled today after a sharp fall last week. On MCX, December gold rose 0.05% to Rs 50,856 per 10 gram
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X