ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಳಿಮುಖದತ್ತ ಸಾಗಿದ ಚಿನ್ನದ ಬೆಲೆ: ಆಭರಣ ಪ್ರಿಯರಿಗೆ ಸಂತಸ

|
Google Oneindia Kannada News

ನವದೆಹಲಿ, ನವೆಂಬರ್ 24: ಭಾರತೀಯ ಮಾರುಕಟ್ಟೆಗಳಲ್ಲಿ ಹಳದಿ ಲೋಹದ ಬೆಲೆ ಮತ್ತು ಬೆಳ್ಳಿಯ ಬೆಲೆಗಳು ಕುಸಿತವನ್ನು ಮುಂದುವರಿಸಿವೆ. ಕಳೆದ ಕೆಲವು ವಾರಗಳಿಂದ ಚಿನ್ನ ಮತ್ತು ಬೆಳ್ಳಿಯು ದುರ್ಬಲ ಪ್ರವೃತ್ತಿಯನ್ನು ಮುಂದುವರಿಸಿದೆ.

ಎಂಸಿಎಕ್ಸ್‌ನಲ್ಲಿ ಡಿಸೆಂಬರ್ ಚಿನ್ನದ ಭವಿಷ್ಯವು 10ಗ್ರಾಂಗೆ 450 ರೂಪಾಯಿ ಅಥವಾ ಶೇ. 0.9ರಷ್ಟು ಇಳಿದು, 49,051 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇ. 0.9ರಷ್ಟು ಅಥವಾ 550 ರೂ ಇಳಿಕೆಗೊಂಡು 59,980 ರೂಪಾಯಿಗೆ ತಲುಪಿದೆ.

ಕಳೆದ ದಿನದ ವಹಿವಾಟಿನಲ್ಲಿ ಚಿನ್ನದ ಬೆಲೆಗಳು 10 ಗ್ರಾಂಗೆ 750 ರೂಪಾಯಿ ಅಥವಾ ಶೇ. 1.5ರಷ್ಟು ಕುಸಿದಿದ್ದರೆ, ಪ್ರತಿ ಕೆಜಿಗೆ 1,628 ಅಥವಾ ಶೇ. 2.6ರಷ್ಟು ಕುಸಿದಿದೆ. ಜಾಗತಿಕ ಮಟ್ಟದಲ್ಲಿ ಕೋವಿಡ್-19 ಲಸಿಕೆಯ ಆಶಾವಾದವು ಇತ್ತೀಚೆಗೆ ಚಿನ್ನದ ದರಗಳನ್ನು ಕಳೆದ ನಾಲ್ಕು ತಿಂಗಳಲ್ಲಿ ಕಡಿಮೆ ಮಟ್ಟಕ್ಕೆ ಇಳಿಕೆಯಾಗಿದೆ.

Gold Price Fell Sharply Today: Silver Rates Tumbled Again

Recommended Video

Samsung ಭಾರತದಲ್ಲಿ ನೂತನವಾಗಿ 5 ಸಾವಿರ ಕೋಟಿ ಹೂಡಿಕೆ | Oneindia Kannada

ಇನ್ನು ಸ್ಪಾಟ್‌ ಚಿನ್ನವು ಔನ್ಸ್‌ಗೆ ಶೇ. 0.6ರಷ್ಟು ಇಳಿಕೆಯಾಗಿ 1,826.47 ಡಾಲರ್‌ಗೆ ತಲುಪಿದೆ. ಇದು ಜುಲೈ ನಂತರದಲ್ಲಿ ದಾಖಲಾದ ಅತ್ಯಂತ ಕಡಿಮೆ ಮಟ್ಟವಾದರೆ, ಬೆಳ್ಳಿ ಶೇ. 1.1ರಷ್ಟು ಹಾಗೂ ಪ್ಲ್ಯಾಟಿನಂ ಶೇ. 0.5ರಷ್ಟು ಬೆಲೆಯಲ್ಲಿ ಬದಲಾವಣೆಯಾಗಿದೆ.

English summary
Gold and silver prices in India edged lower on Tuesday. Silver Rate had tumbled again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X